ಬ್ಲ್ಯಾಕ್ ಬೆರ್ರಿ ಸಿಡಿಎಂಎ ಸ್ಮಾರ್ಟ್ ಫೋನ್ ಬೇಕಾ?

RIM BlackBerry Phones
ಮುಂಬೈ, ಏ.26: ಜಾಗತಿಕ ಮಾರುಕಟ್ಟೆಯಲ್ಲಿ ಸಿಡಿಎಂಎಗೆ ಬೇಡಿಕೆ ಇದ್ದರೂ, ಭಾರತದಲ್ಲಿ ಇಂದಿಗೂ ಜನ ಬಯಸುವುದು ಜಿಎಸ್ ಎಂ ಮೊಬೈಲ್ ಫೋನ್ ಗಳನ್ನೇ ಎಂಬ ಅಂಶ ಸರ್ವವಿದಿತ. ಆದರೆ, ಬ್ಲ್ಯಾಕ್ ಬೆರ್ರಿ ಮೊಬೈಲ್ ಉತ್ಪಾದನಾ ಸಂಸ್ಥೆ ರಿಸರ್ಚ್ ಇನ್ ಮೋಷನ್(RIM) ಹೊಚ್ಚ ಹೊಸ ಸಿಡಿಎಂಎ ಮಾದರಿ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದು ಎಷ್ಟರಮಟ್ಟಿಗೆ ಸ್ಮಾರ್ಟ್ ಆಗಿ ಮಾರುಕಟ್ಟೆಯಲ್ಲಿ ಉಳಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಹೊಸ ಬ್ಲ್ಯಾಕ್ ಬೆರ್ರಿ ಮೊಬೈಲ್ ಹೈ ಎಂಡ್ ಸ್ಮಾರ್ಟ್ ಫೋನ್ ಆಗಿದ್ದು, ಫ್ಲಿಪ್ ಔಟ್ ಮಾದರಿಯಲ್ಲೂ ಲಭ್ಯವಿದೆ. ಎರಡೆರಡು ದರ್ಶಕಗಳು, ಬಾಹ್ಯ QVGA ದರ್ಶಕ ಇದ್ದು, ತ್ವರಿತವಾಗಿ ಎಸ್ ಎಂಎಸ್ ನೋಟಿಫಿಕೇಷನ್ ತಿಳಿಯಲು ಅನುಕೂಲಕರವಾಗಿದೆ. QWERTY ಕೀ ಪ್ಯಾಡ್ ಹಾಗೂ ಟಚ್ ಅಪ್ಟಿಕಲ್ ಟ್ರ್ಯಾಕ್ ಪ್ಯಾಡ್ ಕೂಡಾ ಇದೆ. LED ಫ್ಯಾಶ್ ಸಹಿತ 5 ಮೆಗಾ ಪಿಕ್ಸಲ್ ಕೆಮೆರಾವಿದ್ದು, 2592 X 1944 ರೆಸೊಲ್ಯೂಷನ್ ನಲ್ಲಿ ಚಿತ್ರಗಳನ್ನು ಸೆರೆ ಹಿಡಿಯಬಹುದು ಎಂದು ರಿಮ್ ಹೇಳಿದೆ. ಆಟೋ ಫೋಕಸ್, ಜಿಯೋ ಟ್ಯಾಗಿಂಘ್, ಇಮೇಜ್ ಸ್ಟಬಿಲೈಜೇಷನ್ ಮುಂತಾದ ಹೆಚ್ಚುವರಿ ಸೌಲಭ್ಯಗಳು ಕೆಮೆರಾಗೆ ಲಭ್ಯವಿದೆ.

ಬ್ಲ್ಯಾಕ್ ಬೆರ್ರಿ ಆಪರೇಟಿಂಗ್ ಸಿಸ್ಟಮ್ 6.0 ನಲ್ಲಿ ನಡೆಯುವ ಈ ಹೊಸ ಸಿಡಿಎಂಎ ಮೊಬೈಲ ನಲ್ಲಿ ಅಂತರಿಕ ಮೆಮೋರಿ 512 ಎಂಬಿ ಇದ್ದು, 16 ಜಿಬಿ ತನಕ ವಿಸ್ತರಿಸಬಹುದಾಗಿದೆ. ಹ್ಯಾಂಡ್ ಸೆಟ್ ಜೊತೆಗೆ 8 ಜಿಬಿ ಮೆಮೋರಿ ಕಾರ್ಡ್ ಕೊಡುವುದಾಗಿ ರಿಮ್ ಸಂಸ್ಥೆ ತಿಳಿಸಿದೆ.

ಬ್ಲ್ಯಾಕ್ ಬೆರ್ರಿ ಸ್ಟೈಲ್ 9670 ವೈಶಿಷ್ಟ್ಯತೆಗಳು :
* ಟಿಎಫ್ ಟಿ 360 x 400 ದರ್ಶಕ
* ಬ್ಲ್ಯಾಕ್ ಬೆರ್ರಿ ಆಪರೇಟಿಂಗ್ ಸಿಸ್ಟಮ್ 6.0
* LED ಫ್ಯಾಶ್ ಸಹಿತ 5 ಮೆಗಾ ಪಿಕ್ಸಲ್ ಕೆಮೆರಾ
* ವೈ-ಫೈ 802.11 b/g/n
* ಜಿಪಿಎಸ್ ಎ ಜಿಪಿಎಸ್
* ಸಿಡಿಎಂಎ ಸ್ಮಾರ್ಟ್ ಫೋನ್,
* Li-Ion 1150 mAh ಬ್ಯಾಟರಿ
* ಟಾಕ್ ಟೈಮ್ 4.5 ಗಂಟೆಗಳು
* ಸ್ಟ್ಯಾಂಡ್ ಬೈ ಟೈಮ್ 10.5 ದಿನಗಳು

ಮಾರುಕಟ್ಟೆಯಲ್ಲಿ ಏನೇ ಪೈಪೋಟಿ ಇದ್ದರೂ ಸಿಡಿಎಂಎ ಗ್ರಾಹಕರ ಸಂಖ್ಯೆ ಇಳಿಮುಖವಾಗಿಲ್ಲ. ಸ್ಮಾರ್ಟ್ ಫೋನ್ ವಿಭಾಗದಲ್ಲಿ ಅತ್ಯಂತ ಸ್ಟೈಲಿಷ್ ಹಾಗೂ ಹೆಚ್ಚು ಸೌಲಭ್ಯವುಳ್ಳ ಬ್ಲ್ಯಾಕ್ ಬೆರ್ರಿ ಮೊಬೈಲ್ ಗಳನ್ನು ಪರಿಚಯಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ರಿಮ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಫ್ರೆನ್ನಿ ಬಾವಾ ಹೇಳುತ್ತಾರೆ.

ರಿಮ್ ಸಿಡಿಎಂಎ ಮೊಬೈಲ್ ನ ಬೆಲೆ ಸದ್ಯಕ್ಕೆ ನಿಗದಿಪಡಿಸಿಲ್ಲವಾದರೂ, ಬ್ಲ್ಯಾಕ್ ಬೆರ್ರಿ ಸ್ಮಾರ್ಟ್ ಫೋನ್ ನ ಬೆಲೆ 23,400 ರು ಆಸುಪಾಸಿನಲ್ಲಿರುವ ಸಾಧ್ಯತೆಗಳಿವೆ. ಸ್ಟೀಲ್ ಗ್ರೇ, ಈ ಮೊಬೈಲ್ ಫೋನ್ ರಾಯಲ್ ಪರ್ಪಲ್ ಬಣ್ಣಗಳಲ್ಲಿ ಭಾರತದ ಪ್ರಮುಖ ಮಳಿಗೆಗಳಲ್ಲಿ ಶೀಘ್ರದಲ್ಲಿ ಲಭ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+