ಐಎಸ್ಐ ಉಗ್ರ ಸಂಘಟನೆಯೇ: ನಿಜ ಒಪ್ಪಿಕೊಂಡ ಅಮೆರಿಕ

Pak ISI
ಲಂಡನ್, ಏ. 26: ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಭಯೋತ್ಪಾದಕ ಸಂಘಟನೆ ಎಂಬುದನ್ನು ಅಮೆರಿಕದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ಐಎಸ್ಐ ಅಲ್ ಖೈದಾ ಮತ್ತು ತಾಲೀಬಾನ್ ಸಂಘಟನೆಗಳಿಗಿಂತ ಹೆಚ್ಚು ಅಪಾಯಕಾರಿ ಎಂದೂ ಅಮೆರಿಕ ಬಣ್ಣಿಸಿದೆ.

ಒಟ್ಟು 36 ಭಯಾನಕ ಉಗ್ರ ಸಂಘಟನೆಗಳೊಂದಿಗೆ ಐಎಸ್ಐ ನಂಟು ಹೊಂದಿದೆ. ಅನೇಕ ವರ್ಷಗಳಿಂದ ಅಫಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರನ್ನು ಐಎಸ್ಐ ಬೆಂಬಲಿಸುತ್ತಿದೆ ಎಂಬುದರ ಬಗ್ಗೆ ವರದಿಗಳಿವೆ. ಇದು ಅಮೆರಿಕ ಬೇಹುಗಾರಿಕೆ ಸಂಸ್ಥೆಗೆ ಮನದಟ್ಟಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.

ಮುಂಬೈ ದಾಳಿಗೆ ಕಾಣವಾಗಿರುವ ಲಷ್ಕರೆ ತೊಯ್ಬಾ ಜತೆ 2006ರ ಆಗಸ್ಟ್ ತಿಂಗಳಲ್ಲಿ ಪಾಕ್ ಸೇನಾಧಿಕಾರಿಗಳು, ಐಎಸ್ಐ ಅಧಿಕಾರಿಗಳು ಗುಪ್ತ ಸಭೆ ನಡೆಸಿರುವ ಬಗ್ಗೆ ಹರುನ್ ಷಿರ್ಜಾದ್ ಅಲ್ ಅಫಘಾನಿ ಎಂಬ ಉಗ್ರ ವಿಚಾರಣೆ ವೇಳೆ ಅಮೆರಿಕ ಅಧಿಕಾರಿಗಳ ಎದುರು ಬಾಯ್ಬಿಟ್ಟಿದ್ದಾನೆ ಎಂದು ಪತ್ರಿಕೆ ವರದಿ ಮಾಡಿದೆ. ಉಗ್ರರ ಪಿತಾಮಹ ಒಸಾಮಾ ಬಿನ್ ಲಾಡೆನ್ ಬಂಧನಕ್ಕೆ ಅಮೆರಿಕ ಬೇಹುಸಂಸ್ಥೆ ಮತ್ತು ಪಾಕ್ ಐಎಸ್ಐ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಆದರೆ ಪಾಕ್ ಬಗ್ಗೆ ಅಪನಂಬಿಕೆ ಮನೆ ಮಾಡಿದೆ. ಆದ್ದರಿಂದ ಈ ತಾಜಾ ವರದಿಯಿಂದ ಈ ಜಂಟಿ ಕಾರ್ಯಾಚರಣೆಗೆ ಮತ್ತಷ್ಟು ಧಕ್ಕೆಯಾಗುವ ಲಕ್ಷಣಗಳಿವೆ.

ಭಯೋತ್ಪಾದನೆ ವಿರುದ್ಧ ಇಡೀ ಜಗತ್ತು ಸಾರಿರುವ ಯುದ್ಧ ಹಳಿ ತಪ್ಪಬಾರದು ಎಂಬ ಉದ್ದೇಶದಿಂದ ಈ ಸತ್ಯವನ್ನು ಬಹಿರಂಗವಾಗಿ ಅರಗಿಸಿಕೊಳ್ಳುವುದಕ್ಕೆ ಅಮೆರಿಕ ಕಷ್ಟವಾಗಿದೆ. ಆದರೆ ಗ್ವಾಟೆಮಾಲಾ ಕೊಲ್ಲಿಯಲ್ಲಿ ಬಂಧಿಯಾಗಿರುವ 700 ಉಗ್ರರನ್ನು ವಿಚಾರಣೆಗೊಳಪಡಿಸುವ ಅಧಿಕಾರಿಗಳಿಗೆ ನಾನಾ ಭಯೋತ್ಪಾದಕ ಸಂಘಟನೆಗಳ ಜತೆ ಐಎಸ್ಐ ನಂಟು ಹೊಂದಿರುವುದು ಮನವರಿಕೆಯಾಗಿದೆ. ಐಎಸ್ಐ ಭಯೋತ್ಪಾದಕ ಸಂಘಟನೆ ಎಂಬುದನ್ನು ಸಾರಲು ಈ ಒಂದು ನಿದರ್ಶನವೇ ಸಾಕು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+