ಚಂದ್ರಾವತಿ ಬಟ್ಟೆ ಮೇಲೆ ಇತ್ತು ಹಾಲಪ್ಪ ವೀರ್ಯ : ಸಿಐಡಿ

CID chargesheet confirms rape by H Halappa
ಶಿವಮೊಗ್ಗ, ಏ.26 : ಮಾಜಿ ಸಚಿವ ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣವನ್ನು ಸಹಮತದ ಸೆಕ್ಸ್ ಎಂದು ಸಿಐಡಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಸುದ್ದಿಗೆ ಹೊಸ ತಿರುವು ಸಿಕ್ಕಿದೆ. ಹಾಲಪ್ಪ ನಡೆಸಿದ್ದು ಅತ್ಯಾಚಾರ ಎಂದು ಹೈದರಾಬಾದಿನ ಲ್ಯಾಬ್ ವರದಿ ನೀಡಿದ್ದು, ಎರಡೆರಡು ಬಾರಿ ಪರೀಕ್ಷೆ ನಡೆಸಿ ದೃಢಪಡಿಸಲಾಗಿದೆ ಎಂದು ಸಿಐಡಿ ಮೂಲಗಳು ಹೇಳಿವೆ. ಇದರಿಂದ ಮುಂದಿನ ವಿಚಾರಣೆ(ಮೇ.5)ಯಲ್ಲಿ ಹಾಲಪ್ಪನನ್ನು ಸಿಕ್ಕಿಸಲು ಎಲ್ಲ ದಾಖಲೆಗಳು ಸಿದ್ಧವಾಗಿದೆ ಎನ್ನಬಹುದು.

ಶಿವಮೊಗ್ಗ ಜೆಎಂಎಫ್ ಕೋರ್ಟಿಗೆ ಕಳೆದ ತಿಂಗಳು ಸಿಐಡಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ 2009ರ ನವೆಂಬರ್ 27ರಂದು ರಾತ್ರಿ ಹಾಲಪ್ಪ ತನ್ನ ಗೆಳೆಯ ವೆಂಕಟೇಶಮೂರ್ತಿಯ ಪತ್ನಿ ಚಂದ್ರಾವತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬುದು ಉಲ್ಲೇಖಿಸಲಾಗಿದೆ. ಈ ಐಪಿಸಿ ಸೆಕ್ಷನ್ 376ರ ಅನ್ವಯ ಆರೋಪಪಟ್ಟಿಯನ್ನು ಬೆಂಗಳೂರು ಸಿಐಡಿ ಪತ್ತೆ ನಿರೀಕ್ಷಕ ಎಂ ಎಸ್ ಕೌಲಪುರೆ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಲ್ಯಾಬ್ ವರದಿ ಬಹಿರಂಗ: ಸಿಐಡಿಯು ತನಿಖೆ ವೇಳೆ, ಘಟನೆ ನಡೆದಂದು ಹಾಲಪ್ಪ ಮತ್ತು ಚಂದ್ರಾವತಿ ಧರಿಸಿದ್ದ ಬಟ್ಟೆಗಳನ್ನು ಹೈದರಾಬಾದಿನ ಸೆಂಟ್ರಲ್ ಫೊರೆನ್ಸಿಕ್ ಸೈನ್ಸ್ ಲ್ಯಾನ್ (CFSL)ಗೆ ಕಳುಹಿಸಿಕೊಟ್ಟಿತ್ತು . ಲ್ಯಾಬ್ ವರದಿಯಲ್ಲಿ, "ಆರೋಪಿ ಹಾಲಪ್ಪನ ಪಂಚೆಯಲ್ಲಿ ಆತನ ವೀರ್ಯ ಪತ್ತೆಯಾಗಿದೆ. ಅದೇ ವೀರ್ಯ ಮಹಿಳೆಯ (ಚಂದ್ರಾವತಿಯ) ಒಳ ಉಡುಪು, ನೈಟಿ ಮತ್ತು ಬೆಡ್‌ಶೀಟಿನಲ್ಲಿ ಪತ್ತೆಯಾಗಿದ". ಡಿಎನ್‌ಎ ಪರೀಕ್ಷೆಯಲ್ಲೂ ಈ ಅಂಶ ದೃಢಪಟ್ಟಿದೆ"

ವಿಡಿಯೋ ಕೂಡಾ ಅಸಲಿ: ಅಲ್ಲದೆ, ಹಾಲಪ್ಪ ಮತ್ತು ಚಂದ್ರಾವತಿ ಬೆಡ್ ರೂಮಿನಲಿದ್ದ ದೃಶ್ಯವನ್ನು ಆಕೆಯ ಪತಿ ವೆಂಕಟೇಶಮೂರ್ತಿ ಚಿತ್ರೀಕರಿಸಿದ್ದು, ಎಂದು ಅವರು ತನ್ನ ಪತ್ನಿಯನ್ನು ಹಾಲಪ್ಪ ಅಂದು ರಾತ್ರಿ ಸುಮಾರು 3.30ರಿಂದ4 ಗಂಟೆಯ ಅವಧಿಯಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಮೂರ್ತಿ ಆಪಾದಿಸಿ, ಮೊಬೈಲ್ ಕ್ಯಾಮರದಲ್ಲಿ ಚಿತ್ರೀಕರಿಸಿದ್ದ ಕ್ಲಿಪಿಂಗ್ ನೀಡಿದ್ದಾರೆ. ಆದರೆ ಇದೆಲ್ಲ ಕಟ್ಟುಕತೆ'ಎಂದು ಹಾಲಪ್ಪ ಒಟ್ಟು ಪ್ರಕರಣ ಅಲ್ಲಗಳೆದಿದ್ದರು.

ಈ ಕಾರಣದಿಂದ ಮೊಬೈಲ್ ದೃಶ್ಯಾವಳಿಗಳನ್ನೊಳಗೊಂಡ ಸೀಡಿಯನ್ನು ದಿಲ್ಲಿ ಲ್ಯಾಬಿಗೆ ಕಳುಹಿಸಿ ಕೊಡಲಾಗಿದ್ದು, ಅಲ್ಲಿನ ವರದಿಯಲ್ಲಿ, 'ಈ ವಿಡಿಯೋದಲ್ಲಿ ಯಾವುದೇ ಕೃತಿಮವಿಲ್ಲ' ಎಂಬುದು ಗೊತ್ತಾಗಿದೆ ಎಂದು ಸಿಐಡಿ ಸ್ಪಷ್ಟಪಡಿಸಿದೆ.

ನಡೆದಿದ್ದು ಹೀಗೆ: ಆರೋಪಿ ಮಾಜಿ ಸಚಿವ ಹಾಲಪ್ಪ ನವಂಬರ್26ರಂದು ರಾತ್ರಿ ಮೂರ್ತಿ ಮನೆಗೆ ಊಟಕ್ಕೆಂದು ಹೋಗಿದ್ದ. ಈ ವೇಳೆ, ಸಂದರ್ಭದ ಲಾಭ ಪಡೆದ ಹಾಲಪ್ಪ ತನಗೆ ಮೈಹುಷಾರಿಲ್ಲ ಎಂದು ಹೇಳಿ, ಮೂರ್ತಿಯನ್ನು ಔಷಧಿ ತರಲು ಹೊರಗಡೆ ಕಳುಹಿಸಿದ್ದ. ಆದರೆ ಔಷಧಿಯೊಂದಿಗೆ ಮನೆಗೆ ಹಿಂದಿರುಗುವ ಹೊತ್ತಿಗೆ ಹಾಲಪ್ಪ ತನ್ನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ಮೂರ್ತಿ ಆಪಾದಿಸಿದ್ದಾರೆ. ಈ ಬಗ್ಗೆ ಚಂದ್ರಾವತಿಯೂ ಪೊಲೀಸರಲ್ಲಿ ದೂರು ನೀಡಿದ್ದರು. ನಂತರ ಬಂಧನಕ್ಕೊಳಗಾಗಿದ್ದ ಹಾಲಪ್ಪ, ಒಂದು ದಿನ ಕೂಡಾ ಜೈಲು ವಾಸ ಅನುಭವಿಸದೆ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಹಾರಿ ಜಾಮೀನು ಪಡೆದು ಆರಾಮಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+