ಏಪ್ರಿಲ್ 27ರಂದು ಪುಟ್ಟಪರ್ತಿಯಲ್ಲಿ ಬಾಬಾ ಅಂತ್ಯಕ್ರಿಯೆ

ಎಲ್ಲ ಧರ್ಮಗಳಲ್ಲಿಯೂ ಅಪಾರ ಭಕ್ತರನ್ನು ಹೊಂದಿದ್ದ ಬಾಬಾ ಅವರ ಭಕ್ತರು ವಿಶ್ವವ್ಯಾಪಿಯಾಗಿದ್ದಾರೆ. ಎಲ್ಲ ಭಕ್ತರಿಗೂ ಬಾಬಾ ಅಂತಿಮ ದರ್ಶನ ಕಲ್ಪಿಸುವ ಉದ್ದೇಶದಿಂದ ಮೂರು ದಿನಗಳ ತರುವಾಯ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಬಾಬಾ ಅವರ ಪರಮಭಕ್ತೆ, ಆಂಧ್ರ ಸಚಿವೆ ಜೆ. ಗೀತಾ ರೆಡ್ಡಿ ತಿಳಿಸಿದ್ದಾರೆ.
;ಸೋಮವಾರ ಮತ್ತು ಮಂಗಳವಾರ ಸಾಯಿ ಕುಲವಂತ ಹಾಲ್ ನಲ್ಲಿ ಬಾಬಾ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಬಾಬಾ ಜನ್ಮ ದಿನದ ವೇಳೆ ಇಲ್ಲಿಯೇ ವಿಶೇಷ ಪ್ರಾರ್ಥನೆಗಳು ನಡೆಯುತ್ತಿದ್ದವು. ಅಪಾರ ಭಕ್ತ ವೃಂದಕ್ಕೆ ಜಮಾಯಿಸಲು ಇದು ಸೂಕ್ತ ವೇದಿಕೆ. ಆದ್ದರಿಂದ ಬಾಬಾ ಅಂತಿಮ ವಿಧಿ, ವಿಧಾನಗಳೂ ಇಲ್ಲಿಯೇ ನೆರವೇರಲಿವೆ ಎಂದು ಗೀತಾ ಹೇಳಿದ್ದಾರೆ.
ಪ್ರಶಾಂತಿ ನಿಲಯದ ಆಗುಹೋಗುಗಳನ್ನು ನೋಡಿಕೊಳ್ಳುವ ಪುಟ್ಟಪರ್ತಿ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಪ್ರಕಾರ 114 ದೇಶಗಳಲ್ಲಿ ಸತ್ಯ ಸಾಯಿಬಾಬಾ ಕೇಂದ್ರಗಳಿವೆ. 178 ರಾಷ್ಟ್ರಗಳಲ್ಲಿ ಬಾಬಾ ಭಕ್ತರಿದ್ದಾರೆ. ಈಶ್ವರಮ್ಮ ಮತ್ತು ಪೆದ್ದವೆಂಕಮ್ಮ ರಾಜು ರತ್ನಾಕರಂ ದಂಪತಿಯ ಪುತ್ರನಾಗಿ ನವೆಂಬರ್ 23, 1926 ಜನಿಸಿದ ಬಾಬಾ ಅವರ ಮೂಲ ಹೆಸರು ಸರ್ಯನಾರಾಯಣ ರಾಜು.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications