ಪ್ರೇಮಿ ಕೊಲೆ ಲೈವ್ ನೋಡಿದ ನತದೃಷ್ಟ ಪ್ರಿಯತಮ

ಯಾರ್ಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ 23 ವರ್ಷದ ಲಿಯುಳನ್ನು ಕೊಂದ ಪಾತಕಿನನ್ನು ಬಂಧಿಸಲಾಗಿದ್ದು, ಆತನನ್ನು ಬ್ರಿಯಾನ್ ಡಿಕ್ಸನ್ ಎಂದು ಗುರುತಿಸಲಾಗಿದೆ. ಆದರೆ, ಆತನಿಗೂ ಯಾರ್ಕ್ ವಿಶ್ವವಿದ್ಯಾಲಯಕ್ಕೂ ಸಂಬಂಧವಿತ್ತೆ ಅಥವಾ ಲಿಯುಗೆ ಆತ ಪರಿಚಿತನೇ ಎಂಬುದನ್ನು ಇನ್ನು ಟೊರೊಂಟೋ ಪೊಲೀಸರು ಸ್ಪಷ್ಟಪಡಿಸಿಲ್ಲ.
ಲಿಯು ದುರಂತ ಸಾವು: ಸುಮಾರು ಏಳು ತಿಂಗಳ ಹಿಂದೆ ಇಂಗ್ಲೀಷ್ ಕಲಿಯಲು ಚೀನಾದಿಂದ ಕೆನಡಾಗೆ ಬಂದಿದ್ದ ಲಿಯು ದುರಂತ ಸಾವನ್ನಪ್ಪಿದ್ದಾಳೆ. ಅದು ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದಾಗ, ಆಕೆಯ ಕೋಣೆ ಪ್ರವೇಶಿಸಿದ ಡಿಕ್ಸನ್, ಆಕೆಯ ಮೊಬೈಲ್ ಫೋನ್ ಬಳಸುತ್ತೇನೆ ಎಂದು ಕೇಳಿದ್ದಾನೆ. ಲಿಯು ತಿರುಗಿ ನೋಡಿದಾಗ, ಆಕೆಯನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದಾನೆ. ಇಬ್ಬರ ನಡುವೆ ಘರ್ಷಣೆ ನಡೆಯುತ್ತಿದ್ದಾಗ ಲಿಯು ಪ್ರೇಮಿ ಕ್ಸಿಯಾನ್ಚೊ ವೆಬ್ ನಲ್ಲೇ ಅರಚಾಡಿ, ಡಿಕ್ಸನ್ ಅನ್ನು ಶಪಿಸುತ್ತಾನೆ. ಇದರಿಂದ ಕುಪಿತನಾದ ಡಿಕ್ಸನ್ ವೆಬ್ ಕ್ಯಾಮ್ ಕೆಳಗುರಳಿಸುತ್ತಾನೆ. ನಂತರ ಲಿಯು ಅರೆ ನಗ್ನಾವಸ್ಥೆಯಲ್ಲಿ ಶವವಾಗಿ ಸಿಕ್ಕಿದ್ದಾಳೆ ಎಂದು ಪೊಲೀಸರು ವರದಿ ಸಲ್ಲಿಸಿದ್ದಾರೆ.
ಬೀಜಿಂಗ್ ನಲ್ಲಿದ್ದ ಲಿಯು ಪ್ರೇಮಿ ಆಕೆಯನ್ನು ಉಳಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದಾನೆ. ಆಕೆ ಸ್ನೇಹಿತರು, ಪೊಲೀಸರು, ವಿಶ್ವವಿದ್ಯಾಲಯಕ್ಕೆ ಕರೆ ಮಾಡಿ ಲಿಯುಗೆ ಸಹಾಯ ಮಾಡುವಂತೆ ಅಂಗಲಾಚಿ ಬೇಡಿದ್ದಾನೆ. ಆದರೆ, ಲಿಯು ದುರಂತ ಸಾವನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಲಿಯು ಶವ ಮೇಲೆ ಲೈಂಗಿಕ ಕಿರುಕುಳ ಅಥವಾ ಹಲ್ಲೆ ಯತ್ನದ ಗುರುತು ತಕ್ಷಣ ಸಿಕ್ಕಿಲ್ಲ.
ಮೇಲ್ನೋಟಕ್ಕೆ ಕೊಲೆಯ ಉದ್ದೇಶ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಲೈವ್ ಸ್ಟ್ರೀಮಿಂಗ್ ಚಾಟ್ ರೆಕಾರ್ಡ್ ಆಗಿರುವ ಸಾಧ್ಯತೆ ಕಮ್ಮಿ. ಆದರೂ ಲಿಯು ಹಾಗೂ ಕ್ಸಿಯಾನ್ಚೊ ಚಾಟ್ ಹಿಸ್ಟರಿ ಕೆದಕಿ ಆರೋಪಿಯ ಚಲನವಲನಗಳನ್ನು ಗಮನಿಸಿ, ಮುಂದಿನ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಪತ್ತೆದಾರರು ಹೇಳಿದ್ದಾರೆ.












Click it and Unblock the Notifications