ಸಾವಿನತ್ತ ಮುಖ ಮಾಡಿದ ಸಾಯಿಬಾಬಾ

Sai Baba Critical
ಬೆಂಗಳೂರು, ಏ. 21: ಸಾಯಿಬಾಬಾ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿದ್ದು, ವಿಷಮಸ್ಥಿತಿ ತಲುಪಿದೆ. ಅವರ ಎಲ್ಲ ಸರ್ವಾಂಗಗಳು ಸ್ತಬ್ದಗೊಂಡಿವೆ. ಯಾವುದೇ ಚಿಕಿತ್ಸೆಗೆ ಅವರು ಸ್ಪಂದಿಸುತ್ತಿಲ್ಲ. ಇದರಿಂದ ವೈದ್ಯರು ಕೈಚೆಲ್ಲಿ ಕುಳಿತಿದ್ದಾರೆ.

ಈ ಮಧ್ಯೆ, ಬಾಬಾ 'ಜೀವಂತ ಸಮಾಧಿ' ಆಗಿದ್ದಾರೆ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಹಬ್ಬಿವೆ. ಅನೇಕ ಭಕ್ತರಿಗೆ ಅವರಿನ್ನೂ ಬದುಕಿದ್ದಾರೆಯೇ ಎಂಬ ಅನುಮಾನ ತೀವ್ರವಾಗಿ ಕಾಡಲಾರಂಭಿಸಿದೆ.

ವೀಡಿಯೊ: ಸಾಯಿಬಾಬಾ ಆರೋಗ್ಯ ವಿಷಮಸ್ಥಿತಿಗೆ

23 ದಿನಗಳ ಹಿಂದೆ ಆಸ್ಪತ್ರೆ ಸೇರಿದ್ದ ಸಾಯಿಬಾಬಾ ಅವರ ಆರೋಗ್ಯ ಸ್ಥಿತಿ ಕೈಮೀರುವ ಹಂತ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಬಾಬಾ ಅವರ ಒಂದೊಂದೇ ಅವಯವ ವಿಫಲವಾಗುತ್ತಾ ಬಂದಿದೆ ಎಂದು ವೈದ್ಯರು ಆಂಧ್ರ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರಿಗೆ ತಡರಾತ್ರಿ ಸಂದೇಶ ನೀಡಿದ್ದಾರೆ. ಇದರಿಂದ ಭಕ್ತರು ವ್ಯಾಕುಲಗೊಂಡಿದ್ದು, ಪುಟ್ಟಪರ್ತಿ ಮತ್ತೆ ಉದ್ವಿಗ್ನಗೊಂಡಿದೆ. ನಿಷೇದಾಜ್ಞೆ ಮುಂದುವರಿಸಲಾಗಿದ್ದು, ಕೇಂದ್ರದಿಂದ ಹೆಚ್ಚಿನ ಭದ್ರಾತಾಪಡೆಗಳು ಪುಟ್ಟಪರ್ತಿಯತ್ತ ಧಾವಿಸಿವೆ.

ಕಾಮಾಲೆ ಉಲ್ಬಣಿಸಿದ ಕಾರಣ ಲಿವರ್ ಸಂಪೂರ್ಣ ಹಾಳಾಗಿದೆ. ಜತೆಗೆ ಎರಡು ಕಿಡ್ನಿಗಳೂ ವಿಫಲಗೊಂಡಿವೆ. ಮೆದುಳಿನ ಸಂದೇಶ ರವಾನೆಯಾಗುತ್ತಿಲ್ಲ. ಕಣ್ಣುಗಳು ನಿಸ್ತೇಜಗೊಂಡಿವೆ. ಪುಟ್ಟಪರ್ತಿಯ ಘಟನಾವಳಿಗಳ ಬಗ್ಗೆ ಆಂಧ್ರ ಮುಖ್ಯಮಂತ್ರಿ ಕಿರಣ್ ಕುಮಾರ್ ಕ್ಷಣಕ್ಷಣಕ್ಕೂ ಕೇಂದ್ರಕ್ಕೆ ವಿವರಿಸುತ್ತಿದ್ದು, ರಾಷ್ಟ್ರದ ಪ್ರಮುಖ ನಾಯಕರು ಪುಟ್ಟಪರ್ತಿಗೆ ಆಗಮಿಸುತ್ತಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳು ಮಂದಿರ ನಗರಿಯಲ್ಲಿ ಬೀಡುಬಿಟ್ಟಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+