ಪಾಕ್ ಹಿಂದೂ ಯುವತಿಯರ ಬಲವಂತ ಮತಾಂತರ

Hindu girls conversion row, Pakistan
ಇಸ್ಲಾಮಾಬಾದ್, ಏ.20: ಅಲ್ಪಸಂಖ್ಯಾತ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸುವ ಕೃತ್ಯಗಳು ಹೆಚ್ಚುತ್ತಿರುವ ಬಗ್ಗೆ ಮಾನವ ಹಕ್ಕು ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳನ್ನೇ ಅಲ್ಪಸಂಖ್ಯಾತ ಮುಸ್ಲಿಂ ಮತ್ತು ಕ್ರೈಸ್ತ ಮತೀಯವಾದಿಗಳು ಬಲವಂತವಾಗಿ ಮತಾಂತರಿಸುತ್ತಿದ್ದಾರೆ.

ವಿಶೇಷವಾಗಿ ಹಿಂದೂಗಳು ಅದರಲ್ಲೂ ಹಿಂದೂ ಹೆಣ್ಣು ಮಕ್ಕಳ ಬಲವಂತದ ಅಪಹರಣ, ಅತ್ಯಾಚಾರ ಹಾಗೂ ಮತಾಂತರಗೊಳಿಸುವ ಹೀನ ಕೃತ್ಯಗಳು ಹೆಚ್ಚುತ್ತಿದ್ದು, ಇತ್ತೀಚೆಗೆ 12 ವರ್ಷದ ಹಿಂದೂ ಹೆಣ್ಣುಮಗಳೊಬ್ಬಳನ್ನು ಮತಾಂತರಗೊಳಿಸಿದ ಕೃತ್ಯವನ್ನು ಬೊಟ್ಟು ಮಾಡಲಾಗಿದೆ. ಇದು ಒಂದು ಪ್ರಕರಣವಲ್ಲ, ದೇಶಾದ್ಯಂತ ಹಿಂದೂಗಳ ಮೇಲೆ ಇಂಥ ದೌರ್ಜನ್ಯ ಅವ್ಯಾಹತವಾಗಿ ನಡೆದಿದೆ ಎನ್ನುತ್ತದೆ ವರದಿ.

12ರ ಬಾಲೆಯೊಬ್ಬಳು ತಾನು ಸ್ವಂತ ಇಚ್ಛೆಯಿಂದ ಇಸ್ಲಾಮಿಗೆ ಮತಾಂತರಗೊಳ್ಳುತ್ತಿರುವುದಾಗಿ ಹೇಳಿದ್ದನ್ನು ಮ್ಯಾಜಿಸ್ಟ್ರೇಟರೊಬ್ಬರು ದಾಖಲಿಸಿಕೊಂಡಿರುವುದನ್ನು ಮಾನವ ಹಕ್ಕು ಸಂಘಟನೆಗಳು ಉಲ್ಲೇಖಿಸಿವೆ. ಆ ಹೆಣ್ಣು ಮಗಳ ಕುಟುಂಬದ ನ್ಯಾಯವಾದಿ ಆಕೆ ಅಪ್ರಾಪ್ತವಯಸ್ಕಳು ಎಂದುಆಕ್ಷೇಪಿಸಿದ್ದರೂ ಮ್ಯಾಜಿಸ್ಟ್ರೇಟರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡ ಕೃತ್ಯ ಇಡಿ ವ್ಯವಸ್ಥೆ ಇಂತಹ ಮತಾಂತರಕ್ಕೆ ಬೆಂಬಲ ನೀಡುತ್ತಿರುವುದರ ಸಂಕೇತವೆಂದು ಹೇಳಲಾಗಿದೆ.

ಪಾಕಿಸ್ತಾನದ ಅಲ್ಪಸಂಖ್ಯಾತರ ಪಾಲಿಗೆ ಈ ಬಲವಂತದ ಮತಾಂತರ ತೀವ್ರ ಕಳವಳದ ವಿಷಯವಾಗಿದೆ. ಸಿಂಧು ಪ್ರಾಂತ್ಯದಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಅಪಹರಿಸುವುದು ಮತ್ತು ಬಲವಂತವಾಗಿ ಮತಾಂತರಿಸುವ ಕೃತ್ಯಗಳು ಹೆಚ್ಚುತ್ತಿರುವ ಬಗ್ಗೆ ಅಲ್ಪಸಂಖ್ಯಾತರ ವ್ಯವಹಾರ ಕುರಿತ ಸಂಸದೀಯ ಸ್ಥಾಯಿ ಸಮಿತಿ ಪಾಕ್ ಸೆನೆಟಿನಲ್ಲೇ ಕಳವಳ ವ್ಯಕ್ತಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+