ದುಬೈನಲ್ಲಿ ಬ್ರಿಟನ್ ವ್ಯಾಪಾರಿಯ ಲಾಕಪ್ ಡೆತ್
ದುಬೈ,
ಏ. 15 : ಪ್ರವಾಸಕ್ಕೆಂದು ದುಬೈಗೆ ಬಂದಿದ್ದ ಬ್ರಿಟನ್ನಿನ ವ್ಯಾಪಾರಿ ಲೀ ಬ್ರಾಡ್ಲಿ ಬ್ರೌನ್ (39) ಎಂಬಾತನನ್ನು ದುಬೈ ಪೊಲೀಸರು ಠಾಣೆಯಲ್ಲಿ ಭೀಕರವಾಗಿ ಹೊಡೆದು ಸಾಯಿಸಿದ್ದಾರೆ. ಆತ ಮಾಡಿದ ತಪ್ಪೆಂದರೆ, ಸಾರ್ವಜನಿಕವಾಗಿ ಬೈದಿದ್ದು. id="toptextpromo">ಏಪ್ರಿಲ್
6ರಂದೇ ಆತನನ್ನು ಬಂಧಿಸಿದ ದುಬೈ ಪೊಲೀಸರು ಸತತ ಆರು ದಿನಗಳ ಕಾಲ ಬಂದಿಖಾನೆಯಲ್ಲಿ ಆತನನ್ನು ಇರಿಸಿದ್ದಾರೆ. ಆತನಿಗೆ ನೀರು, ಆಹಾರ, ಸಂಬಂಧಿಗಳನ್ನು ಭೇಟಿಯಾಗಲು, ವಕೀಲರನ್ನು ಸಂಪರ್ಕಿಸಲು ಅವಕಾಶವನ್ನೇ ನೀಡಿಲ್ಲ. ಬದಲಾಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪರಿಣಾಮ ಪ್ರಜ್ಞೆ ತಪ್ಪಿದ ಬ್ರೌನ್ ನಂತರ ಠಾಣೆಯಲ್ಲೇ ಸಾವಿಗೀಡಾಗಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಜೈಲಿನಲ್ಲಿದ್ದ
ಇತರ ಕೈದಿಗಳು ಅಲ್ಲೇ ಬಿದ್ದಿದ್ದ ಆತನ ಪಾಸ್ ಪೋರ್ಟ್ ನ ಹಿಂದೆ ಇದ್ದ ಆತನ ಸಹೋದರಿಯ ಫೋನ್ ನಂಬರಿಗೆ ಲಾಕಪ್ ಡೆತ್ ಬಗ್ಗೆ ತಿಳಿಸಿದ್ದಾರೆ. ಇದನ್ನು ಬ್ರಿಟನ್ನಿನ ವಿದೇಶಾಂಗ ಕಚೇರಿಯ ಅಧಿಕಾರಿ ದೃಢಪಡಿಸಿದ್ದಾರೆ. ಈ ಕುರಿತು ದೂರು ದಾಖಲಿಸಲಾಗಿದ್ದು ರಫ್ ಅಂಡ್ ಟಫ್ ದುಬೈ ಪೊಲೀಸರ ಬರ್ಬರ ಕೃತ್ಯದ ವಿರುದ್ಧ ತನಿಖೆ ನಡೆಸಲಾಗುತ್ತಿದೆ.











Click it and Unblock the Notifications