ಎಲ್ ಜಿ ಬಹುನಿರೀಕ್ಷಿತ ಸ್ಮಾರ್ಟ್ ಫೋನ್

ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್ ಫೋನ್ ಗಳಿಗಿಂತ ಒಂದು ಕೈ ಮೇಲು ಎಂಬಂತಿರುವ ಎಲ್ ಜಿ ಆಪ್ಟಿಮಸ್ ಗೆ Nvidia ದ ಟೆಗ್ರಾ 2 ಪ್ರೊಸೆಸರ್ ಬಳಸಲಾಗಿದ್ದು, ಆಡ್ರ್ಯಾಂಡ್ 2.2 ಫ್ರಾಯೋ ಆಪರೇಟಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಹಾಗೂ 2.3 ಜಿಂಜರ್ ಬ್ರೆಡ್ ಆವೃತ್ತಿಗೆ ಸುಧಾರಣೆ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ.
ಎಲ್ ಜಿ ಆಪ್ಟಿಮಸ್ 2Xನಲ್ಲಿ 4 ಇಂಚಿನ ಟಿಎಫ್ ಟಿ ಟಚ್ ಸ್ಕ್ರೀನ್,ಗೈರೋ ಸೆನ್ಸರ್, ಇದ್ದು ಆಕರ್ಷಕ ಸ್ಕ್ರೀನ್ ಈ ಮೊಬೈಲ್ ನ ಪ್ಲಸ್ ಪಾಯಿಂಟ್ ಎನ್ನಬಹುದು. LED ಫ್ಲಾಶ್ ಸೌಲಭ್ಯ, ಆಟೋ ಫೋಕಸ್ ತಂತ್ರಜ್ಞಾನ ಜೊತೆಗೆ 8 ಮೆಗಾ ಪಿಕ್ಸಲ್ ನ ಕೆಮೆರಾ ಇದೆ. ಮುಂಬದಿಯಲ್ಲಿ 1.3 ಮೆಗಾ ಪಿಕ್ಸಲ್ ಕೆಮೆರಾ 3ಜಿ ಸೌಲಭ್ಯವುಳ್ಳವರಿಗೆ ವಿಡಿಯೋ ಕಾಲಿಂಗ್ ನಲ್ಲಿ ನೆರವಾಗಲಿದೆ. 1080p@24fps ವೇಗದಲ್ಲಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಕೂಡಾ ಇದೆ.
8 ಜಿಬಿ ಆಂತರಿಕ ಮೆಮೋರಿ ಇದ್ದು, 32ಜಿಬಿ ತನಕ ಮೈಕ್ರೊ ಎಸ್ ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ. ಉಳಿದಂತೆ, ವೈಫೈ, ಡಿಎಲ್ ಎನ್ ಎ, ಬ್ಲೂಟೂಥ್, ಎ2ಡಿಪಿ, ಸ್ಟಿರಿಯೋ ಎಫ್ ಎಂ ರೇಡಿಯೋ, ಸೋಷಿಯಲ್ ನೆಟ್ ವರ್ಕಿಂಗ್ ಸೈಟ್ ಗಳ ಐಕ್ಯಗೊಳಿಸಿದ ಅಪ್ಲಿಕೇಷನ್, ವಿಡಿಯೋಗಳನ್ನು ಹಂಚಲು ಸುಲಭ ಸಾಧಕಗಳು ಇದರಲ್ಲಿ ಅಡಕವಾಗಿದೆ.
ಎಲ್ ಜಿ ಆಪ್ಟಿಮಸ್2x ವಿಶೇಷತೆಗಳು:
* 4 ಇಂಚಿನ ಟಿಎಫ್ ಟಿ ಟಚ್ ಸ್ಕ್ರೀನ್(480 x 800)
* 1 Ghz Nvidia Tegra 2 ಪ್ರೊಸೆಸರ್
* ಆಂಡ್ರ್ಯಾಡ್ 2.2(2.3ಗೆ ಸುಧಾರಣೆ ಸಾಧ್ಯ)
* ULP GeForce GPU, Tegra 2 chipset
* LED ಫ್ಲಾಶ್ ಸಹಿತ 8 ಮೆಗಾ ಪಿಕ್ಸಲ್ ಕೆಮೆರಾ, 1.3 ಮೆಗಾ ಪಿಕ್ಸಲ್ ಕೆಮೆರಾ
* Wi-Fi 802.11 b/g/n, DLNA, Wi-Fi hotspot
* 3G HSDPA, 10.2 Mbps; HSUPA, 5.76 Mbps
* 512 MB RAM, 8 GB internal memory
* Adobe Flash 10.1 ಬೆಂಬಲಿತ
* Li-Ion 1500 mAh ಬ್ಯಾಟರಿ
* ಸ್ಟಿರಿಯೋ ಎಫ್ ಎಂ ರೇಡಿಯೋ ರೆಕಾರ್ಡಿಂಗ್
ಎಲ್ ಜಿ ಮೊಬೈಲ್ ಗೆ ಪೈಪೋಟಿ: ಎಲ್ ಜಿ ಆಪ್ಟಿಮಸ್ ಬೆಲೆ 27,000 ದಿಂದ 30,000 ರು ತನಕ ಇದೆ. ಏಪ್ರಿಲ್ ತಿಂಗಳ ಅಂತ್ಯಕ್ಕೆ ಎಲ್ಲಾ ಪ್ರಮುಖ ಮಳಿಗೆಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಾಗಲಿದೆ. ಎಲ್ ಜಿ ಸ್ಮಾರ್ಟ್ ಫೋನ್ ಗೆ ಪೈಪೋಟಿ ನೀಡಲು ನೋಕಿಯಾ ಇ7, ಎಚ್ ಟಿಸಿ ಇಂಕ್ರೆಡಿಬಲ್ ಎಸ್, ಏಸರ್ ಲಿಕ್ವಿಡ್ ಮೆಟಲ್, ಎಚ್ ಟಿಸಿ ಡಿಸೈಟ್ ಜಡ್, ಸ್ಯಾಮ್ ಸಂಗ್ ನೆಕ್ಸರ್ ಎಸ್ ಹಾಗೂ ಮೋಟೊರೊಲಾ ಮೈಲ್ ಸ್ಟೋನ್ 2 ಸಜ್ಜಾಗಿವೆ.












Click it and Unblock the Notifications