ಲೈಂಗಿಕ ಹಗರಣದಲ್ಲಿ ಒಬಾಮಾ ಚಡ್ಡಿ ದೋಸ್ತ್
ವಾಷಿಂಗ್ಟನ್,
ಏ. 7 : ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾನೆಂಬ ಆರೋಪದ ಮೇಲೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಬಾಲ್ಯದ ಗೆಳೆಯ ರಾಬರ್ಟ್ ರಿಚರ್ಡ್ ಟಿಟ್ಕೊಂಬ್ (49) ಎಂಬಾತನನ್ನು ಹೊನೊಲುಲು ಪೊಲೀಸರು ಬಂಧಿಸಿದ್ದಾರೆ. id="toptextpromo">ಹವಾಯಿ
ಪೊಲೀಸರು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಟಿಟ್ಕೊಂಬ್ ಸಿಕ್ಕುಬಿದ್ದಿದ್ದಾನೆ. ವೇಶ್ಯೆಯ ಸೋಗಿನಲ್ಲಿ ಬಂದ ಮಹಿಳಾ ಪೊಲೀಸ್ ಅಧಿಕಾರಿಯಿಂದ ಲೈಂಗಿಕ ಕ್ರಿಯೆ ಬಯಸಿದ್ದ ಟಿಟ್ಕೊಂಬ್ ಮತ್ತು ಆತನೊಂದಿಗಿದ್ದ ಇತರ ಮೂವರನ್ನು ಪೊಲೀಸರು ಬಂಧಿಸಿದರು. 500 ಡಾಲರ್ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಹಾವಾಯಿ ನ್ಯೂಸ್ ನೌ ವರದಿ ಮಾಡಿದೆ. id='are-slot-1' class='oiad oi-axt oiadv'> id='top-searched-articles'>ವೇಶ್ಯಾವಾಟಿಕೆಯಲ್ಲಿ
ಸಿಕ್ಕಿಬಿದ್ದಿರುವ ಟಿಟ್ಕೊಂಬ್ ಮತ್ತು ಬರಾಕ್ ಒಬಾಮಾ ಅವರ ಗೆಳೆತನ ಆರಂಭವಾಗಿದ್ದು 1970ರಲ್ಲಿ. ಅವರಿಬ್ಬರು ಹೊನೊಲುಲುವಿನಲ್ಲಿರುವ ಪುನಹೌ ಶಾಲೆಯಲ್ಲಿ ಜೊತೆಯಾಗಿ ಓದುತ್ತಿದ್ದರು. ಆಗ ಪ್ರಾರಂಭವಾದ ಸ್ನೇಹ ಇಂದಿನವರೆಗೂ ಮುಂದುವರಿದಿದೆ. ಅಧ್ಯಕ್ಷರು ಹವಾಯಿಗೆ ಬಂದಾಗಲೆಲ್ಲ ಇಬ್ಬರೂ ಹರಟುತ್ತಾರೆ, ಬಾಸ್ಕೆಟ್ ಬಾಲ್, ಗೋಲ್ಫ್ ಆಡುತ್ತಾರೆ. ಅನೇಕ ಬಾರಿ ಇಬ್ಬರೂ ರಾತ್ರಿಯೂಟವನ್ನು ಒಟ್ಟಿಗೆ ಮಾಡಿದ್ದಿದೆ. ಟಿಟ್ಕೊಂಬ್ ಬಂಧನಕ್ಕೆ ವೈಟ್ ಹೌಸ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.











Click it and Unblock the Notifications