ನಗರ ಪಾಲಿಕೆ ಸ್ಥಾನ ಕಳೆದುಕೊಂಡ ತುಮಕೂರು

2001ರ ಜನಗಣತಿ ಆಧರಿಸಿ ತುಮಕೂರು ನಗರಸಭೆಯನ್ನು ನಗರಪಾಲಿಕೆಯಾಗಿ ಪರಿವರ್ತಿಸಿ ಸರಕಾರ ಆದೇಶ ಹೊರಡಿಸಿದೆ. 2001ರಲ್ಲಿನ ಜನಸಂಖ್ಯೆ ಹಾಗೂ ಈಗಿನ ಜನಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ ಉಂಟಾಗಿದೆ. ಆದರೂ, ನಗರ ಪಾಲಿಕೆ ಮಾಡುವ ಅಗತ್ಯವಿದ್ದಲ್ಲಿ ಸೂಕ್ತ ಮಾನದಂಡಗಳನ್ನು ಅನುಸರಿಸಿ, 2011ರ ಜನಗಣತಿಯ ಆಧಾರದ ಮೇಲೆ 'ತುಮಕೂರು ನಗರ ಪಾಲಿಕೆ" ರಚನೆ ಮಾಡಲು ನೂತನ ಅಧಿಸೂಚನೆ ಹೊರಡಿಸುವ ಸ್ವಾತಂತ್ರವನ್ನು ಸರ್ಕಾರಕ್ಕೆ ಹೈಕೋರ್ಟ್ ನೀಡಿದೆ.
ನಗರಸಭೆ ಸ್ಥಾನಮಾನ : 1999ರ ಆಗಸ್ಟ್‌ನಲ್ಲಿ 'ತುಮಕೂರು ನಗರಸಭೆ"ನ್ನು ರಚನೆ ಆಗಿತ್ತು. ನಗರ ಸಭೆಗೆ 2007ರ ಸೆಪ್ಟೆಂಬರ್ 30ರಂದು ಚುನಾವಣೆ ನಡೆದು, ಸದಸ್ಯರು ಆಯ್ಕೆಯಾಗಿದ್ದರು. ಆದರೆ, ಕರ್ನಾಟಕ ಮುನ್ಸಿಪಾಲಿಟೀಸ್ ಕಾಯ್ದೆ 1964ರ ಅನ್ವಯ ನಗರ ಸಭೆಯನ್ನು ನಗರ ಪಾಲಿಕೆಯನ್ನಾಗಿ ಪರಿವರ್ತಿಸಿ 2010ರ ನ.29 ರಂದು ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.
ಪಾಲಿಕೆ ರಚನೆಗೆ ಜನಸಂಖ್ಯೆ, ಮೂಲಭೂತ ಸೌಕರ್ಯ, ಪ್ರದೇಶ ವಿಸ್ತೀರ್ಣ, ಜನಸಾಂದ್ರತೆ ಸೇರಿದಂತೆ ನಿರ್ದಿಷ್ಟ ಮಾನದಂಡ ಅನುಸರಿಸದೆ ನಗರ ಸಭೆಯನ್ನು ನಗರ ಪಾಲಿಕೆ ಯಾಗಿ ಸರ್ಕಾರ ಪರಿವರ್ತಿಸಿದೆ. ಆದುದರಿಂದ ಸರಕಾರದ ಅಧಿಸೂಚನೆ ರದ್ದುಗೊಳಿಸಬೇಕು ಎಂದು ಕೋರಲಾಗಿತ್ತು.
ಪಾಲಿಕೆಯಾಗಲು ಬೇಕಾದ ಮಾನದಂಡ:
* ಜನಸಂಖ್ಯೆ 3 ಲಕ್ಷ ಮೀರಿರಬೇಕು.(ಹಾಲಿ ಸಂಖ್ಯೆ 26,81,449)
* ಸ್ಥಳೀಯ ಆಡಳಿತಕ್ಕೆ 6 ಕೋಟಿ ರು.ಗೂ ಅಧಿಕ ವಾರ್ಷಿಕ ಆದಾಯ ಇರಬೇಕು.
* ಶೇ.50ಕ್ಕೂ ಅಧಿಕ ಮಂದಿ ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿರಬೇಕು.
* ಜನಸಾಂದ್ರತೆ 300 ಪ್ರತಿ ಚದರ ಕಿ.ಮೀಗೆ ಇರಬೇಕು( ಹಾಲಿ ಸಂಖ್ಯೆ 253 ಇದೆ)












Click it and Unblock the Notifications