ಶಿರಡಿ ಸಾಯಿಬಾಬಾ ಆಲಯಕ್ಕೆ ಹವಾನಿಯಂತ್ರಣ ವ್ಯವಸ್ಥೆ

Shirdi Saibaba
ಮುಂಬೈ, ಮಾ.30: ಬೇಸಿಗೆ ಬಂತೆಂದರೆ ಮಹಾರಾಷ್ಟ್ರದ ಪುಣ್ಯಕ್ಷೇತ್ರ ಶಿರಡಿಯಲ್ಲಿ ನೆತ್ತಿ ಸುಡುವ ಬಿರುಬಿಸಿಲು. ಸಾಯಿಬಾಬಾ ದರ್ಶನ ಭಾಗ್ಯಕ್ಕೆ ಬರುವ ಭಕ್ತಾದಿಗಳಿಗೆ ಬೇಸಿಗೆ ಬೇಗೆ ತಪ್ಪಿದ್ದಲ್ಲ. ಶಿರಡಿಗೆ ಬರುವ ಭಕ್ತರನ್ನು ತಂಪಾಗಿಸಲು ದೇವಾಲಯದ ನಿರ್ವಾಹಕರು ಮುಂದಾಗಿದ್ದಾರೆ. ದೇವಾಲಯದ ಒಳಗೆ ಹವಾನಿಯಂತ್ರಣ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಮುಂಬರುವ ಮೂರು ತಿಂಗಳಲ್ಲಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಹವಾ ನಿಯಂತ್ರಣ ವ್ಯವಸ್ಥೆಯನ್ನು ಪೂರ್ಣಗೊಳಿಸಲಿದೆ. ಈ ಸೌಕರ್ಯಕ್ಕೆ ಸರಿಸುಮಾರು ರು.3.5 ಕೋಟಿ ವೆಚ್ಚ ಮಾಡುತ್ತಿರುವುದಾಗಿ ಟ್ರಸ್ಟ್ ಅಧ್ಯಕ್ಷ ಸಸಾಣಿ ತಿಳಿಸಿದ್ದಾರೆ. ದೇವಾಲಯಕ್ಕೆ ಪ್ರತಿ ನಿತ್ಯ 50 ಸಾವಿರ ಭಕ್ತರು ಭೇಟಿ ನೀಡಿತ್ತಾರೆ. ಇನ್ನು ವಾರಾಂತ್ಯದ ದಿನಗಳಲ್ಲಿ 70 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ಬೇಸಿಗೆ ಕಾಲದಲ್ಲಿ ಶಿರಡಿಯಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಗಡಿದಾಟುತ್ತದೆ. ಈ ಬೇಗೆಯಿಂದ ಭಕ್ತರನ್ನು ಪಾರು ಮಾಡಬೇಕೆಂದು ಟ್ರಸ್ಟ್ ನಿರ್ಣಯಿಸಿರುವುದಾಗಿ ಎಂದು ಆಲಯ ಟ್ರಸ್ಟ್ ಅಧ್ಯಕ್ಷರು ವಿವರ ನೀಡಿದ್ದಾರೆ.

ಸಾಯಿ ಬಾಬಾ ದರ್ಶನಕ್ಕೆ ಬರುವ ಭಕ್ತ ಕೋಟಿಗೆ ಮನರಂಜನೆಯನ್ನು ಒದಗಿಸಲು ಟ್ರಸ್ಟ್ ಮುಂದಾಗಿದ್ದು, ಇದಕ್ಕಾಗಿ ಚರ್ಚಾ ವೇದಿಕೆ, ರಂಗಸ್ಥಳ ಕೇಂದ್ರವನ್ನು ಏರ್ಪಾಟು ಮಾಡಲಿದೆ. ಇವುಗಳೊಂದಿಗೆ ಲೇಸರ್ ಶೋಗಳು, ಐಮ್ಯಾಕ್ಸ್ ಥಿಯೇಟರ್‌ಗಳನ್ನು ನಿರ್ಮಿಸಿ ಭಕ್ತರಿಗೆ ಮತ್ತಷ್ಟು ಆಕರ್ಷಣೆ ಒದಗಿಸುವುದಾಗಿ ಟ್ರಸ್ಟ್ ಮುಖ್ಯಸ್ಥ ಕಿಶೋರ್ ಮೋರೆ ಹೇಳಿದ್ದಾರೆ.

ಐದು ಸಾವಿರ ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ರಂಗಸ್ಥಳ ಕೇಂದ್ರ ನಿರ್ಮಿಸಲಾಗುತ್ತಿದೆ. ಎರಡು ಸಾವಿರ ಮಂದಿ ಕುಳಿತುಕೊಳ್ಳಲು ಅನುಕೂಲವಾಗುವ ಸಭಾಂಗಣ ಇರುತ್ತದೆ. ಸಾಯಿ ಬಾಬಾ ಅವರ ಜೀವನ ಚರಿತ್ರೆ ಕುರಿತ ಲೇಸರ್ ಶೋಗಳನ್ನು ಪ್ರದರ್ಶಿಸಲು ಯೋಚಿಸಲಾಗುತ್ತಿದೆ ಎಂದು ಟ್ರಸ್ಟ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+