ಲಂಕನ್ ಸ್ಪಿನ್ ಗೆ ಕಿವೀಸ್ ನೀಡುವುದೇ ಉತ್ತರ?

ಕೊಲಂಬೊ, ಮಾ.29: ವಿಶ್ವಕಪ್‌2011ನ ಆತಿಥೇಯ ದೇಶ ಶ್ರೀಲಂಕಾ ಮಂಗಳವಾರ ಆರ್.ಪ್ರೇಮದಾಸ ಸ್ಟೇಡಿಯಮ್‌ನಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ನ್ನು ಎದುರಿಸಲಿದೆ.ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ಅನ್ನು ಬಗ್ಗುಬಡಿಯಲು ಬಳಸಿದ ಸ್ಪಿನ್ ತಂತ್ರವನ್ನೇ ಮತ್ತೆ ಬಳಸಲು ಲಂಕಾ ಯೋಜಿಸಿದೆ. ಈ ನಡುವೆ ಗಾಯಾಳು ಮುರಳಿ ಆಡುವುದು ಅನುಮಾನ ಎನ್ನಲಾಗಿದೆ. ಕಿವೀಸ್ ತಂಡ ನಾಯಕ ವೆಟ್ಟೋರಿ, ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
10 ವಿಶ್ವಕಪ್ ಆವೃತ್ತಿಗಳಲ್ಲಿ 6ನೆ ಬಾರಿಗೆ ಸೆಮಿಫೈನಲ್ ತಲುಪಿರುವ ನ್ಯೂಜಿಲೆಂಡ್‌ ಸಾಧನೆಯೇನೂ ಕಮ್ಮಿಯಲ್ಲ.

ಆದರೆ, ಫೈನಲ್ ತಲುಪಲು ಈ ವರೆಗೂ ಕಿವೀಸ್ ಗೆ ಸಾಧ್ಯವಾಗಿಲ್ಲ. ವಿಶ್ವಕಪ್ ಗೂ ಮುನ್ನ ಬಾಂಗ್ಲಾ ವಿರುದ್ಧ ಹೀನಾಯವಾಗಿ ಸರಣಿ ಸೋಲು ಅನುಭವಿಸಿದ್ದ ಕಿವೀಸ್ ತಂಡಕ್ಕೆ ಸೆಮಿಸ್ ಮಹತ್ವದ ಪಂದ್ಯ ಎನಿಸಿದೆ. ಇನ್ನೊಂದೆಡೆ, 1996ರ ವಿಶ್ವಚಾಂಪಿಯನ್ ಹಾಗೂ 2007ರಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿ ರನ್ನರ್ ಅಪ್ ಆದ ಲಂಕನ್ನರು ಸೆಮಿಫೈನಲ್‌ನಲ್ಲಿ ಗೆಲ್ಲುವ ವಿಶ್ವಾಸ ಹೊಂದಿದೆ.

ಮತ್ತೆ ಸ್ಪಿನ್ ದಾಳಿ: ಶ್ರೀಲಂಕಾ ತಂಡ ಲೀಗ್ ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್‌ನ್ನು 153ಕ್ಕೆ ನಿಯಂತ್ರಿಸಿ 112 ರನ್‌ಗಳ ಗೆಲುವು ಸಾಧಿಸಿತ್ತು. ಲಂಕಾದ ಸ್ಪಿನ್ನರ್‌ಗಳು ಕಿವೀಸ್‌ನ 7 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಪೈಕಿ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಖಾತೆಗೆ 4 ವಿಕೆಟ್‌ಗಳು ಬಿದ್ದಿದ್ದವು. ಆದರೆ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಮುರಳಿ, ಸೆಮಿಸ್ ನಲ್ಲಿ ಆಡುವುದು ಅನುಮಾನ ಎನಿಸಿದೆ. ವಿಶ್ವಕಪ್ ನಂತರ ಕ್ರಿಕೆಟ್ ಗೆ ವಿದಾಯ ಹೇಳಲಿರುವ ಮುರಳಿಯನ್ನು ಆಡಿಸಲು ಸಂಗಕ್ಕಾರ ಉತ್ಸುಕರಗಿದ್ದಾರೆ.

ವಿಶ್ವಕಪ್ : ಮುಖಪುಟ | ಚಿತ್ರಪಟ | ಅಂಕಗಳ ಕೋಷ್ಟಕ | ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್

ಲಂಕಾ ಬ್ಯಾಟ್ಸ್ ಮನ್ ಗಳು : ನಾಲ್ವರು ಬ್ಯಾಟ್ಸ್‌ಮನ್‌ಗಳು ಈ ವಿಶ್ವಕಪ್‌ನಲ್ಲಿ ತಲಾ 1 ಶತಕ ದಾಖಲಿಸಿದ್ದಾರೆ. ಐದು, ಆರು ಮತ್ತು ಏಳನೆ ಕ್ರಮಾಂಕದ ಆಟಗಾರರು ಅರ್ಧಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ದಿಲ್ಷಾನ್ ಹಾಗೂ ತರಂಗಾ ಆಡಿದ ಆಟ ನೋಡಿದ ಮೇಲೆ ಕಿವೀಸ್ ಬೌಲರ್ ಗಳ ಅಭ್ಯಾಸ ಇನ್ನೂ ಜೋರಾಗಿ ನಡೆದಿದೆ ಎಂಬ ಸುದ್ದಿಯಿದೆ. ಬೌಲಿಂಗ್‌ನಲ್ಲಿ ಲಸಿತ್ ಮಾಲಿಂಗ ಅಷ್ಟೇನೂ ಮಾರಕ ಬೌಲಿಂಗ್ ನಡೆಸಿಲ್ಲ. ಮುತ್ತಯ್ಯ ಮುರಳೀಧರನ್, ಅಜಂತ ಮೆಂಡಿಸ್ ರನ್ನು ನೆಚ್ಚಿಕೊಂಡಿದೆ. ಹೆರಾಥ್ ಕೂಡಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ವೇಗಿ ಕುಲಶೇಖರ ಮತ್ತೆ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಕ್ವಾಟರ್ ಫೈನಲ್ ಗೆ ಬಳಸಿದ ಪಿಚ್ ಅನ್ನೇ ಸೆಮಿಸ್ ಗೂ ಬಳಸುತ್ತಿರುವ ಬಗ್ಗೆ ಕಿವೀಸ್‌ ನಾಯಕ ವೆಟ್ಟೋರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ತಂಡ ಸಮತೋಲನದಿಂದ ಕೂಡಿದೆ, ಜೇಕಬ್ ಓರಂ ಮತ್ತೆ ಲಯ ಕಂಡುಕೊಂಡಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸುಧಾರಿಸಿದರೆ ಶ್ರೀಲಂಕಾಕ್ಕೆ ತ್ರೀವ್ರ ಪೈಪೋಟಿ ನೀಡಬಹುದು ಎಂದು ವೆಟ್ಟೋರಿ ಹೇಳಿದ್ದಾರೆ. ಬ್ರೆಂಡಾನ್ ಮೆಕಲಮ್ ಸೋದರರು, ಜೆಸ್ಸೆ ರೈಡರ್, ರಾಸ್ ಟೇಲರ್ ಜೊತೆಗೆ ಗುಪ್ಟಿಲ್ ಮಹತ್ವದ ಪಾತ್ರವಹಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+