ಮಹಾತ್ಮ ಗಾಂಧೀಜಿ ಸಲಿಂಗಕಾಮಿ, ಲಂಪಟ!

1908ರ ಹೊತ್ತಿಗೆ ಕಸ್ತೂರಿಬಾರಿಂದ ದೂರವಾಗಿದ್ದ ಗಾಂಧೀ, ಜರ್ಮನ್ ಜ್ಯೂಯಿಷ್ ದಕ್ಷಿಣ ಆಫ್ರಿಕದ ಆರ್ಕಿಟೆಕ್ಟ್ ಮತ್ತು ಬಾಡಿ ಬಿಲ್ಡರ್ ಹರ್ಮನ್ ಕಲ್ಲೇನ್‌ಬ್ಯಾಕ್‌ನೊಂದಿಗೆ ಸಲಿಂಗಕಾಮ ನಡೆಸುತ್ತಿದ್ದರು. ಆ ವೇಳೆ ಅವರು, "ನೀನು ನನ್ನ ದೇಹವನ್ನು ಸಂಪೂರ್ಣವಾಗಿ ನಿನ್ನ ವಶಕ್ಕೆ ತೆಗೆದುಕೊಂಡಿದ್ದಿ . ಇದು ಗುಲಾಮಗಿರಿ ವಿರೋಧಿಸಿದವನೊಂದಿಗೆ ಪ್ರತೀಕಾರ ಎಂದು ಗಾಂಧಿ ಹೇಳುತ್ತಿದ್ದರು" ಎಂದು ಲೀವೇಲ್ಡ್ ಉಲ್ಲೇಖಿಸಿದ್ದಾರೆ.
1904ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯನ್ನು ಭೇಟಿಯಾಗಿದ್ದ ಹರ್ಮನ್, ಗಾಂಧೀಜಿ ಅವರ ಸತ್ಯಾಗ್ರಹ ಎಂಬ ಹೊಸ ಕಲ್ಪನೆಗೆ ಮಾರು ಹೋಗಿದ್ದ. ಗಾಂಧೀ ಜೊತೆ ಗೆಳೆತನ ಬೆಳೆಸಿದ್ದ ಹರ್ಮನ್, ಮುಂದೆ ಐಷಾರಾಮಿ ಬದಲಾಗಿ ಸಾಮಾನ್ಯ ಜೀವನ ಆರಂಭಿಸಿದ್ದ ಎಂದು ಪುಲಿಟ್ಜರ್ ಪ್ರಶಸ್ತಿ ವಿಜೇತ ಲೇಖಕ ಪತ್ರಕರ್ತ ಲೀವೇಲ್ಡ್ ವಿವರಿಸಿದ್ದಾರೆ.
ಗಾಂಧಿ ಮತ್ತು ಹರ್ಮನ್ ಪರಸ್ಪರ ತುಂಬಾ ಹತ್ತಿರವಾಗಿದ್ದರು. ಜಗತ್ತಿನ ಪರಿವಿಲ್ಲದಂತೆ ಹಾಗೂ ಯಾರೂ ಅರಿಯದಂತೆ ಗುಪ್ತವಾದ ಆಳವಾದ ಪ್ರೀತಿ ಇಬ್ಬರ ನಡುವೆ ಇತ್ತು ಎಂದು ಲೀವೆಲ್ಡ್ ಹೇಳಿದ್ದಾರೆ. ಇದಲ್ಲದೆ, ಗಾಂಧಿ ಜನಾಂಗೀಯವಾದಿಯಾಗಿದ್ದರು ಅವರು ದಕ್ಷಿಣ ಆಫ್ರಿಕಾದ ಕಪ್ಪು ಜನರನ್ನು ದೂಷಿಸುತ್ತಿದ್ದರು ಎಂದಿದ್ದಾರೆ
ಅಭಿಮಾನಿಗಳ ಆಕ್ರೋಶ: ಈ ಬರಹ ಬಗ್ಗೆ ಜಗತ್ತಿನಾದ್ಯಂತ ಗಾಂಧೀ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪುಸ್ತಕ ನಿಷೇಧಕ್ಕೆ ಒತ್ತಡ ಹೆಚ್ಚಿದೆ, 20 ನೇ ಶತಮಾನದಲ್ಲಿ ಅದ್ವಿತೀಯ ವ್ಯಕ್ತಿಯಾಗಿದ್ದ ಗಾಂಧೀಜಿ ಬಗ್ಗೆ ಇಲ್ಲ ಸಲ್ಲದ ಆರೋಪ ಹೊರೆಸಿ ಪುಸ್ತಕ ಪ್ರಚಾರ ಮಾರಾಟ ಗಳಿಸುವ ದಂಧೆ ಇದಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ.












Click it and Unblock the Notifications