ಜಪಾನಿನಲ್ಲಿ ಮತ್ತೆ ಭೂಕಂಪ, ಸುನಾಮಿ ಕಟ್ಟೆಚ್ಚರ
ಟೋಕಿಯೊ,
ಮಾ. 28: ಇತ್ತೀಚೆಗಷ್ಟೇ ಭೀಕರ ಸುನಾಮಿಯಿಂದ ತತ್ತರಿಸಿರುವ ಜಪಾನಿನಲ್ಲಿ ಸೋಮವಾರ ಬೆಳಗ್ಗೆ ಮತ್ತೆ ಭಾರಿ ಭೂಕಂಪವಾಗಿದ್ದು, ಸುನಾಮಿ ಕಟ್ಟೆಚ್ಚರ ಘೋಷಿಸಲಾಗಿದೆ. ತಕ್ಷಣಕ್ಕೆ ಯಾವುದೇ ಸಾವುನೋವು ವರದಿಯಾಗಿಲ್ಲ. 'ಭೂಕಂಪದ ಪ್ರಮಾಣ 6.5ರಷ್ಟಿತ್ತು. ಇದರಿಂದ 2 ಅಡಿ ಎತ್ತರದ ಅಲೆಗಳು ಈಶಾನ್ಯ ಭಾಗದಲ್ಲಿರುವ ಮಿಯಾಗಿ ಪರ್ಫೆಕ್ಚರ್ ತೀರಕ್ಕೆ ಬಡಿಯುವ ಸಾಧ್ಯತೆ ಇದೆ. ಸುನಾಮಿ ಬಗ್ಗೆ ಜಾಗ್ರತೆ ಇರಲಿ' ಎಂದು ಜಪಾನಿನ ಹವಾಮಾನ ಇಲಾಖೆ ಘೋಷಿಸಿದೆ. id="toptextpromo">ಸುನಾಮಿ
ಕಟ್ಟೆಚ್ಚರ ಸ್ಥಳಿಯ ಮಟ್ಟದಲ್ಲಿದೆ. ಆದ್ದರಿಂದ ನೆರೆಯ ಕರಾವಳಿಗಳನ್ನು ಎಚ್ಚರಿಸಿಲ್ಲ. ಜಪಾನಿನ ಕಾಲಮಾನದ ಪ್ರಕಾರ ಸೋಮವಾರ ಬೆಳಗ್ಗೆ 7.23ರಲ್ಲಿ (ಮಾರ್ಚ್ 28) 6.5 ತೀವ್ರತೆಯ ಭೂಕಂಪ ಸಂಭವಿಸಿದೆ. ಹೊನ್ಷು ಪೂರ್ವ ಕರಾವಳಿಯಲ್ಲಿ 6 ಕಿ.ಮೀ. ಆಳದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು ಎಂದು ಅಮೆರಿಕ ಹವಾಮಾನ ಇಲಾಖೆ ಖಚಿತಪಡಿಸಿದೆ. id='are-slot-1' class='oiad oi-axt oiadv'> id='top-searched-articles'>ಮಾರ್ಚ್
11ರಂದು 9.1 ತೀವ್ರತೆಯ ಭೂಕಂಪ ತದನಂತರ ಬಲಾಢ್ಯ ಸುನಾಮಿ ಜಪಾನಿಗೆ ಬಡಿದಿತ್ತು. ಇದರಿಂದ ಅಂದಾಜು 20 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಸುನಾಮಿಯಿಂದ ಬೆಂಕಿ ಕಾಣಿಸಿಕೊಂಡು ಫುಕೋಶಿಮಾ ಅಣು ಸ್ಥಾವರ ಸಂಪೂರ್ಣವಾಗಿ ಜ್ವಾಲೆಗಳಲ್ಲಿ ನಂದಿಹೋಗಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಈ ಮಧ್ಯೆ, ಸುನಾಮಿ ಬಾಂಬ್ ಪ್ರಯೋಗಿಸಿ ಜಗತ್ತಿನ ದೊಡ್ಡಣ್ಣ ಅಮೆರಿಕವೇ ಜಪಾನಿನಲ್ಲಿ ಭೂಕಂಪ, ಸುನಾಮಿ ಸಂಭವಿಸುವಂತೆ ದುಸ್ಸಾಹ ನಡೆಸಿತು ಎಂಬ ಚರ್ಚೆ ನಡೆದಿದೆ.











Click it and Unblock the Notifications