ರಿಲಯನ್ಸ್ ನಿಂದ 1099ಕ್ಕೆ ಜಂಗಮ ಇಂಟರ್ ನೆಟ್

Reliance USB Modem Price
ಮುಂಬೈ, ಮಾ.25: ಕೋಟ್ಯಾಂತರ ಭಾರತೀಯರಿಗೆ ಇಂಟರ್ ನೆಟ್ ಸಂಪರ್ಕ ಒದಗಿಸುವ ಗುರಿಯನ್ನು ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಸಮೂಹದ ಅಂಗ ಸಂಸ್ಥೆ ರಿಲೆಯನ್ಸ್ ಕಮ್ಯೂಕೇಷನ್ ಹೊಂದಿದೆ. ಈ ನಿಟ್ಟಿನಲ್ಲಿ 'ಸಿಟಿ ಅನ್ ಲಿಮಿಟೆಡ್' ಎಂಬ ಯೋಜನೆಯ ಅಡಿಯಲ್ಲಿ ಇಂಟರ್ ನೆಟ್ USB ಸ್ಟಿಕ್ ಮೋಡಮ್ ಅನ್ನು ಕೇವಲ 1099 ರು. ಗೆ ನೀಡುತ್ತಿದ್ದು, ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿಗೆ ನಾಂದಿ ಹಾಡಿದೆ.

ಅಷ್ಟೇ ಅಲ್ಲದೆ ರಿಲಯನ್ಸ್ ನೆಟ್ ಕನೆಕ್ಟ್ ಯುಎಸ್ ಬಿ ಪ್ರೀಪೇಯ್ಡ್ ಗ್ರಾಹಕರಿಗೆ ಆಕರ್ಷಕ ಹಾಗೂ ಕೈಗೆಟುಕುವ ದರದಲ್ಲಿ ಅನಿಯಮಿತ ಡಾಟಾ ಬಳಕೆ ಸೌಲಭ್ಯ ನೀಡುತ್ತಿದೆ. ಕೇವಲ 169 ರು.ಗೆ ರೀಚಾರ್ಚ್ ಮಾಡಿಸಿಕೊಂಡು ಇಂಟರ್ ನೆಟ್ ಬಳಕೆ ಎಲ್ಲೆಡೆ ಮಾಡಲು ಸಾಧ್ಯಮಾಡಿದೆ. ಈ ಹೊಸ ಯೋಜನೆ ದೇಶದ ಪ್ರಮುಖ ನಗರಗಳಲ್ಲಿ ಲಭ್ಯವಿರುತ್ತದೆ ಎಂದು ರಿಲೆಯನ್ಸ್ ಸಂಸ್ಥೆ ಹೇಳಿದೆ.

ಟೆಲಿಕಾಂ ಸೇವಾ ಕ್ಷೇತ್ರದಲ್ಲಿ ಬ್ರ್ಯಾಡ್ ಬ್ಯಾಂಡ್ ಮೂಲಕ ಕ್ರಾಂತಿ ಉಂಟು ಮಾಡಲು ಸರ್ಕಾರಿ ಸ್ವಾಮ್ಯದ ಸಂಸ್ಥೆ ಶ್ರಮ ಪಡುತ್ತಿದೆ. ರಿಲಯನ್ಸ್ ಕೂಡಾ 'ಸಿಟಿ ಅನ್ ಲಿಮಿಟೆಡ್' ಯೋಜನೆ ಮೂಲಕ ಹೊಸ ಡಿಜಿಟಲ್ ಕ್ರಾಂತಿ ಹುಟ್ಟು ಹಾಕಲು ಸಿದ್ಧವಾಗಿದೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಇಂಟರ್ ನೆಟ್ ಸಂಪರ್ಕ ಎಲ್ಲರಿಗೂ ಲಭಿಸುವಂತೆ ಮಾಡುವುದು ನಮ್ಮ ಉದ್ದೇಶ ಎಂದು ರಿಲೆಯನ್ಸ್ ಕಮ್ಯೂನಿಕೇಷನ್ ಹೇಳಿಕೊಂಡಿದೆ.

ದೈನಂದಿನ ಅಗತ್ಯಗಳಿಗೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಇಂಟರ್ನೆಟ್ ಬಳಕೆ ಹೆಚ್ಚಾಗುವುದರಿಂದ ದೇಶದ ಸಾಮಾನ್ಯ ನಾಗರೀಕ ಕೂಡಾ ಆರ್ಥಿಕವಾಗಿ ಬೆಳೆಯಲು ಸಹಾಯಕವಾಗುತ್ತದೆ ಎಂದು ರಿಲಯನ್ಸ್ ಕಮ್ಯೂನಿಕೇಷನ್ ನ ನಿಸ್ತಂತು ವ್ಯಾಪಾರ ವಿಭಾಗದ ಅಧ್ಯಕ್ಷ ಮಹೇಶ್ ಪ್ರಸಾದ್ ಹೇಳುತ್ತಾರೆ. ಸಣ್ಣ ಉದ್ಯಮಿಗಳು, ಗೃಹಸ್ಥರು, ವಿದ್ಯಾರ್ಥಿಗಳು ಮುಂತಾದವರಿಗೆ ಸಿಟಿ ಅನ್ ಲಿಮಿಟೆಡ್ ಯೋಜನೆ ಅನುಕೂಲಕರವಾಗಿದೆ. ಸುಮಾರು 153 ಕೆಬಿಪಿಎಸ್ ನಷ್ಟು ವೇಗದಲ್ಲಿ ವೈರ್ ಲೆಸ್ ಇಂಟರ್ ನೆಟ್ ಸಂಪರ್ಕ ಸಾಧ್ಯ ಎಂದು ಸಂಸ್ಥೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+