ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಂಡೂಲ್ಕರ್ v/s ಪಾಂಟಿಂಗ್ ಕದನ ಕುತೂಹಲ

By Srinath
|
Google Oneindia Kannada News

ಅಹಮದಾಬಾದ್, ಮಾ. 23: ಸೆಮಿಫೈನಲ್ ಹಂತ ತಲುಪಲು ಆತಿಥೇಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಲ್ಲಿನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಾಳೆ (ಮಾ.24) ಭಾರಿ ಕದನ ನಡೆಯುವುದು ಖಚಿತವಾಗಿದೆ. ಆದರೆ ಅಸಲಿಗಿದು ತೆಂಡೂಲ್ಕರ್ v/s ಪಾಂಟಿಂಗ್ ಜಿದ್ದಾಜಿದ್ದಿಯಾಗುವ ಲಕ್ಷಣಗಳಿವೆ. ಇಬ್ಬರಿಗೂ ಇದು ಕೊನೆಯ ವಿಶ್ವಕಪ್ ಎಂಬುದು ಹೆಚ್ಚು ಮಹತ್ವ ಪಡೆದಿದ್ದು, ಈ ಬ್ಯಾಟಿಂಗ್ ದಿಗ್ಗಜರು ತಮ್ಮ ಅಧಿಪತ್ಯ ಸ್ಥಾಪಿಸಲು ಸಜ್ಜಾಗಿದ್ದಾರೆ.


2015ರ ಮುಂದಿನ ಕಪ್ ವೇಳೆಗೆ ಇಬ್ಬರೂ ಖಂಡಿತ ನಿವೃತ್ತರಾಗಿರುತ್ತಾರೆ. ಈ ಹಿಂದೆ 2003ರ ವಿಶ್ವಕಪ್-ನಲ್ಲಿ ಎರಡೂ ತಂಡಗಳು ಜೊಹಾನ್ಸ್ ಬರ್ಗ್-ನಲ್ಲಿ ಮುಖಾಮುಖಿಯಾದಾಗ ಪಾಂಟಿಂಗ್ ಆರ್ಭಟಿಸಿದ್ದರು. 121 ಬಾಲ್-ಗಳಲ್ಲಿ 140 ಬಾರಿಸಿದ್ದ ಪಾಂಟಿಂಗ್ ಭಾರತ ಬ್ಯಾಂಟಿಂಗ್ ಇಳಿಯುವುದಕ್ಕೂ ಮುನ್ನವೇ ಆಸ್ಟ್ರೇಲಿಯಾಗೆ ಗೆಲುವು ತಂದಿಟ್ಟಿದ್ದರು. ಆಸ್ಟ್ರೇಲಿಯಾ ಕೇವಲ ಎರಡು ವಿಕೆಟ್ ಕಳೆದುಕೊಂಡು 39 ರನ್ ಬೃಹತ್ ಮೊತ್ತ ಪೇರಿಸಿದ್ದೇ ಬಂತು ಭಾರತ ಮರುಮಾತನಾಡದೆ ಸೋಲೊಪ್ಪಿತ್ತು. ಅಂದಹಾಗೆ ಆ ಪಂದ್ಯದಲ್ಲಿ ತೆಂಡೂಲ್ಕರ್ ಬಾರಿಸಿದ್ದು ಕೇವಲ 4 ರನ್. ಅಂದಹಾಗೆ ತೆಂಡೂಲ್ಕರ್ ವಿಶ್ವ ಕಪ್-ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಇದುವರೆಗೆ ಗಳಿಸಿರುವ ಅತ್ಯಧಿಕ ಮೊತ್ತ 90. ಅದೂ 1996ರಲ್ಲಿ ಮುಂಬಯಿಯಲ್ಲಿ. ನಾಲ್ಕು ವಿಶ್ವ ಕಪ್-ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರ ಬ್ಯಾಟಿಂಗ್ ಸರಾಸರಿ ಕೇವಲ 28.

ಎಂಟು ವರ್ಷಗಳ ಹಿಂದಿನ ಈ ಕಹಿ ನೆನಪನ್ನು ಆಳಿಸಿಹಾಕುವುದಾದರೆ ತಮ್ಮ ದಾಖಲೆ ಉತ್ತಮ ಪಡಿಸಿಕೊಳ್ಳಲು ಸಚಿನ್ ತೆಂಡೂಲ್ಕರ್ ಈಗ ಉತ್ತಮ ಸ್ಥಿತಿಯಲ್ಲಿದ್ದಾರೆ. 50,000 ಕಟ್ಟರ್ ಅಭಿಮಾಣಿಗಳ ಎದುರು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸಚಿನ್ ಸಹ ಹಾತೊರೆಯುತ್ತಿದ್ದಾರೆ. ಅವರು ಇದುವರೆಗೆ ಟೆಸ್ಟ್ ಮತ್ತು ಏಕ ದಿನ ಪಂದ್ಯಗಳಲ್ಲಿ ಇದುವರೆಗೆ 99 ಶತಕ ಬಾರಿಸಿದ್ದು ಶತಕಗಳ ಸರಮಾಲೆಗೆ ಮತ್ತೊಂದು ಸೆಂಚುರಿ ಪೋಣಿಸಬೇಕಿದೆ.
ಗಮನಾರ್ಹವೆಂದರೆ ತೆಂಡೂಲ್ಕರ್ ಹಾಲಿ ಪಂದ್ಯಾವಳಿಯಲ್ಲಿ ಉತ್ತಮ ಫಾರಂನಲ್ಲಿದ್ದಾರೆ. ಎರಡು ಸೆಂಚುರಿ ಬಾರಿಸಿದ್ದರೂ ತಂಡಕ್ಕೆ ಗೆಲುವು ಲಭ್ಯವಾಗಿಲ್ಲವಾದರೂ ತಮ್ಮ ಅದ್ಭುತ ಓಘ ಕಾಯ್ದುಕೊಂಡಿದ್ದಾರೆ.

ಆದರೆ ಪಾಂಟಿಂಗ್ ವಿಷಯದಲ್ಲಿ ಇದೇ ಮಾತನ್ನು ಹೇಳುವಂತಿಲ್ಲ. 6 ಪಂದ್ಯಗಳಲ್ಲಿ ಕೇವಲ 102 ರನ್ ಬಾರಿಸಿದ್ದಾರೆ. 36 ಇದುವರೆಗಿನ ಗರಿಷ್ಠ ಮೊತ್ತ. 358 ಪಂದ್ಯಗಳನ್ನಾಡಿರುವ ಪಾಂಟಿಂಗ್-ಗೆ ಇದು ಕಳಪೆ ಪ್ರದರ್ಶನವೇ ಎನ್ನಬಹುದು. ಭಾರತದ ವಿರುದ್ಧ ಭಾರತದಲ್ಲಿ ಅವರು 24 ಪಂದ್ಯಗಳನ್ನಾಡಿದ್ದು, 45 ಸರಾಸರಿ ಕಾಯ್ದುಕೊಂಡಿದ್ದಾರೆ. ಆದರೆ ಎಂಟು ವರ್ಷದ ಹಿಂದೆ ಬೆಂಗಳೂರಿನಲ್ಲಿ ಬಾರಿಸಿದ ಶತಕವೇ ಅವರ ಕೊನೆಯ ಶತಕವಾಗಿದೆ. ತಾಸ್ಮೇನಿಯಾದ ಈ ಆಟಗಾರ ಕಪ್ತಾನನಾಗಿಯೂ ತಮ್ಮ ಜೀವನದ ಸಂಧ್ಯಾಕಾಲದಲ್ಲಿದ್ದಾರೆ ಎನ್ನಬಹುದು.

ಸುದೀರ್ಘ ಕಾಲದಿಂದ ಆಡುತ್ತಿರುವ ಪಾಟಿಂಗ್ ತಂಡದ ಮತ್ತು ಎಸಿಬಿಯ ಸದೃಢ ವಿಶ್ವಾಸ ಹೊಂದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ ಆದರೆ ವೈಯಕ್ತಿಕವಾಗಿ ಅವರೀಗ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸ ಬೇಕಾಗಿದೆ. ಅದಕ್ಕಿಂತ ಹೆಚ್ಚಿಗೆ ತೆಂಡೂಲ್ಕರ್ ಮಾದರಿಯಲ್ಲಿ ಉತ್ತಮ ಕ್ರೀಡಾ ಮನೋಭಾವವನ್ನೂ ತೋರಬೇಕಾಗಿದೆ. ಗುರುವಾರದ ಪಂದ್ಯ ಈ ಬ್ಯಾಟಿಂಗ್ ದಿಗ್ಗಜರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅಂತಿಮ ಅವಕಾಶ ಕಲ್ಪಿಸಲಿದೆ.

English summary
World Cup 2011 : The quarterfinal clash between Australia and India, on Thursday (March 24), is not only about who stays in the hunt for the title but also about two of game's modern day greats Tendulkar and Ponting squaring off in a World Cup game for what appears to be one last time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X