ಸ್ಪೈಸ್ ಸ್ಮಾರ್ಟ್ ಪ್ರೊಜೆಕ್ಟರ್ ಫೋನ್

ಸ್ಪೈಸ್ ಎಂ-9000 ಪಾಪ್ ಕಾರ್ನ್ ಪಾಕೆಟ್ ಪ್ರೊಜೆಕ್ಟರ್ ಸೌಲಭ್ಯದ ಜೊತೆಗೆ ಸ್ಮಾರ್ಟ್ ಫೋನ್ ಗಳಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಮೊಬೈಲ್ ಗಳಿಗೆ ಪ್ರತಿಸ್ಪರ್ಧೆ ಒಡ್ಡಬಲ್ಲದು. ಸ್ಪೈಸ್ ಪಾಪ್ ಕರ್ನ್ ನ ಪ್ಯಾಕೆಟ್ ಪ್ರೊಜೆಕ್ಟರ್ ಮೂಲಕ ಚಿತ್ರಗಳು ಹಾಗೂ ವಿಡಿಯೋಗಳನ್ನು ದೊಡ್ಡ ಸ್ಕ್ರೀನ್ ನಲ್ಲಿ ತೋರಿಸಬಹುದಾಗಿದೆ.
ಇದರ ಜೊತೆಗೆ ಅನಲಾಗ್ ಟಿವಿ ಚಿಪ್ ಕೂಡಾ ಇದ್ದು, ಟಿವಿ ಚಾನೆಲ್ ಗಳನ್ನು ಮೊಬೈಲ್ ನಲ್ಲಿ ನೋಡಬಹುದಾಗಿದೆ. ಟ್ರೈಪಾಡ್ ಕೂಡಾ ನೀಡಲಾಗಿದ್ದು, ಅರಾಮವಾಗಿ ಟಿವಿ ನೋಡಲು ಹಾಗೂ ಪ್ರೊಜೆಕ್ಟರ್ ಆಗಿ ಬಳಸಲು ಸಹಾಯಕವಾಗಿದೆ. ಸ್ಪೈಸ್ ಮೊಬೈಲ್ ನಲ್ಲಿ ಡಾಕ್ಯುಮೆಂಟ್ ವೀವರ್ ಹಾಗೂ ಲೇಸರ್ ಪಾಂಟರ್ ಕೂಡಾ ಇದೆ. ಉಳಿದಂತೆ 262K QVGA ಡಿಸ್ಪೈ ಸ್ಕ್ರೀನ್ ಇದೆ. ಡುಯಲ್ ಸಿಮ್(ಜಿಸಿಎಂ + ಜಿಸಿಎಂ) ಸೌಲಭ್ಯಗಳಿವೆ. 3.2 ಮೆಗಾ ಪಿಕ್ಸಲ್ ಕೆಮೆರಾ ಇದೆ. ಬ್ಲೂಟೂಥ್, ಜಿಪಿಆರ್ ಎಸ್, ಎಫ್ ಎಂ ರೇಡಿಯೊ, ವಿಡಿಯೋ ಪ್ಲೇಯರ್ ಕೂಡಾ ಇದೆ.
ಪಾಪ್ ಕಾರ್ನ್ M-9000 ವಿಶೇಷತೆಗಳು: ಪ್ರೊಜೆಕ್ಟರ್ ಫೋನ್, ಮಲ್ಟಿ ಸಿಮ್ ಸೌಲಭ್ಯ, ಅನಲಾಗ್ ಟಿವಿ, ಡಾಕ್ಯುಮೆಂಟ್ ವೀವರ್ , ವಿಡಿಯೋ ಆನ್ ಡಿಮ್ಯಾಂಡ್, ಕ್ವ್ಯಾಡ್ ಬ್ಯಾಂಡ್, ಎಫ್ ಎಂ ರೇಡಿಯೋ ರೆಕಾರ್ಡಿಂಗ್ ಸಹಿತ, 1200 mAh ಬ್ಯಾಟರಿ, JAVA ಬೆಂಬಲಿತ ಮೊಬೈಲ್ ಇನ್ನೂ ಅನೇಕ ಸೌಲಭ್ಯಗಳು
ಸುಮಾರು 3.5 ಗಂಟೆಗಳ ಟಾಕ್ ಟೈಮ್ ಹಾಗೂ 300 ಗಂಟೆಗಳ ಸ್ಟಾಂಡ್ ಬೈ ಟೈಮ್ ಹೊಂದಿರುವ ಸ್ಪೈಸ್ ಪ್ರೊಜೆಕ್ಟರ್ ಮೊಬೈಲ್ ಬೆಲೆ ಕೈಗೆಟಕುವಂತಿದೆ. ಭಾರತದ ಪ್ರಮುಖ ಎಲೆಕ್ಟ್ರಾನಿಕ್ ಮಳಿಗೆಗಳಲ್ಲಿ ಲಭ್ಯವಿದೆ.












Click it and Unblock the Notifications