ಗೋವಾ ತೀರದ ಕಾಮ ದಾಹಕ್ಕೆ ಬ್ರೇಕ್ ಹಾಕಿ

ಪಣಜಿಯಿಂದ ಸುಮಾರು 40 ಕಿಮೀ ದೂರದಲ್ಲಿರುವ ಕೋಲ್ವ ಬೀಚಿನಲ್ಲಿ ಸುಮಾರು 20 ಯುವಕನೊಬ್ಬ 11ರ ಹರೆಯದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ, ಎರಡು ದಿನಗಳ ಹಿಂದೆ ನಡೆದಿತ್ತು. ಎಫ್ ಐಆರ್ ದಾಖಲಿಸಿಕೊಂಡ ಪೊಲೀಸರು ಸರಿಯಾದ ಲೀಡ್ ಇನ್ನೂ ಸಿಕ್ಕಿಲ್ಲ. ಆರೋಪಿ ಸುಳಿವು ಸಿಕ್ಕಿದೆ ಎಂದಿದ್ದರು. ಆದರೆ, ಈವರೆಗೂ ಆರೋಪಿಯ ಹೆಸರನ್ನು ಬಹಿರಂಗಪಡಿಸದೆ, ಆತನನ್ನು ಬಂಧಿಸದೆ ಇರುವುದು ಮಹಿಳಾ ಸಂಘಟನೆಯ ಕಣ್ಣು ಕೆಂಪಗಾಗಿಸಿದೆ.
ಘಟನೆ ಹಿನ್ನೆಲೆ: ಬುಧವಾರ ಮುಸ್ಸಂಜೆ ಹೊತ್ತು ಬಾಲಕಿ ತನ್ನ ಕಿರಿಯ ಸೋದರಿ ಜೊತೆ ಬೀಚಿನ ಹತ್ತಿರ ಬಸ್ಸಿಗಾಗಿ ಕಾಯುತ್ತಿದ್ದಳು. ಈ ವೇಳೆ 22ರ ಹರೆಯದ ಆರೋಪಿ ಯುವಕ ಅವರಿಗೆ ಸ್ವೀಟ್ ನೀಡುವುದಾಗಿ ಹೇಳಿ ಬೀಚಿಗೆ ಕರೆದುಕೊಂಡು ಹೋದ. ಅಲ್ಲಿ ಬಾಲಕಿಯನ್ನು ಪೊದೆಯೊಂದಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾನೆ ಎಂದು ದೂರಲಾಗಿದೆ. ವಿಷಯ ತಿಳಿದ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಗೋವಾ ಬೀಚುಗಳಲ್ಲಿ ಯುವತಿಯರ ಮೇಲೆ ನಿರಂತರ ಅತ್ಯಾಚಾರ, ಕೊಲೆಯಂತಹ ಘಟನೆಗಳು ನಡೆಯುತ್ತಿದ್ದರೂ ಪೊಲೀಸರು ನಿಷ್ಕ್ರಿಯರಾಗಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಮಹಿಳೆಯರ ಸಹಿತ ಪ್ರವಾಸಿಗರಿಗೆ ಇಲ್ಲಿ ಸುರಕ್ಷತೆ ಇಲ್ಲ. ಅನೈತಿಕ ಟಚುವಟಿಕೆಗಳಿಗೆ ಆಶ್ರಯತಾಣವಾಗುವುದನ್ನು ತಪ್ಪಿಸಬೇಕು. ಕೋಸ್ಟಲ್ ಗಾರ್ಡ್ ಹೆಚ್ಚಿಸಬೇಕು. ಪೊಲೀಸರು ಸಂಜೆ ವೇಳೆ ಇಲ್ಲಿ ಗಸ್ತು ತಿರುಗಬೇಕು. ಪ್ರವಾಸಿಗರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಬೈಲಾಂಚೋ ಏಕ್ ವೋಟ್ ಸಂಘಟನೆ ಮುಖ್ಯಸ್ಥೆ ಆವುದಾ ವೇಗಸ್ ಆಗ್ರಹಿಸಿದ್ದಾರೆ.












Click it and Unblock the Notifications