9ನೇ ತರಗತಿ ಬಾಲೆ ವಿಶ್ವದ ಕಿರಿಯ ಸಿಇಒ

ಅನಿಮೇಷನ್ ತಂತ್ರಜ್ಞಾನ ಸಂಸ್ಥೆ ಸೆಪ್ಪನ್ ಕಂಪೆನಿಯನ್ನು ತನ್ನ ತಂದೆಯಿಂದ ಪಡೆದ ಸಿಂಧೂಜಾ, ಅಕ್ಟೋಬರ್ 2010 ರಿಂದ ಕಂಪೆನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೈದರಾಬಾದಿನಲ್ಲಿ ನಡೆದ ಗೇಮಿಂಗ್ ಹಾಗೂ ಅನಿಮೇಷನ್ ಸಮಾವೇಶದಲ್ಲಿ ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ ವೇರ್ ಅಂಡ್ ಸರ್ವಿಸಸ್ ಕಂಪೆನೀಸ್(NASSCOM) ನಿಂದ ಅತ್ಯಂತ ತ್ವರಿತ ಗತಿಯಲ್ಲಿ 2ಡಿ ಹಾಗೂ 3ಡಿ ಅನಿಮೇಟರ್ ಎಂಬ ಪ್ರಶಸ್ತಿಯನ್ನು ಸಿಂಧೂಜಾಗೆ ನೀಡಿದೆ.
ಭಾರತದಲ್ಲಿ ಅನಿಮೇಷನ್ ತಂತ್ರಜ್ಞಾನ ಪ್ರತಿದಿನ ಬೆಳಯುತ್ತಿದ್ದು, ಅನಿಮೇಷನ್ ಎಂದರೆ ನನಗೆ ಪ್ರಾಣ. ಸಿಇಒ ಸ್ಥಾನಕ್ಕೆ ಬೇಕಾದ ಸಾಮರ್ಥ್ಯಗಳನ್ನು ಇನ್ನೂ ಕಲಿಯುತ್ತಿದ್ದೇನೆ. 160 ಜನ ಉದ್ಯೋಗಿಗಳಿರುವ ಕಂಪೆನಿಯಲ್ಲಿ ವಯೋಮಿತಿ ತಾರಾತಮ್ಯವಿಲ್ಲದೆ ಅನಿಮೇಷನ್ ಕಲಿತು, ಬಳಸುತ್ತಿದ್ದೇವೆ ಎಂದು ಸಿಂಧೂಜಾ ಹೇಳಿದ್ದಾರೆ.
ಇತ್ತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಸುಹಾಸ್ ಗೋಪಿನಾಥ್ ಅವರನ್ನು ಯಂಗ್ ಗ್ಲೋಬಲ್ ಲೀಡರ್ ಎಂದು ಗುರುತಿಸಿ 2008-09ನೇ ಸಾಲಿನ ವಿಶ್ವ ಆರ್ಥಿಕ ವೇದಿಕೆ(World Economic Forum) ಗೌರವಿಸಿದೆ. ಗ್ಲೋಬಲ್ ಐಎನ್ ಸಿ ಎಂಬ ಬಹುರಾಷ್ಟ್ರೀಯ ಕಂಪೆನಿಯ ಸ್ಥಾಪಕ ಹಾಗೂ ಸಿಇಒ ಆಗಿ ಸುಹಾಸ್ ಕಾರ್ಯ ನಿರ್ವಹಿಸುತ್ತಿದ್ದಾರೆ.












Click it and Unblock the Notifications