ನರೇಂದ್ರ ಮೋದಿ ಸೇನಾ ಕಮಾಂಡರ್-ನಷ್ಟೇ ಖಡಕ್
ಅಹಮದಾಬಾದ್,
ಮಾ. 15: 'ಈ ನರೇಂದ್ರ ಮೋದಿ ಇದ್ದಾರಲ್ಲಾ! ಅದೇ ಗುಜರಾತಿನ ಮುಖ್ಯಮಂತ್ರಿ. ಆತ ಆರ್ಮಿ ಕಮಾಂಡರ್-ನಷ್ಟೇ ಖಡಕ್. ಸೇನೆ ಕಾರ್ಯನಿರ್ವಹಿಸುವಂತೆ ಕೆಲಸ ಮಾಡುತ್ತಾರೆ' ಎಂದು ಭಾರತೀಯ ಸೇನೆಯ ಅತ್ಯಂತ ಹಿರಿಯ ಅಧಿಕಾರಿಯೊಬ್ಬರು ಮೋದಿಯನ್ನು ವಾಚಾಮಗೋಚರ ಹೊಗಳಿಬಿಟ್ಟಿದ್ದಾರೆ. ಇದರಿಂದ ಮೋದಿ ಅಭಿಮಾನಿಗಳಿಗೆ ಹಾಲು ಕುಡಿದಷ್ಟು ಸಂತೋಷವಾಗಿದ್ದರೆ, ಪಾಪ ದಿಲ್ಲಿಯಲ್ಲಿನ ಸೇನಾ ಮುಖ್ಯಸ್ಥರು ತೀವ್ರ ಮುಜುಗುರಕ್ಕೀಡಾಗಿದ್ದಾರೆ. id="toptextpromo">ಗುರಿ
ನಿಗದಿಪಡಿಸಿಕೊಂಡು ನಿಗದಿತ ಅವಧಿಯಲ್ಲೇ ಅದನ್ನು ಸಾಧಿಸಲು ಮೋದಿ ಮಹಾಶಯ ಸರ್ವಪ್ರಯತ್ನ ನಡೆಸುತ್ತಾರೆ. ಸೇನಾ ಕಮಾಂಡರ್-ಗಳೂ ಹೀಗೇಯೇ ಕೆಲಸ ಮಾಡೋದು ಎಂದು ಅಹಮದಾಬಾದಿನಲ್ಲಿರುವ ಗೋಲ್ಡನ್ ಕತಾರ್ ಡಿವಿಷನ್ನಿನ ಮುಖ್ಯಸ್ಥ ಮೇಜರ್ ಜನರಲ್ ಐ.ಎಸ್. ಸಿಂಘಾ ಹಾಡಿಹೊಗಳಿದ್ದಾರೆ.ಸಮಯ ಸಂದರ್ಭ ಏನೆಂದರೆ ... ನಗರದ ಪೊಲೀಸ್ ಮೈದಾನದಲ್ಲಿ ಸೇನೆಗೆ ಸಂಬಂಧಿಸಿದಂತೆ 'ನೊ ಯುವರ್ ಆರ್ಮಿ' ಎಂಬ ಪ್ರದರ್ಶನ ನಡೆಯುತ್ತಿದೆ. ಮುಖ್ಯಮಂತ್ರಿ ಮೋದಿ ಸೋಮವಾರ ಇದಕ್ಕೆ ಚಾಲನೆ ನೀಡಿದರು. ಆಗ ಮಾತಿಗಿಳಿದ ಸಿಂಘಾ, ರಾಜ್ಯ ಮತ್ತು ರಾಷ್ಟ್ರದ ಸರ್ವಾಂಗೀಣ ಪ್ರಗತಿಗೆ ಮೋದಿ ಹೊಂದಿರುವ ದೃಷ್ಟಿಕೋನ ಅದ್ಭುತವಾಗಿದೆ. ಅವರು ಸೇನೆ ಮಾದರಿಯಲ್ಲಿ ಕೆಲಸ ಮಾಡುತ್ತಾರೆ, ಯಶಸ್ವಿ ಸೇನಾ ದಂಡನಾಯಕ ಎಂದೆಲ್ಲಾ ಪ್ರಶಂಸಿಸಿದ್ದಾರೆ. ಕೊನೆಗೆ ಅದು ನೊ ಯುವರ್ ಆರ್ಮಿ ಹೋಗಿ, ನೊ ಯುವರ್ ಮೋದಿ ಎಂಬಂತಾಗಿದೆ. id='are-slot-1' class='oiad oi-axt oiadv'> id='top-searched-articles'>
ರಾಜಕೀಯದಿಂದ
ದೂರವಿರಬೇಕಾದ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರು ರಾಜಕೀಯ ಪಕ್ಷವೊಂದರ ನಾಯಕನನ್ನು ಹೀಗೆ 'ನೀನೂ ನಮ್ಮ ದಂಡನಾಯಕನಂತೆ' ಎಂದು ಹೊಗಳುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಈಗ ಜಗಜಗಾಂತ ಉರಿಯತೊಡಗಿದೆ. ಈ ಹೊಗಳುಭಟನ ಬಗ್ಗೆ ದಿಲ್ಲಿ ಅಧಿಕಾರಿಗಳು ಗರಂ ಆಗಿದ್ದಾರೆ. ವಿವರಣೆ ನೀಡುವಂತೆಯೂ ಸಿಂಘಾ ಮಹಾಶಯನಿಗೆ ಸೂಚಿಸಿದ್ದಾರೆ.











Click it and Unblock the Notifications