ಸುನಾಮಿ ಗುಮ್ಮ: ಬೆಚ್ಚಿಬಿದ್ದ ಪ್ರವಾಸೋದ್ಯಮ

ಇದು ಇಷ್ಟಕ್ಕೇ ನಿಂತಿಲ್ಲ. ಹವಾಯಿ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾದಂತಹ ಪ್ರೇಕ್ಷಣೀಯ ಸ್ಥಳಗಳತ್ತ ಪ್ರವಾಸ ಹೋಗಲು ಸಜ್ಜಾಗುತ್ತಿದ್ದವರೂ ಸಹ ಅದರ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಅಲ್ಲೆಲ್ಲ ಸುನಾಮಿ ಬಡಿದಿಲ್ಲವಾದರೂ ಸುನಾಮಿ ಗುಮ್ಮ ಕಾಡತೊಡಗಿದೆ. ಇನ್ನು ಕಾರ್ಪೊರೆಟ್ ಕಂಪನಿಗಳಂತೂ ಅತ್ತ ಮುಖ ಮಾಡುವುದೂ ಬೇಡ ಎಂದು ಮಗುಮ್ಮಾಗಿವೆ. ಅದೆಂಥದ್ದೋ ಮಧುಚಂದ್ರಕ್ಕಾಗಿ ಹಾತೊರೆಯುತ್ತಿದ್ದ ದಂಪತಿಗಳಿಗೂ ಸುನಾಮಿ ಹರಾಮಿಯಾಗಿ ಕಂಡಿದೆ. ಈ ಮಧ್ಯೆ, ಬಿಗ್ ಮೂನ್ ಭೀತಿಯೂ ಸುಳಿದಾಡುತ್ತಿದೆ. ಶ್ರೀಲಂಕಾ, ಬ್ಯಾಂಕಾಕ್, ಪಟ್ಟಾಯಾ ಅಥವಾ ಕೊನೆಗೆ ಪಕ್ಕದಲ್ಲೇ ಇರುವ ಗೋವಾ ಸಾಕು ಎಂದು ಮಧುಚಂದ್ರ ಪ್ರೇಮಿಗಳು ಪಿಸುಗುಟ್ಟುತ್ತಿದ್ದಾರೆ.
ಲಾಲ್ ಬಾಗ್ ಸಮೀಪವಿರುವ ಪ್ರಗತಿ ಟೂರ್ಸ್ ಅಡ್ ಟ್ರಾವಲ್ಸ್ ಮಾಲೀಕ ನಾಗೇಂದ್ರ ಪ್ರಕಾರ ಮೂರ್ನಾಲ್ಕು ದಿನಗಳಿಂದ ಹತ್ತಾರು ಮಂದಿ ಬುಕ್ಕಿಂಗ್ ಕ್ಯಾನ್ಸಲ್ ಮಾಡಿಸಿ, ಇಲ್ಲೇ ಸನಿಹದಲ್ಲೇ ಯಾವುದಾದೂ ದಾರಿ ತೋರಿಸಿ ಎನ್ನುತ್ತಿದ್ದಾರಂತೆ ಅವರ ಗ್ರಾಹಕರು. ಈ ಹಿಂದೆ ಕೆಲವು ಕಂಪನಿಗಳು ನ್ಯೂಜಿಲ್ಯಾಂಡ್ ಮತ್ತು ಅಮೆರಿಕದ ಪಶ್ಚಿಮ ಕರಾವಳಿಗೆ ಹೋಗಲು ಬುಕ್ ಮಾಡಿಸಿದ್ದವು. ಆದರೆ ಮುನ್ನೆಚ್ಚರಿಕೆಯಿಂದಾಗಿ ಈಗ ಸುತರಾಂ ಅಲ್ಲಿಗೆ ಹೋಗುವುದು ಬೇಡ ಎನ್ನುತ್ತಿವೆಯಂತೆ. ಥ್ಯಾಂಕ್ಸ್ ಟು ಸುನಾಮಿ! ಬೇಸಿಗೆ ಕಾಲ ಕಾಲಿಡುತ್ತಿರುವುದರಿಂದ ಪ್ರವಾಸ ಹೋಗಲು ರೆಗ್ಯುಲರ್ ಕಸ್ಟಮರ್ಸ್ ಈಗಾಗಲೇ ವಿಚಾರಿಸಬೇಕಿತ್ತು. ಆದರೆ ಅವರಿಗೂ ಸುನಾಮಿ ಭೂತ ಕಾಡುತ್ತಿದೆಯಂತೆ.












Click it and Unblock the Notifications