ಐಟಿ ಕಂಪನಿಗಳಿಗೆ ಬೇಕಂತೆ ಲಕ್ಷಾಂತರ ವೆರೈಟಿ ಜನ

ಐಟಿ ಮತ್ತು ಐಟಿ ಸೇವಾನಿತರ ಕ್ಷೇತ್ರದಲ್ಲಿ ದೇಶಾದ್ಯಂತ ಇದುವರೆಗೆ ಒಟ್ಟು 20 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗದಲ್ಲಿ ತೊಡಗಿದ್ದಾರೆ. ಇದೇ ವೇಳೆ ಪರೋಕ್ಷವಾಗಿ 80 ಲಕ್ಷ ಮಂದಿ ಉದ್ಯೋಗ ಕಂಡುಕೊಂಡಿದ್ದಾರೆ. ದೂರಸಂಪರ್ಕ ಸೇವಾ ಕಂಪನಿಗಳು, ಮಾಧ್ಯಮ, ಬ್ಯಾಂಕಿಂಗ್, ಆರೋಗ್ಯ ವಲಯ, ಶಿಕ್ಷಣ ಕ್ಷೇತ್ರದಲ್ಲಿ ಐಟಿ ಬಳಕೆ ಹೆಚ್ಚಾಗುವುದರಿಂದ ಈ ರೀತಿಯ ಭಾರಿ ನೇಮಕಗಳು ನಡೆಯಲಿವೆ ಎಂದು ಉದ್ಯಮ ಮೂಲಗಳು ಹೇಳಿವೆ.
ಈ ಕ್ಷೇತ್ರಗಳಲ್ಲಿನ ಸೇವಾ ಕಂಪನಿಗಳು ಗ್ರಾಮೀಣ ಭಾರತದತ್ತ ಧಾವಿಸುವುದರಿಂದ ಐಟಿ ಸೇವಾ ಕಂಪನಿಗಳತ್ತ ಅವಕಾಶಗಳ ಮಹಾಪೂರವೇ ಹರಿದುಬರಲಿದೆ. 3ಜಿ ಸೇವೆ ಬಳಸುವ ಕಂಪನಿಗಳಿಗೆ ಹೆಚ್ಚಿನ ಅವಕಾಶ ದೊರಕಲಿವೆ. ಗಮನಾರ್ಹವೆಂದರೆ ಇದುವರೆಗೆ ಐಟಿ ಮಾರುಕಟ್ಟೆಯಲ್ಲಿ ಪರ್ಸನಲ್ ಕಂಪ್ಯೂಟರ್ ಗಳು ಅಧಿಪತ್ಯ ಸ್ಥಾಪಿಸಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ನೋಟ್ ಬುಕ್ ಎಲ್ಲೆಲ್ಲೂ ರಾರಾಜಿಸತೊಡಗಿವೆ. ಇದು ಐಟಿ ಕ್ಷೇತ್ರದ ಬೆಳವಣಿಗೆಗೆ ವರವಾಗಿದೆ.












Click it and Unblock the Notifications