ಸುನಾಮಿಯಿಂದ ನಿಮ್ಮ ಆಯಸ್ಸು ಕಡಿಮೆಯಾಗುತ್ತಿದೆ!

ಬೆಂಗಳೂರು, ಮಾ. 13: ಭೂಕಂಪದ ಬೆನ್ನಿಗೆ ನುಗ್ಗಿಬಂದ ಸುನಾಮಿ ಜಪಾನಿಗೆ ಏನೆಲ್ಲ ಅನಾಹುತ ಮಾಡಿದೆಯೋ ಇನ್ನೂ ನಿಖರವಾಗಿಲ್ಲ. ಆದರೆ ಈ ಸುನಾಮಿಯಿಂದ ಜೀವಿಗಳ ಆಯಸ್ಸು ಕಡಿಮೆಯಾಗಲಿದೆ ಎಂಬ ಸುದ್ದಿ ಸುನಾಮಿಯಷ್ಟೇ ಭೀಕರವಾಗಿ ನಮ್ಮ ಮಧ್ಯೆ ಸುಳಿದಾಡುತ್ತಿದೆ. ಕುತೂಹಲಕಾರಿ ಸಂಗತಿಯೆಂದರೆ ಇದನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿಯೇ ಲೆಕ್ಕಹಾಕಲಾಗಿದೆ.

ಲೆಕ್ಕಾಚಾರ ಹೀಗಿದೆ: ಜಪಾನಿನ ಪ್ರಮುಖ ದ್ವೀಪವಾದ ಹೊನ್ಷು ಸುನಾಮಿಯಿಂದಾಗಿ 8 ಅಡಿ ದೂರ ಸರಿಸಿದೆ. ಇದರಿಂದ ಭೂಮಿಯ ಅಕ್ಷಾಂಶ 4 ಇಂಚು ಉಬ್ಬಿದೆ. ಹಾಗಾಗಿ ದೈನಂದಿನ ಸಮಯ 1.6 ಮೈಕ್ರೊಸೆಕೆಂಡ್ ಕಡಿಮೆಯಾಗಿದೆ. ಅಂದರೆ ಒಂದು ಸೆಕೆಂಡಿನಲ್ಲಿ ದಶಲಕ್ಷದಷ್ಟು ಅವಧಿ ಕಡಿಮೆಯಾಗಿದೆ. ಜಪಾನಿನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ಎಷ್ಟಿದೆಯೆಂದರೆ ಭೂಮಿಯ ಒಳಪದರವು 400 ಕಿ.ಮೀ. ಉದ್ದ ಮತ್ತು 160 ಕಿ.ಮೀ. ಅಗಲದಷ್ಟು ಛಿದ್ರಗೊಂಡಿದೆ.

ಗಮನಿಸಿ, ಭೂಕಂಪದಿಂದ ಭೂಮಿಯ ಮೇಲ್ಮೈ ತೂಕ ಒಂದು ಕಡೆಗೆ ವಾಲಿಕೊಂಡಿದೆ. ಇದರಿಂದ ಭೂಮಿ ಒಂದು ಕಡೆಗೆ ಉಬ್ಬಿಕೊಂಡಂತಾಗಿ ಅದರ ಸುತ್ತುವಿಕೆಯ ವೇಗ ಅಧಿಕವಾಗಿದೆ. ಇದರಿಂದ ಸೂಕ್ಷ್ಮಾತಿಸೂಕ್ಷ್ಮ ಪ್ರಮಾಣದಲ್ಲಿ ಕಾಲದ ಪ್ರಮಾಣವೂ ಬದಲಾಗಿದೆ. ದೆಹಲಿ ವಿಶ್ವವಿದ್ಯಾಲಯದ ಖಗೋಳಭೌತಶಾಸ್ತ್ರ ವಿಭಾಗದ ಪ್ರೊಫೆಸರ್ ಪ್ಯಾಟ್ರಿಕ್ ದಾಸ್ ಗುಪ್ತಾ ಈ ಆತಂಕಕಾರಿ (!) ವಿಷಯವನ್ನು ಹೊರಗೆಡವಿದ್ದಾರೆ. ಹಾಗಾದರೆ ಭೂಮಿಯ ಆಯಸ್ಸೂ ಕಡಿಮೆಯಾಗಲಿದೆಯೇ ಎಂದು ಕೇಳಿದರೆ ಹಾಗಾಗದು ಎನ್ನುತ್ತಾರೆ ಅವರು.

2004ರಲ್ಲಿ ಏಷ್ಯಾದಲ್ಲಿ ಕಾಣಿಸಿಕೊಂಡಿದ್ದ ಸುಮಾನಿಯೂ ಹೀಗೇ ಭೂಮಿಯ ಒಂದು ದಿನದ ಕಾಲಮಾನವನ್ನು 6.8 ಮೈಕ್ರೊಸೆಕೆಂಡ್ ಕುಗ್ಗಿಸಿತ್ತು. ಭೂಮಿಯ ಅಕ್ಷಾಂಶವನ್ನು 3 ಇಂಚು ಹೆಚ್ಚಿಸಿತ್ತು. ಆಗಲೂ ಇಡೀ ದ್ವೀಪಗಳು ಚಲಿಸಿದ್ದವು. ದಕ್ಷಿಣ ನಿಕೋಬಾರ್ ದ್ವೀಪ ಸಮೂಹಗಳು 15 ಅಡಿ ಕೆಳಗೆ ಜರುಗಿತ್ತು. ಇನ್ನು ಉತ್ತರ ಅಂಡಮಾನ್ ದ್ವೀಪಗಳು 5 ಎತ್ತರಕ್ಕೆ ಸರಿದಿತ್ತು. ಚಿಲಿಯಲ್ಲಿ ಕಳೆದ ವರ್ಷ ಸಂಭವಿಸಿದ ಭೂಕಂಪವು ಅಕ್ಷಾಂಶವನ್ನು 3 ಇಂಚು ವಿಸ್ತರಿಸಿತ್ತು. ಇದರಿಂದ ದಿನದ ಕಾಲ 1.26 ಮೈಕ್ರೊಸೆಕೆಂಡ್ ಕಡಿಮೆಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+