ನೋಕಿಯಾ ಕಿಲ್ಲರ್ ಮ್ಯೂಸಿಕ್ ಮೊಬೈಲ್

ಉತ್ತಮವಾದ ಧ್ವನಿವರ್ಧಕ ಹೊಂದಿರುವ ನೋಕಿಯಾ x1-00 ಮೊಬೈಲ್ ನಲ್ಲಿ ಹೈ ವಾಲ್ಯೂಮ್ ನೀಡಿದಾಗಲೂ ಹೆಚ್ಚಿನ ವೈಬ್ರೇಷನ್ ಇಲ್ಲದೆ ಸ್ಪಷ್ಟವಾಗಿ ಸಂಗೀತವನ್ನು ಆಲಿಸಬಹುದಾಗಿದೆ. ಹೆಚ್ಚು ಗದ್ದಲದಿಂದ ಕೂಡಿರುವ ಪ್ರದೇಶಗಳಲ್ಲಿ ಮೊಬೈಲ್ ನಲ್ಲಿ ಸಂಗೀತ ಆಲಿಸುವುದಿರಲಿ, ಸಂಭಾಷಣೆ ನಡೆಸುವುದೇ ಕಷ್ಟ. ಆದರೆ ಈ ಮೊಬೈಲ್ ಮೂಲಕ ಇಂಥ ಪ್ರದೇಶದಲ್ಲೂ ಕೂಡಾ ಸ್ಪಷ್ಟವಾಗಿ ಧ್ವನಿ ಆಲಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಹೆಚ್ಚು ಹೆಚ್ಚು ಹಾಡುಗಳನ್ನು ಶೇಖರಿಸಿಟ್ಟುಕೊಳ್ಳಲು ಅನುಕೂಲವಾಗುವಂತೆ 16GB ಮೆಮೋರಿ ನೀಡಲಾಗುತ್ತಿದೆ. ಮ್ಯೂಸಿಕ ಹಾಗೂ ವಿಡಿಯೋ ಫೈಲ್ ಗಳನ್ನು ಇದರಲ್ಲಿರಿಸಬಹುದು. ಪ್ಲೇಲಿಸ್ಟ್ ಕ್ರಿಯೇಟರ್, 3.5mm ಆಡಿಯೋ ಜಾಕ್, ಎಫ್ ಎಂ ರೇಡಿಯೋ ಮುಂತಾದ ಸೌಲಭ್ಯ ಗಳಿವೆ. ಸಿಂಬಿಯಾನ್ ಎಸ್ 30 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಮೊಬೈಲ್ ನಲ್ಲಿ 1.8 ಇಂಚಿನ ಟಿಎಫ್ ಟಿ ಸ್ಕ್ರೀನ್ ಇದೆ. ಸ್ಟ್ಯಾಂಡ್ ಬೈ ಬ್ಯಾಟರಿ ಅವಧಿ 61 ದಿನಗಳವರೆಗೂ ಇರುತ್ತದೆ. 13.1 ಗಂಟೆಗಳ ನಿರಂತರ ಟಾಕ್ ಟೈಮ್ ಕೂಡಾ ಇದ್ದು, ಗ್ರಾಹಕ ಸ್ನೇಹಿ ಎನಿಸಿದೆ.
* 1.8 ಇಂಚು ವರ್ಣಮಯ ಟಿಎಫ್ ಟಿ ಸ್ಕ್ರೀನ್
* ಉತ್ತಮ ಧ್ವನಿವರ್ಧಕ, 3.5mm ಆಡಿಯೋ ಜಾಕ್
* ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 16 ಜಿಬಿ ತನಕ ವಿಸ್ತರಣೆ
* ಸಿಂಬಿಯಾನ್ ಆಪರೇಟಿಂಗ್ ಸಿಸ್ಟಮ್ ಎಸ್ 30
* ಮ್ಯೂಸಿಕ್ ಕೀಗಳು, ಎಫ್ ಎಂ ರೇಡಿಯೋ
* ಸುಡೊಕೊ, ಸ್ನೇಕ್ ಕ್ಸೇನಿಯಾ, ಫರ್ಬಿಡೆನ್ ಟ್ರೆಷರ್, ವೆಕೆಷನ್ ಸಾಲಿಟರ್ ಮುಂತಾದ ಆಟಗಳು
* ಫ್ಲಾಶ್ ಲೈಟ್
* ತೂಕ 91.05 ಗ್ರಾಂಗಳು
* ಬ್ಲೂಟೂಥ್, WAP
* ಕೆಮೆರಾ, 3ಜಿ, ಜಿಪಿಆರ್ ಎಸ್, ಜಿಪಿಎಸ್ ಯಾವುದೂ ಇಲ್ಲ.
* Li-Ion 1320 mAh
* ಕಿತ್ತಲೆ, ಸಮುದ್ರ ನೀಲಿ, ಗಾಢವಾದ ಬೂದು ಬಣ್ಣಗಳಲ್ಲಿ ಲಭ್ಯ
ಲಕ್ಷಾಂತರ ಜನರನ್ನು ಒಮ್ಮೆಗೆ ತನ್ನ ಸುಪರ್ದಿಗೆ ಸೆಳೆದುಕೊಳ್ಳಲು ನೋಕಿಯಾ ಹೊರತಂದಿರುವ ಈ ಮೊಬೈಲ್ ಬೆಲೆ ಸುಮಾರು 2,500 ರು. ಡಿಸ್ ಪ್ಲೇ ಸ್ಕ್ರೀನ್ ಇನ್ನಷ್ಟು ಹಿರಿದಾಗಿಸುವುದರ ಜೊತೆಗೆ ಹೆಚ್ಚಿನ ಮೆಮೋರಿ ವಿಸ್ತರಣೆಗೆ ಅನುಕೂಲ ಕಲ್ಪಿಸಬಹುದಿತ್ತು. ಪ್ರತಿಸ್ಪರ್ಧಿ ಕಂಪೆನಿಗಳು 32 ಜಿಬಿ ತನಕ ನೀಡುತ್ತಿರುವಾಗ, ನೋಕಿಯಾ ತನ್ನ ಈ ಹಿಂದಿನ ಬೇಸಿಕ್ ಹ್ಯಾಂಡ್ ಸೆಟ್ ಗೂ ನೀಡಿದ ಸೌಲಭ್ಯವನ್ನು ನೋಕಿಯಾ ಎಕ್ಸ್ 1-00ದಲ್ಲೂ ಮುಂದುವರೆಸಬಹುದಾಗಿತ್ತು. ಆದರೂ, ಕೊಟ್ಟ ಕಾಸಿಗಿಂತ ಹೆಚ್ಚಿನ ಕಜ್ಜಾಯವನ್ನು ಗ್ರಾಹಕರು ನಿರೀಕ್ಷಿಸಬಹುದು.












Click it and Unblock the Notifications