ಇಬ್ಬರು ಮಕ್ಕಳೊಂದಿಗೆ ಮಹಾತಾಯಿ ಆತ್ಮಹತ್ಯೆ
ಮುಂಬೈ,
ಮಾ. 8: ವಿಶ್ವ ಮಹಿಳಾ ದಿನಾಚರಣೆಯಂದೇ ಮಹಾ ತಾಯಿಯೊಬ್ಬಳು ತನ್ನ ಎರಡು ಕಂದಮ್ಮಗಳೊಂದಿಗೆ 19ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪಾಪ ಏನಿತ್ತೋ ಆಕೆಯ ದುಃಖ? ಇಲ್ಲಿನ ಮಲ್ನಾಡ್ ಹೊರವಲಯದಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಬಿದ್ದ ತಕ್ಷಣವೇ ಮೂವರ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. id="toptextpromo">30
ವರ್ಷದ ನಿಧಿ ಪವನ್ ಗುಪ್ತಾ ಈ ದುಸ್ಸಾಹ ಮಾಡಿದ ಗೃಹಿಣಿ. ಈಕೆ ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿದ್ದ ಸುಶಿಕ್ಷಿತೆ. ಮಲಾಡ್ ಸಹ್ಯಾದ್ರಿ ಬಿಲ್ಡಿಂಗ್ಸ್ ನ 9ನೇ ಮಹಡಿಯಲ್ಲಿ ವಾಸವಾಗಿದ್ದ ನಿಧಿ, ತನ್ನ ಇಬ್ಬರು ಮಕ್ಕಳನ್ನು 8ನೇ ಮಹಡಿಯಿಂದ ಕರೆದುಕೊಂಡು ಹೋಗಿ ಅಲ್ಲಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. 10 ವರ್ಷದ ಮಗ ಗೌರವ್ 3 ವರ್ಷದ ಪುತ್ರಿ ಮಾಯಿಕಾ ಅಮ್ಮನೊಂದಿಗೆ ಸಾವನ್ನಪ್ಪಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಸ್ಕೂಲ್
ಯೂನಿಫಾರಂ ತೊಟ್ಟಿದ್ದ ಮಗಳು ಮತ್ತು ಮಗನನ್ನು ನಿಧಿ ಲಿಫ್ಟ್ ನಲ್ಲಿ ಕರೆದುಕೊಂಡು ಹೋಗಿದ್ದನ್ನು ನೋಡಿದೆ. ಲಿಫ್ಟ್ ನಲ್ಲಿ ಕೆಳೆಗಿಳಿಯುತ್ತಿದ್ದ ನಾನು ನೆಲದ ಮಹಡಿಗೆ ಬರುವ ವೇಳೆಗೆ ಮೂವರು ಸಾವಿನ ಮಡುವಿನಲ್ಲಿದ್ದರು' ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಪೊಲೀಸರು ಗಂಡ ಮತ್ತು ಆತನ ಕುಟುಂಬದವರ ವಿಚಾರಣೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ನಿಧಿ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.











Click it and Unblock the Notifications