ನೇತಾಡಲಿವೆ ವಿಮಾನಗಳಲ್ಲಿ ಸಿಸಿಟಿವಿ ಕ್ಯಾಮರಾಗಳು !
ನವದೆಹಲಿ,
ಮಾ. 7: ಭಯೋತ್ಪಾದನೆಯ ಮಧ್ಯೆ ಭೂಮಂಡಲವನ್ನು ಸರ್ವೇಕ್ಷಣ ಕ್ಯಾಮರಾಗಳು (ಇದನ್ನು ಹೀಗೂ ಅರ್ಥೈಸಬಹುದು ಸರ್ವ ಅಂದರೆ ಎಲ್ಲೆಡೆಯೂ, ಕ್ಷಣ ಎಂದರೆ ಕ್ಷಣಕ್ಷಣವೂ) ಬಹುತೇಕ ಎಲ್ಲೆಡೆಯೂ ಹೊಂಚುಹಾಕುತ್ತಿವೆ. ಭದ್ರತೆ ವಿಷಯದಲ್ಲಿ ಮನುಷ್ಯ ಅಷ್ಟರಮಟ್ಟಿಗೆ ಸುಭದ್ರವಾಗಿರಲು ನಿಶ್ಚಯಿಸಿದ್ದಾನೆ. ಭೂಮಿಯ ಮೇಲೆ ಇದೇನೋ ಸರಿ. ಆದರೆ ಅಲ್ಲಿ ಗಗನದಲ್ಲಿ... ಅದೇ ವಿಮಾನದಲ್ಲಿ ... ಈ ಕ್ಯಾಮರಾಗಳು (CCTV) ಇವೆಯಾ ಎಂದರೆ ಇದುವರೆಗೆ ಇರಲಿಲ್ಲ. ಇನ್ನು ಮುಂದೆ ವಿಮಾನಗಳಲ್ಲೂ ಇವು ಕಾಣಿಸಿಕೊಳ್ಳಲಿವೆ. id="toptextpromo">ದೇಶದಲ್ಲಿ
ವಿಮಾನಯಾನವನ್ನು ಹೆಚ್ಚು ಸುರಕ್ಷಿತಗೊಳಿಸಲು ವಿಮಾನದಲ್ಲಿ ಪ್ರತಿಯೊಂದು ಚಲನವಲನದ ಮೇಲೆ ಹದ್ದಿನಕಣ್ಣಿಡಲಾಗುವುದು. ಇದಕ್ಕಾಗಿ ವಿಮಾನಗಳಲ್ಲಿ ಸದ್ಯದಲ್ಲೇ ಕ್ಯಾಮರಾಗಳನ್ನು ತೋಗುಹಾಕಲಾಗುವುದು. ವಿಮಾನದಲ್ಲಿನ ಘಟಿಸುವ ಎಕ್ಸ್್ಟ್ರಾಗಳು ಅಂದರೆ ನೀವು ಎಗರಿಸುವ ಚಾಕೊಲೇಟ್, ಸುಂದರ ಗಗನಸಖಿಯತ್ತ ಬೀರುವ ವಾರೆನೋಟದಿಂದ ಹಿಡಿದು ಭಯೋತ್ಪಾಕರ ಕರಾಮತ್ತಿನವರೆಗೂ ಎಲ್ಲವೂ ಈ ಕ್ಯಾಮರಾಗಳಲ್ಲಿ ದಾಖಲಾಗಲಿದೆ. ಸೊ ಹುಷಾರು! id='are-slot-1' class='oiad oi-axt oiadv'> id='top-searched-articles'>ಕೇಂದ್ರ
ಗೃಹ ಸಚಿವಾಲಯವು ಇತ್ತೀಚೆಗೆ ವಿಮಾನ ಮತ್ತು ಅದರ ನಿಲ್ದಾಣದ ಭದ್ರತೆ ಬಗ್ಗೆ ತಲೆಕೆಡಿಕೊಂಡು, ವಿಶೇಷ ಸಮಿತಿಯಿಂದ ಒಂದಷ್ಟು ಸಲಹೆ ಸೂಚನೆಗಳನ್ನು ಕೋರಿತ್ತು. ಸಮಿತಿ ನೀಡಿದ ಸಲಹೆಗಳಲ್ಲಿ ಮೊದಲು ಕ್ಯಾಮರಾ ಅಳವಡಿಸಿ ಎಂಬುದು ಎದ್ದುಕಂಡಿದೆ. ಜತೆಗೆ ಇನ್ನೂ ವಿಮಾನ ನಿಲ್ದಾಣದೊಳಕ್ಕೂ ಬರುವ ಮುನ್ನವೇ ಲಗೇಜ್ ನಲ್ಲಿ ಏನಾದರೂ ಅಪಾಯಕಾರಿ ವಸ್ತುಗಳಿವೆಯೇ ಎಂಬುದನ್ನು ಪತ್ತೆ ಹಚ್ಚಲು ದೂರಗ್ರಾಹಿ ಪರೀಕ್ಷೆ ಯಂತ್ರಗಳನ್ನು ಅಳವಡಿಸುವಂತೆಯೂ ಸಮಿತಿ ಎಚ್ಚರಿಸಿದೆ. ಮೊದಲ ಹಂತದಲ್ಲಿ ಬೆಂಗಳೂರು, ನವಹೆದಲಿ, ಚೆನ್ನೈ, ಮುಂಬಯಿ. ಕೋಲ್ಕೊತಾ ವಿಮಾನ ನಿಲ್ದಾಣಗಳಲ್ಲಿ ಸಂಚರಿಸುವ ವಿಮಾನಗಳಿಗೆ ಈ ಕ್ಯಾಮರಾಗಳು ನೇತಾಡಲಿವೆ.











Click it and Unblock the Notifications