Get Updates
Get notified of breaking news, exclusive insights, and must-see stories!

ಗೌ.ಡಾ. ಆಗಲೊಲ್ಲೆ ಎಂದ ಸಚಿನ್ ತೆಂಡೂಲ್ಕರ್

Sachin Tendulkar
ಬೆಂಗಳೂರು, ಮಾ.5: ದೇಶದ ಅಗ್ರಮಾನ್ಯ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನೀಡಬಯಸಿದ್ದ ಗೌರವ ಡಾಕ್ಟರೇಟ್ ಅನ್ನು ನಯವಾಗಿ ಬೇಡವೆಂದಿದ್ದಾರೆ.

'ನಾನಿನ್ನೂ ವೃತ್ತಿಪರ ಕ್ರಿಕೆಟ್ ನಲ್ಲಿ ಸಕ್ರಿಯನಾಗಿದ್ದೇನೆ. ಆದ್ದರಿಂದ ಈ ಗೌರವ ಸದ್ಯಕ್ಕೆ ಬೇಡ. ಇದೇ ರೀತಿ ದೇಶ, ವಿದೇಶಗಳ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಲು ಮುಂದಾದಾಗ ನಾನು ನಯವಾಗಿ ತಿರಸ್ಕರಿಸಿರುವೆ' ಎಂದು ತೆಂಡೂಲ್ಕರ್ ಸಮಜಾಯಿಶಿ ಕೊಟ್ಟಿದ್ದಾರೆ. RGUHS ವೈಸ್ ಚಾನ್ಸಲರ್, ರಿಜಿಸ್ಟ್ರಾರ್, ಸಿಂಡಿಕೇಟ್ ನ ಇಬ್ಬರು ಸದಸ್ಯರಿಗೆ ತೆಂಡೂಲ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಗೌ.ಡಾ. ಮತ್ತು ಅದರ ಸುತ್ತ ಸುತ್ತಿಕೊಂಡ ವಿವಾದಗಳು

ವಿವಿ ಈಗ ಸಚಿನ್ ರಿಂದ ಅಧಿಕೃತ ಪತ್ರಕ್ಕಾಗಿ ಕಾಯುತ್ತಿದ್ದು, ಅದನ್ನು ವಿವಿಯ ಚಾನ್ಸಲರ್, ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಗಮನಕ್ಕೆ ತರಲಿದೆ. ವಿವಿ ಈ ಬಾರಿ ಒಬ್ಬರನ್ನು ಮಾತ್ರ ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡಿರುವುದರಿಂದ ಡಾಕ್ಟರೇಟ್ ಪ್ರದಾನ ಸಮಾರಂಭವನ್ನು ರದ್ದುಗೊಳಿಸುವ ಸಾಧ್ಯತೆಯೂ ಇದೆ.

ಕುತೂಹಲಕರ ವಿಷಯವೆಂದರೆ ಮೈಸೂರು ವಿಶ್ವವಿದ್ಯಾಲಯವೂ ಇದೇ ರೀತಿ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರಿಗೆ ಗೌ.ಡಾ. ನೀಡುವ ತೀರ್ಮಾನ ತೆಗೆದುಕೊಂಡಿದೆ. ಆದರೆ ಈ ಸಂಬಂಧ ವಿವಿ ತನ್ನ ನಿರ್ಣಯ ತಿಳಿಸಿ, ಸಚಿನ್ ಗೆ ಇನ್ನೂ ಅಧಿಕೃತ ಪತ್ರ ಬರೆದಿಲ್ಲ. ವಿವಿ ಈ ಬಾರಿ ಒಟ್ಟು ನಾಲ್ವರಿಗೆ ಡಾಕ್ಟರೇಟ್ ಗೌರವ ನೀಡಲು ನಿರ್ಧಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+