ಮಾ.11ರಿಂದ ಬೆಂಗಳೂರಿನಲ್ಲಿ ವೈನ್ ವೈಭೋಗ

ಈ ಬಾರಿಯ ವಿಶೇಷವೆಂದರೆ ಮೇಳಕ್ಕೆ ಬರುವವರಿಗೆ ತಲಾ 100 ರು. ಪ್ರವೇಶ ಶುಲ್ಕ ಇರುತ್ತದೆ. ಆದರೆ ಅದರ ಜತೆಗೆ ಒಂದು ಗ್ಲಾಸ್ ವೈನ್್ನ ಕಿಕ್ ಸಹ ನೀಡಲಾಗುತ್ತದೆ. ಚೊಚ್ಚಲ ವೈನ್ ಮೇಳವನ್ನು ಕರ್ನಾಟಕ ರಾಜ್ಯ ವೈನ್ ಮಂಡಳಿ 2009ರಲ್ಲಿ ಲಾಲ್ ಬಾಗ್ ನಲ್ಲಿ ಆಯೋಜಿಸಿತ್ತು. ಸಾವಿರಾರು ಮಂದಿ ಸ್ಟಾಲ್್ಗಳಿಗೆ ಮುತ್ತಿಕೊಂಡು ವೈನ್ ರುಚಿ ಕಂಡಿದ್ದರು. ಹಿಂದಿನ ವೈನ್ ಫೆಸ್ಟಿವಲ್ ಪ್ಯಾಲೆಸ್ ಗ್ರೌಂಡ್ಸ್್ನಲ್ಲಿಯೇ ನಡೆದಿತ್ತು. ಇದಾದ ನಂತರ 2010ರಲ್ಲಿ ದೇಶೀ ರುಚಿಯ ಬ್ರ್ಯಾಂಡ್ ನೊಂದಿಗೆ ಮಂಡಳಿ ಅಂತಾರಾಷ್ಟ್ರೀಯ ಮೇಳವನ್ನು ಅದ್ದೂರಿಯಾಗಿ ಆಯೋಜಿಸಿತ್ತು. ಸುಮಾರು 25 ಸಾವಿರ ಮಂದಿ ಮೇಳದ ರುಚಿ ಕಂಡಿದ್ದರು. ಈ ಬಾರಿ ಈ ಸಂಖ್ಯೆ ದುಪ್ಪಟ್ಟಾಗುವ ಅಂದಾಜಿದೆ.
ಉತ್ತರ ಕರ್ನಾಟಕದ 'ನಾಕ' (NaKa) ವೈನ್ಸ್ ಸಂಸ್ಥೆ ಮತ್ತು ಕಿಣ್ವ ಬ್ರ್ಯಾಂಡ್್ ಜಂಟಿಯಾಗಿ ಈ ಬಾರಿ ಮೇಳವನ್ನು ನಡೆಸಿಕೊಡಲಿವೆ. ಇಂತಹ ಮೇಳಗಳನ್ನು ಆಯೋಜಿಸುವುದರಿಂದ ವೈನ್ ಗೆ ಒಳ್ಳೆಯ ಬೇಡಿಕೆ ಗಿಟ್ಟಿಸಬಹುದು. ಜತೆಗೆ ದ್ರಾಕ್ಷಿ ಬೆಳೆಯನ್ನೂ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ನಾಕ ವ್ಯವಸ್ಥಾಪಕ ನಿರ್ದೇಶಕ ಬಿ. ಎನ್. ನಂಜುಂಡಯ್ಯ ತಿಳಿಸಿದ್ದಾರೆ.
ವಿಶ್ವದ ನಾನಾ ಭಾಗಗಳ ಮದ್ಯವನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ವೈನ್ ಪ್ರಿಯರು ಮತ್ತು ಹೊಸದಾಗಿ ವೈನ್ ರುಚಿ ನೋಡಬಯಸುವವರಿಗೂ ಇಲ್ಲಿ ವೈನ್ ಪ್ರಪಂಚದ ವೈಭೋಗ ಅನಾವರಣಗೊಳ್ಳಲಿದೆ. ಕರ್ನಾಟಕ ಸರಕಾರ 2007ರಲ್ಲಿ ದ್ರಾಕ್ಷಿ ಬೆಳೆಯನ್ನು ಉತ್ತೇಜಿಸಲು 2007ರಲ್ಲಿ ಮೊದಲ ಮದ್ಯ ನೀತಿಯನ್ನು ಜಾರಿಗೆ ತಂದಿತ್ತು.












Click it and Unblock the Notifications