ವಿಶ್ವ ಕಪ್ ಕ್ರಿಕೆಟ್‌ನಲ್ಲಿ ಅಂಬೆಗಾಲಿಟ್ಟ 16ರ ಪೋರ!

ನಾಗಪುರ, ಮಾ.1: ಕೆನಡಾ ತಂಡದ ಹದಿನಾರರ ಶಾಲಾ ಬಾಲಕ ನಿತೀಶ್ ಕುಮಾರ್ ಸೋಮವಾರ ವಿಶ್ವಕಪ್ ಟೂರ್ನಿಗೆ ಪದಾರ್ಪಣೆ ಮಾಡಿದ ಅತಿ ಕಿರಿಯ ವಯಸ್ಸಿನ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಈ ಹಿಂದೆ, ಐರ್ಲೆಂಡ್‌ನ ಜಾರ್ಜ್ ಡಕ್ರಲ್ (18 ವರ್ಷ 203 ದಿನ) ವಿಶ್ವಕಪ್‌ನಲ್ಲಿ ಆಡಿದ ಅತ್ಯಂತ ಕಿರಿಯರಾಗಿದ್ದರು. ನಿತೀಶ್ ಇದುವರೆಗೆ 5 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದು, ಅಫಘಾನಿಸ್ತಾನ ವಿರುದ್ಧ ಅವರು ಕ್ರಿಕೆಟ್ ಜಗತ್ತಿನಲ್ಲಿ ಅಂಬೆಗಾಲಿರಿಸಿದ್ದರು.

ಸೋಮವಾರ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೊರೊಂಟೊದ ನಿತೀಶ್ ಕೆನಡಾ ಪರ ಬ್ಯಾಟಿಂಗ್ ಆರಂಭಿಸಿದರು. ಮತ್ತೊಂದು ಬದಿಯಲ್ಲಿ ಇವರೊಂದಿಗೆ ಬ್ಯಾಟ್ ಮಾಡಲು ಇಳಿದಿದ್ದ ಜಾನ್ ಡೇವಿಸನ್ ಅವರದ್ದು ಇದಕ್ಕೆ ತದ್ವಿರುದ್ಧ ದಾಖಲೆ. ಪ್ರಸಕ್ತ ವಿಶ್ವಕಪ್ ಕ್ರಿಕೆಟ್‌ನಲ್ಲಿ ಆಡುತ್ತಿರುವ ಅತ್ಯಂತ ಹಿರಿಯ (40) ಆಟಗಾರ ಎಂಬ ಅಗ್ಗಳಿಕೆ ಇವರದು. ಕುತೂಹಲಕರ ಸಂಗತಿಯೆಂದರೆ ಪಂದ್ಯದಲ್ಲಿ ಇವರಿಬ್ಬರ ಸಾಧನೆ ಹೇಳಿಕೊಳ್ಳುವಂತಹುದಲ್ಲ. ನಿತೀಶ್ 1 ರನ್ ಗಳಿಸಿ ಔಟಾದರೆ ಡೇವಿಸನ್ ಸೊನ್ನೆಗೇ ಔಟಾದರು.

ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ (1989) ಮಾಡಿದ ನಾಲ್ಕೂವರೆ ವರ್ಷಗಳ ತರುವಾಯ ಜನಿಸಿದ ನಿತೀಶ್‌ರ ಅಡ್ಡ ಹೆಸರು ತೆಂಡೂಲ್ಕರ್ ಎಂಬುದು ಮತ್ತೊಂದು ವಿಶೇಷ. "11 ವರ್ಷದ ಹಿಂದೆ ನಿತೀಶ್‌ನನ್ನು ನೋಡಿದ್ದೆ. ಆಗ ಆತನಿಗೆ 6 ವರ್ಷ ವಯಸ್ಸು. ಆತ ಬ್ಯಾಟ್ ಮಾಡುವ ಪರಿ ನೋಡಿ ಅಶ್ಚರ್ಯ, ಆನಂದವಾಗಿತ್ತು. ಅಷ್ಟು ಕಿರಿಯ ವಯಸ್ಸಿನಲ್ಲೇ ಆತ ಭರ್ಜರಿ ಹೊಡೆತಗಳನ್ನು ಬಾರಿಸುತ್ತಿದ್ದ" ಎಂದು ನಿತೀಶ್‌ನನ್ನು ಡೆವಿಸನ್ ಕೊಂಡಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+