ರಾಮಕೃಷ್ಣಾಶ್ರಮ ಬಳಿ 'ದಿ ಅಪೊಲೊ ಕ್ಲಿನಿಕ್' ಅಸ್ತಿತ್ವಕ್ಕೆ
ಬೆಂಗಳೂರು,
ಮಾ.1: ಬುಲ್‌ಟೆಂಪಲ್ ರಸ್ತೆಯಲ್ಲಿರುವ ಸುಪ್ರಸಿದ್ಧ ರಾಮಕೃಷ್ಣಾಶ್ರಮದ ಬಳಿ 'ದಿ ಅಪೊಲೊ ಕ್ಲಿನಿಕ್' ಆಸ್ಪತ್ರೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿದೆ. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಗೌರವಾನ್ವಿತ ಸ್ವಾಮಿ ಹರ್ಷಾನಂದಜೀ ಅವರು ಕಳೆದ ಭಾನುವಾರ ಇದನ್ನು ಉದ್ಘಾಟಿಸಿದರು. id="toptextpromo">ಅಪೊಲೊ
ಕ್ಲಿನಿಕ್ ಮತ್ತು ಆಸ್ಪತ್ರೆಯ ಜಂಟಿ ಸಹಯೋಗದಲ್ಲಿ ಇದು ನೆಲೆಗೊಂಡಿದೆ. ಬೆಂಗಳೂರಿನಲ್ಲಿ ಅಪೊಲೊ ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ. ಸುತ್ತಮುತ್ತಲ ಪ್ರದೇಶದವರಿಗೆ ಗುಣಮಟ್ಟದ ವೈದ್ಯಕೀಯ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಈ ಕ್ಲಿನಿಕ್ ತೆರೆಯಲಾಗಿದೆ. ಅಪೊಲೊ ಹೆಲ್ತ್ ಅಂಡ್ ಲೈಫ್‌ಸ್ಟೈಲ್ ಲಿಮಿಟೆಡ್ (AHLL) ಮುಖ್ಯಸ್ಥರಾದ ಸುಮಿತ್ ಸರ್ಕಾರ್, ಡಾ. ಉಮಾಪತಿ, ವಿಕ್ಟೋರಿಯಾ ಆಸ್ಪತ್ರೆಯ ಮಾಜಿ ಸೂಪರಿಂಟೆಂಡೆಂಟ್ ಡಾ. ಎಸ್. ಚಿಕ್ಕಮೊಗ ಮತ್ತು ಬೆಂಗಳೂರು ಅಪೊಲೊ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಸಿ.ಎಸ್. ದ್ವಾರಕನಾಥ್ ಈ ಸಂದರ್ಭದಲ್ಲಿ ಹಾಜರಿದ್ದರು. id='are-slot-1' class='oiad oi-axt oiadv'> id='top-searched-articles'>ಇಡೀ
ಕುಟುಂಬ ವರ್ಗದ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು. ಪರಿಣತ ಸಲಹೆ, ಸಂಪೂರ್ಣ ಡಯಾಗ್ನಾಸ್ಟಿಕ್, ಆರೋಗ್ಯ ಮುಂಜಾಗ್ರತೆಗಳು... ಇವೆಲ್ಲವನ್ನೂ ಒಂದೇ ಸೂರಿನಡಿ ಕಲ್ಪಿಸುವುದು ಈ ಹೊಸ ಕ್ಲಿನಿಕ್‌ನ ಆಶಯವಾಗಿದೆ ಎಂದು ಡಾ. ಉಮಾಪತಿ ಇದೇ ಸಂದರ್ಭದಲ್ಲಿ ತಿಳಿಸಿದರು.











Click it and Unblock the Notifications