ಸೆನ್ಸೆಕ್ಸ್ ಆಶಾದಾಯಕ: ಖರೀದಿ ಭರಾಟೆಯ ಮುನ್ಸೂಚನೆ
ಮುಂಬೈ,
ಫೆ.28: ಅತ್ತ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ಲೋಕಸಭೆಯಲ್ಲಿ 2011-12ನೇ ಆರ್ಥಿಕ ವರ್ಷದ ಆಯವ್ಯಯ ಮಂಡಿಸಲು ಸಿದ್ಧರಾಗಿರುವಾಗ ಇತ್ತ ಷೇರುಪೇಟೆ ವಹಿವಾಟು ಸೋಮವಾರ ಆಶಾದಾಯಕ ಆರಂಭ ಪಡೆದುಕೊಂಡಿದೆ. ವಿದೇಶಿ ಸಾಂಸ್ಥಿಕ ಸಂಸ್ಥೆಗಳು ರೀಟೇಲ್ ಹೂಡಿಕೆದಾರರು ಬಜೆಟ್‌ಗೂ ಮುನ್ನ ಖರೀದಿ ಭರಾಟೆ ನಡೆಸುವ ದೃಷ್ಟಿಕೋನ ಈ ವಹಿವಾಟಿಗೆ ಕಾರಣವಾಗಿದೆ. id="toptextpromo">ಷೇರು
ವಹಿವಾಟು ಆರಂಭವಾದ ಕೆಲವೇ ಕ್ಷಣಗಳಲ್ಲಿ ಸೆನ್ಸೆಕ್ಸ್ 115 ಅಂಕ ಪಡೆದುಕೊಂಡಿತು. ನಿಫ್ಟಿ ಸಹ ಉತ್ತಮ ಆರಂಭ ಪಡೆದಿದೆ. ಉತ್ತಮ ಬಜೆಟ್‌ನ ಫಲವಾಗಿ ಮುಂದಿನ ಆರ್ಥಿಕ ವರ್ಷವು ಹೂಡಿಕೆದಾರರಿಗೆ ಸ್ನೇಹಮಯವಾಗುವ ನಿರೀಕ್ಷೆ ಹೊಂದಿದೆ. id='are-slot-1' class='oiad oi-axt oiadv'> id='top-searched-articles'>ಬಂಡವಾಳ
ಸರಕುಗಳು, ಸಾರ್ವಜನಿಕ ರಂಗದ ಉದ್ಯಮಗಳು, ತೈಲ ಮತ್ತು ಅನಿಲ ಕಂಪನಿಗಳು, ಬ್ಯಾಂಕ್, ರಿಯಲ್ ಎಸ್ಟೇಟ್ ವಲಯ, ಗ್ರಾಹಕ ಉತ್ಪನ್ನ ಷೇರುಗಳು ಭಾರಿ ಬೇಡಿಕೆ ಪಡೆಯುವ ಎಲ್ಲ ಲಕ್ಷಣಗಳಿವೆ. ಆದರೆ ಬಜೆಟ್ ಮಂಡನೆಯಾಗುತ್ತಿದ್ದಂತೆ ಷೇರು ವಹಿವಾಟು ಚಿತ್ರಣ ಬದಲಾಗುವ ಅಂದಾಜಿದೆ.











Click it and Unblock the Notifications