ಇನ್ಫೋಸಿಸ್ ತಲೆಗೆ 450 ಕೋಟಿ ರು ದಂಡ

ಹಣಕಾಸು ಖಾತೆಯ ರಾಜ್ಯ ಸಚಿವ ಎಸ್.ಎಸ್ ಪಳನಿಮಾಣಿಕ್ಯಂ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ. ಇನ್ಫೋಸಿಸ್ ತನ್ನ ಸಾಗರೋತ್ತರ ಸೇವೆ(Onshore software development)ಗಳನ್ನು, ತಂತ್ರಾಂಶ ರಫ್ತು ಎಂದು ತೋರಿಸಿ ರೂ 450 ಕೋಟಿಗಿಂತಲೂ ಹೆಚ್ಚಿನ ತೆರಿಗೆ ವಿನಾಯಿತಿ ಪಡೆದಿದೆ. 2007-08ನೇ ಸಾಲಿನ ತೆರಿಗೆ ವರ್ಷದಲ್ಲಿ ರೂ 657.81ಕೋಟಿ ತೆರಿಗೆ ವಿನಾಯಿತಿ ಘೋಷಿಸಿಕೊಂಡಿದೆ, ತೆರಿಗೆ ವಿನಾಯಿತಿಯನ್ನು ವಿವರಗಳನ್ನು ಪಡೆದ ಆದಾಯ ತೆರಿಗೆ ಇಲಾಖೆ ಪರಿಷ್ಕರಣೆ ನಡೆಸಿ, ರೂ 456.38 ಕೋಟಿ ಗಳಷ್ಟು ಮೊತ್ತವನ್ನು ಮರು ಪಾವತಿಸಲು ಆದೇಶ ಹೊರಡಿಸಿದೆ ಎಂದು ಮಾಣಿಕ್ಯಂ ಹೇಳಿದ್ದಾರೆ.
ಸಾಗರೋತ್ತರ ತಂತ್ರಾಂಶ ಅಭಿವೃದ್ಧಿ ಕಾರ್ಯಕ್ರಮದಡಿ, ಭಾರತೀಯ ಐಟಿ ಕಂಪೆನಿಗಳು ತಮ್ಮ ಇಂಜಿನಿಯರ್‌ಗಳನ್ನು ಮೂರರಿಂದ ಆರು ತಿಂಗಳ ಅಲ್ಪಾವಧಿ ಯೋಜನೆಗಳಿಗೆ ಯೂರೋಪ್, ಅಮೆರಿಕ ಮತ್ತಿತರ ದೇಶಗಳಿಗೆ ಆನ್ ಸೈಟ್ ಅಸೈನ್ ಮೆಂಟ್ (short assignments) ಎಂದು ಕಳಿಸುವುದು ಸಾಮಾನ್ಯ. ಈ ರೀತಿಯ ತಂತ್ರಾಂಶ ಅಭಿವೃದ್ಧಿ ಕಾರ್ಯಕ್ರಮಗಳಿಂದ ಮತ್ತು ವಿದೇಶಗಳಲ್ಲಿ ನಿಯೋಜಿಸಲಾಗುವ ತಾಂತ್ರಿಕ ಮಾನವ ಸಂಪನ್ಮೂಲ(technical manpower)ಗಳಿಂದ ಬರುವ ವರಮಾನ ತೆರಿಗೆ ವಿನಾಯತಿ ವ್ಯಾಪ್ತಿಗೆ ಬರುವುದಿಲ್ಲ.
ಆದರೆ, ಇದನ್ನು ತಂತ್ರಾಂಶ ರಫ್ತು ಎಂದು ತೋರಿಸಿ ತೆರಿಗೆ ವಿನಾಯತಿ ಪಡೆಯಲು ಸಾಧ್ಯವಿಲ್ಲ. ಆದಾಯ ತೆರಿಗೆ ಕಾಯ್ದೆ 1961ರ ವಿವಿಧ ಕಲಂಗಳಲ್ಲಿ ತೆರಿಗೆ ಮುಕ್ತ ರಫ್ತು ವರಮಾನದ ಕುರಿತು ಸ್ವಷ್ಟವಾಗಿ ಹೇಳಲಾಗಿದ್ದು, ಇನ್ಫೋಸಿಸ್ ಘೋಷಿಸಿಕೊಂಡಿರುವ ತೆರಿಗೆ ವಿನಾಯತಿ ಈ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಮಾಣಿಕ್ಯಂ ಹೇಳಿದ್ದಾರೆ.












Click it and Unblock the Notifications