ಪೋರ್ಟಬಿಲಿಟಿ: ಬಿಎಸ್ಸೆನ್ನೆಲ್‌ಗೆ ಬಿಸಿ ಮುಟ್ಟಸಿದ ಗ್ರಾಹಕ ವರ್ಗ
ನವದೆಹಲಿ,
ಫೆ.24: ಇನ್ನೂ ಬಾಲ್ಯಾವಸ್ಥೆಯಲ್ಲಿರುವ ಮೊಬೈಲ್ ನಂಬರ್ ಪೋರ್ಟಬಿಲಿಟಿ ಎಂಬ ಗ್ರಾಹಕ-ಸ್ನೇಹಿ ಅಸ್ತ್ರ ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ಗೆ ಪಾಶುಪತಾಸ್ತ್ರವಾಗಿ ಪರಿಣಮಿಸಿದೆ. ದೇಶಾದ್ಯಂತ ಬಿಎಸ್‌ಎನ್‌ಎಲ್ 1,31,580 ಮಂದಿ ಗ್ರಾಹಕರನ್ನು ಕಳೆದುಕೊಂಡಿದ್ದರೆ ಮುಂಬೈನಲ್ಲಿ ಎಂಟಿಎನ್‌ಎಲ್‌ಗೆ 5,869 ಚಂದಾದಾರರು ಕೈಬಿಟ್ಟಿದ್ದಾರೆ. id="toptextpromo">ನಂಬರ್
ಪೋರ್‍ಟಬಿಲಿಟಿ ಅವಕಾಶ ಗ್ರಾಹಕರಿಗೆ ಆಪದ್ಬಾಂದವವಾಗಿದ್ದರೆ ಬಿಎಸ್ಸೆನ್ನೆಲ್ ಮತ್ತು ಎಂಟಿಎನ್ನೆಲ್‌ಗೆ ಆಪತ್ತು ತಂದಿದೆ. ಇದರಿಂದ ಹೊರಬಂದು ಗ್ರಾಹಕರ ವಿಶ್ವಾಸ ಮರಳಿ ಗಳಿಸಲು ಸಾಹಸ ನಡೆಸಿವೆ. ಗ್ರಾಹಕರು ಗುಳೆ ಹೋಗದಂತೆ ದಿಡ್ಡಿ ಬಾಗಿಲು ಹಾಕಲು ಈ ಎರಡೂ ಸರಕಾರಿ ಸಂಸ್ಥೆಗಳು ಮುಂದಾಗಿವೆ. ಇನ್ನು ಮುಂದೆ 'ಅತ್ಯುತ್ತಮ ಸೇವೆ ನೀಡುತ್ತೇವೆ. ನಮ್ಮನ್ನು ಬಿಟ್ಟು ಹೋಗಬೇಡಿ' ಎಂದು ಕ್ಷೀಣದನಿಯಲ್ಲಿ ಅಂಗಾಲಾಚುತ್ತಿವೆ. id='are-slot-1' class='oiad oi-axt oiadv'> id='top-searched-articles'>ನೆಟ್‌ವರ್ಕ್
ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು ಮತ್ತು ದರ ಸಮರದಿಂದಾಗಿ ಬಿಎಸ್ಸೆನ್ನೆಲ್‌ಗೆ ಈ ದುಃಸ್ಥಿತಿ ಬಂದಿದೆ. ಸಮಾಧಾನದ ವಿಷಯವೆಂದರೆ 92,243 ಮಂದಿ ಬಿಎಸ್ಸೆನ್ನೆಲ್ ಸೇವೆಗೆ ವರ್ಗಾವಣೆಗೊಂಡಿದ್ದಾರೆ. ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಹಾಯಕ ಸಚಿವ ಸಚಿನ್ ಪೈಲಟ್ ಸ್ವತಃ ಈ ಮಾಹಿತಿಯನ್ನು ಲೋಕಸಭೆಯಲ್ಲಿ ಗುರುವಾರ ಬಿತ್ತರಿಸಿದ್ದಾರೆ.











Click it and Unblock the Notifications