ಬಜೆಟ್‌ಗೆ ಮನ್ನ ಪ್ರಣಬ್‌ರಿಂದ 150 ರು. ನಾಣ್ಯ ಬಿಡುಗಡೆ
ನವದೆಹಲಿ,
ಫೆ.23: ದೇಶದ ಟಂಕಸಾಲೆ ಇತಿಹಾಸದಲ್ಲಿ ಸರಕಾರವು ಮೊದಲ ಬಾರಿಗೆ 150 ರು. ಮುಖಬೆಲೆಯ ನಾಣ್ಯವನ್ನು ಬಿಡಗಡೆ ಮಾಡಲಿದೆ. ಭಾರತದಲ್ಲಿ ತೆರಿಗೆ ಪದ್ಧತಿ ಜಾರಿಗೆ ಬಂದು 150 ವರ್ಷ ತುಂಬಿದೆ. ಅಂದರೆ ಆದಾಯ ತೆರಿಗೆ ಇಲಾಖೆಗೆ ಅಸ್ತಿತ್ವಕ್ಕೆ ಬಂದು ಕಳೆದ ಸಾಲಿಗೆ ೧೫೦ ವರ್ಷವಾಗಿದೆ. ಇದರ ಸ್ಮರಣಾರ್ಥ 200 ಹೊಸ ನಾಣ್ಯಗಳು ಬಿಡುಗಡೆಯಾಗುತ್ತಿವೆ. ಗಮನಾರ್ಹವೆಂದರೆ ಈ ನಾಣ್ಯವನ್ನು ದೈನಂದಿನ ವ್ಯವಹಾರದಲ್ಲಿ ಬಳಕೆಗೆ ಬಿಡುವುದಿಲ್ಲ. id="toptextpromo">ಹಣಕಾಸು
ಸಚಿವ ಪ್ರಣಬ್ ಮುಖರ್ಜಿ ಅವರು ತಮ್ಮ ಬಜೆಟ್ ಭಾಷಣ ಪ್ರಾರಂಭಿಸುವುದಕ್ಕೂ ಮುನ್ನ ಸಂಸತ್ತಿನಲ್ಲಿ ಈ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ 1860 ರಿಂದ 2010ರ 150 ವರ್ಷಗಳ ತೆರಿಗೆ ಅವಧಿಯ ಸಂಕೇತವಾಗಿ 5 ರು ಮೌಲ್ಯದ ನಾಣ್ಯವೂ ಬಿಡುಗಡೆಗೊಳ್ಳಲಿದೆ. ಸರಕಾರ ಮೊದಲ ಬಾರಿಗೆ 150 ರು ಮೌಲ್ಯದ ನಾಣ್ಯಗಳನ್ನು ಹೊರತಂದಿದೆ ಎಂದು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಶಾಖೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಿ, ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>150
ರು. ನಾಣ್ಯಗಳನ್ನು ಬೆಳ್ಳಿ, ತಾಮ್ರ, ನಿಕ್ಕಲ್ (ಬಿಳಿಲೋಹ) ಮತ್ತು ತವರ (ಸತು) ಸಮ್ಮಿಶ್ರಣದಲ್ಲಿ ಮಾಡಲಾಗಿದೆ. ಒಂದು ಬದಿಯಲ್ಲಿ ಸತ್ಯಮೇವ ಜಯತೆ ಮತ್ತು ಇಂಡಿಯಾ ಎಂಬ ಪದಪುಂಜವಿದ್ದು, ಮತ್ತೊಂದು ಬದಿಯಲ್ಲಿ ಚಾಣಕ್ಯನ ಚಿತ್ರ ಹಾಗೂ ಕಮಲದ ಹೂವಿನ ಮೇಲೆ ದುಂಬಿಯಿರುವ ಚಿತ್ರ ರಾರಾಜಿಸಲಿದೆ. ಐದು ರು. ನಾಣ್ಯವೂ ಇದೇ ಮಾದರಿಯಲ್ಲಿರುತ್ತದೆ.











Click it and Unblock the Notifications