ಚಾಪ್ಲಿನ್ ಮೊಮ್ಮಗನಿಗೆ ಕರ್ನಾಟಕದಲ್ಲಿ ಕಂಕಣ ಭಾಗ್ಯ!
ಕಾರವಾರ,
ಫೆ.20: ಹಾಸ್ಯ ಸಾಮ್ರಾಟ ಚಾರ್ಲಿ ಚಾಪ್ಲಿನ್‌ನ ಮೊಮ್ಮಗ ಮಾರ್ಕ್ ಜಾಪ್ಲಿನ್ (60) ಅವರು ಟೆರ್ರಾ ಟಿಫಾನಿ (52) ಅವರನ್ನು ಕರ್ನಾಟಕದ ಗೋಕರ್ಣದಲ್ಲಿ ಹಿಂದೂ ಸಂಪ್ರದಾಯದಂತೆ ಇತ್ತೀಚೆಗೆ ಮದುವೆಯಾಗಿದ್ದಾರೆ. ಇಬ್ಬರೂ ಅಮೆರಿಕನ್ನರು. id="toptextpromo">ಮಾರ್ಕ್
ಗೋಕರ್ಣದತ್ತ ಎಷ್ಟು ಆಕರ್ಷಿತರಾಗಿದ್ದಾರೆ ಎಂದರೆ ಕಳೆದ 40 ವರ್ಷಗಳಿಂದ ಅವರು ಇಲ್ಲಿಗೆ ಬಂದುಹೋಗುತ್ತಿದ್ದಾರೆ. ದಂಪತಿಗೆ ಹಿಂದೂ ಸಂಸ್ಕೃತಿ, ಕಲೆ ಎಂದರೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿಯೇ ಇಬ್ಬರನ್ನೂ ಗೋಕರ್ಣದಲ್ಲಿ ಬೆಸೆದಿದೆ. ಮಾರ್ಕ್ ಉತ್ತಮ ತಬಲಾ ಪಟುವಾಗಿದ್ದರೆ ಟೆರ್ರಾ ಹಾರ್ಮೋನಿಯಂ ನುಡಿಸುತ್ತಾರೆ. ದಾಸರ ಪದ ಮತ್ತು ಕೃಷ್ಣನ ಗೀತೆಗಳನ್ನು ಕನ್ನಡದಲ್ಲಿ ಅವರು ಸುಶ್ರಾವ್ಯವಾಗಿ ಹಾಡುತ್ತಾರೆ. id='are-slot-1' class='oiad oi-axt oiadv'> id='top-searched-articles'>ಕನ್ನಡ,
ಮಲಯಾಳಂ, ಹಿಂದಿ, ತಮಿಳು ಮತ್ತಯು ಬೆಂಗಾಲಿ ಭಾಷೆಗಳನ್ನು ಮಾರ್ಕ್ ನಿರರ್ಗಳವಾಗಿ ಮಾತನಾಡುತ್ತಾರೆ. ಸಂತ ತುಕಾರಾಂ, ಜ್ಞಾನದೇವ, ಸಮರ್ಥ ರಾಮದಾಸ ಅವರ ಕುರಿತು ಅಧ್ಯಯನ ಮಾಡಿದ್ದಾರೆ. ಅಮೆರಿಕದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ, ಪೌರಾಣಿಕ, ರಾಮಾಯಣ, ಹರಿಕಥಾ, ಸಂಕೀರ್ತನ ಮತ್ತು ಸನಾತನ ಧರ್ಮದ ಬಗ್ಗೆ ಇಬ್ಬರೂ ಅನೇಕ ವಿಚಾರಗೋಷ್ಠಿಗಳನ್ನು ನಡೆಸಿಕೊಟ್ಟಿದ್ದಾರೆ. ದಂಪತಿ ಸ್ವಾಮಿ ರಾಮದಾಸ ಮತ್ತು ಸಚ್ಚಿದಾನಂದ ಅವರ ಶಿಷ್ಯರು.











Click it and Unblock the Notifications