ವಾಸ್ತು ಲೋಕದಲ್ಲಿ ಮೀನಿನ ಹೆಜ್ಜೆಗಳು !

goldfish
ಬೆಂಗಳೂರು, ಫೆ.18: ವಾಸ್ತುಶಾಸ್ತ್ರ ಎಂಬುದು ವಸ್ತುಶಹ: ಎಲ್ಲ ರಂಗಗಳನ್ನೂ ವ್ಯಾಪಿಸುವ ಲಕ್ಷಣಗಳು ಕಾಣಿಸಲಾರಂಭಿಸಿದೆ. ಪುರಾತನ ಶಾಸ್ತ್ರವಾಗಿದ್ದರೂ ಇಂದಿನ ಆಧುನಿಕ ಯುಗದಲ್ಲೂ ಜಗ ಇದಕ್ಕೆ ಮಣೆಹಾಕುತ್ತಿರುವುದು ಸೋಜಿಗವೇ.

ಹುಬ್ಬಳ್ಳಿ-ಧಾರವಾಡದಲ್ಲಿ ಇತ್ತೀಚೆಗೆ ವಾಸ್ತುಶಾಸ್ತ್ರವು ಮತ್ಸ್ಯಶಾಸ್ತ್ರವಾಗಿ ಮನೆಮಾತಾಗಿದೆ. ಅಕ್ವೇರಿಯಂಗಳತ್ತ ಜನಸಾಗರ ಹರಿದುಬರುತ್ತಿದ್ದು, ವಾಸ್ತುಪ್ರಿಯರು 'ವಾಸ್ತು ಮತ್ಸ್ಯ'ಕ್ಕೆ ಬಲೆ ಬೀಸುತ್ತಿದ್ದಾರೆ. ದುಬಾರಿ ಬೆಲೆ ಕೊಟ್ಟು 'ವಾಸ್ತು ಮತ್ಸ್ಯ' ಖರೀದಿ ಮಾಡುತ್ತಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮತ್ಸ್ಯ ಮೇಳ ೨೦೧೧ ನಡೆಯುತ್ತಿರುವ ಸಂದರ್ಭದಲ್ಲಿಯೇ ಇಂತಹ ಸುದ್ದಿ ಹೊರಬಂದಿರುವುದು ಕಾಕತಾಳೀಯ ಎನ್ನೋಣವೇ!?

ವಾಸ್ತು ಮೀನುಗಳು 50 ರುಪಾಯಿಯಿಂದ 2 ಲಕ್ಷ ರು.ವೆಗೂ ಬಿಕರಿಯಾಗುತ್ತಿರುವುದು ವಿಶೇಷ. ಇವುಗಳನ್ನು ಮನೆ ಹಾಗೂ ಅಂಗಡಿಗಳಲ್ಲಿ ಇಟ್ಟುಕೊಳ್ಳುವುದರಿಂದ ಆರ್ಥಿಕ ಪ್ರಗತಿ ಜತೆಗೆ ಮನಸಿಗೆ ಶಾಂತಿ-ನೆಮ್ಮದಿ ಸಿಗುತ್ತದೆ ಎಂದು ಖರೀದಿದಾರರು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

ನಾನಾ ನಮೂನೆಗಳ ವಾಸ್ತು ಮೀನುಗಳು ಇವೆ. ಕೆಂಪು ಮತ್ತು ಕಪ್ಪು ಗೋಲ್ಡನ್ ಫಿಶ್ 50 ರು.ಗಳಿಂದ 1,000 ರು. ವರೆಗೂ ಮಾರಾಟವಾಗುತ್ತಿದೆ. ಅರೊವಣಾ ಫಿಶ್‌ಗಳ ಬೆಲೆ 1,500 ರು.ನಿಂದ 1.5 ಲಕ್ಷ ರು. ವರೆಗಿದೆ. ಆದರೆ ಮಾರುಕಟ್ಟೆಯಲ್ಲಿ ವಿರಳವಾಗಿದೆ. ಸಿಲ್ವರ್, ಗೋಲ್ಡನ್ ಪರ್ಲ್, ಗೋಲ್ಡನ್ ಕ್ರಾಸ್ ಬ್ಯಾಕ್, ಬಂಜಾರಾ ರೆಡ್ ಹೀಗೆ ನಾನಾ ಹೆಸರಿನ ಮೀನುಗಳಿಂದ ನಾನಾ ನಮೂನೆಯ ಎಫೆಕ್ಟ್ ಇದೆ ಎಂಬುದು ವಾಸ್ತು ಪ್ರಿಯರ ಅಚಲ ನಂಬಿಕೆ. ಈ ಫಿಶ್‌ಗಳು ಸಿಂಗಾಪುರ, ಥಾಯ್ಲೆಂಡ್, ಬ್ಯಾಂಕಾಕ್, ಮಲೇಶಿಯಾ ಅಲ್ಲದೆ ಮುಂಬಯಿ, ಕೋಲ್ಕೊತಾ, ಚೆನ್ನೈ ಮುಂತಾದ ಕಡೆಯಿಂದ ದಾಂಗುಡಿಯಿಡುತ್ತಿದೆ.

ಈ 'ವಾಸ್ತು ಮತ್ಸ್ಯ' ಎಷ್ಟು ನಂಬಿಕಾರ್ಹ ಎಂಬುದು ಸದ್ಯಕ್ಕೆ ದೃಢಪಟ್ಟಿಲ್ಲ. ಆದರೆ ಇತರೆ ಪ್ರಾಣಿ, ಪಕ್ಷಿಗಳು ದಿಢೀರನೆ ಬೇಡಿಕೆ ಕುದುರಿಸಿಕೊಂಡಿರುವ ಮಸ್ತ್ಯದ ಬಗ್ಗೆ ಮತ್ಸರ ಪಡುತ್ತಿರಬಹುದು! ಜನಮರುಳೋ ಜಾತ್ರೆ ಮರುಳೋ. ಈ ವಾಸ್ತು ಮತ್ಸ ಎಲ್ಲ ಊರಲ್ಲೂ ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+