ಸ್ವಿಸ್: ಸಾರಿ ಎಂದ ಅಡ್ವಾಣಿ, ಸೋನಿಯಾಗೆ ಕ್ಲೀನ್ ಚಿಟ್ ?

ವಿದೇಶ ಬ್ಯಾಂಕ್‌ಗಳಲ್ಲಿ ಭಾರತೀಯರು ಸಂಗ್ರಹಿಸಿಟ್ಟಿರುವ ಕಪ್ಪು ಹಣ ಮತ್ತು ಅದನ್ನು ವಾಪಸ್ ತರುವ ಕುರಿತು ಬಿಜೆಪಿ ಪಕ್ಷದ ವತಿಯಿಂದ ನೇಮಕಗೊಂಡಿದ್ದ ಸಮಿತಿಯು ವರದಿ ಸಲ್ಲಿಸಿತ್ತು. ವರದಿಯಲ್ಲಿ ಸೋನಿಯಾ ಗಾಂಧಿ ಮತ್ತು ರಾಜೀ ಗಾಂಧಿ ಅವರು ಸ್ವಿಸ್ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದಾರೆ ಎಂದು ಉಲ್ಲೇಖಿಸಲಾಗಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಸೋನಿಯಾ ಅವರು ತಾವಾಗಲಿ ಅಥವಾ ತಮ್ಮ ಪತಿ ರಾಜೀವ್ ಆಗಲಿ ಅಂತಹ ಯಾವುದೇ ಖಾತೆಗಳನ್ನು ಹೊಂದಿಲ್ಲ ಎಂದು ಅಡ್ವಾಣಿಗೆ ಪತ್ರ ಬರೆದು ಸ್ಪಷ್ಟಪಡಿಸಿದ್ದರು. ನಾಲ್ವರು ಸದಸ್ಯರ ಬಿಜೆಪಿ ತಂಡವು ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ಹೊಂದಿರುವ ಖಾತೆಗಳಲ್ಲಿ 25 ಲಕ್ಷ ಕೋಟಿ ರುಪಾಯಿ ಶೇಖರಣೆಯಾಗಿದೆ ಎಂದು ತಿಳಿಸಿತ್ತು.
ಸೋನಿಯಾ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸುವ ಮೂಲಕ ಗಾಂಧಿ ಕುಟುಂಬ ಸ್ವಿಸ್ ಬ್ಯಾಂಕ್ ಖಾತೆಗಳನ್ನು ಹೊಂದಿಲ್ಲ ಎಂದು ಅಡ್ವಾಣಿ ಷರಾ ಬರೆದಿದ್ದಾರೆಯೇ? ಈ ಗೊಂದಲವನ್ನು ದೂರಮಾಡಲು ಸೋನಿಯಾ ಬರೆದ ಪತ್ರವನ್ನು ಅಡ್ವಾಣಿ ಬಹಿರಂಗಪಡಿಸುವುದು ಉತ್ತಮ ಅಲ್ಲವೇ!?












Click it and Unblock the Notifications