ಉರ್ವ: ಬಂಜೆ ಎಂದು ಪತಿ ಕಿರುಕುಳ, ಪೊಲೀಸರಿಗೆ ದೂರು

ಬಿಜೈ ನ್ಯೂರೋಡ್ ನಿವಾಸಿ ಅನಿತಾ ಡಿಸೋಜಾ ಮತ್ತು ಪತಿಮಹಾಶಯ ಬಿಜೈ ನಿವಾಸಿ ಮರಿಯನ್ ಪಿಯುಷ್ ಅವರ ವಿವಾಹ 2009 ರ ನವೆಂಬರ್ ತಿಂಗಳಲ್ಲಿ ನಡೆದಿತ್ತು. ಈ ವೇಳೆ ಮದುವೆಯ ಖರ್ಚನ್ನು ಸಂಪೂರ್ಣವಾಗಿ ಅನಿತಾ ಇವರ ಮನೆ ಮಂದಿಯೇ ಭರಿಸಿದ್ದರು. ಮದುವೆಯಾದ ಒಂದಷ್ಟು ದಿನ ಪತಿ ಹಾಗೂ ಮನೆ ಮಂದಿ ಚೆನ್ನಾಗೇ ನೋಡಿಕೊಂಡರು. ಮದುವೆಯಾಗಿ ಒಂದು ವರುಷ ಕಳೆಯುತ್ತಿದ್ದಂತೆ, ಅನಿತಾ ಗರ್ಭ ಧರಿಸಿರಲಿಲ್ಲ ಎಂದು ನೆಪವೊಡ್ಡಿ ಮರಿಯನ್ ಪಿಯುಷ್ ಹಾಗೂ ಅವರ ಮನೆ ಮಂದಿ ದಿನನಿತ್ಯ ಅನಿತಾರನ್ನು ಹಂಗಿಸಿ, ಹಲ್ಲೆ ನಡೆಸುತ್ತಿದ್ದರು.
ತವರಿಗೆ ಹೋದ ಅನಿತಾಳನ್ನು ಹುಡುಕಿಕೊಂಡು ಬಂದ ಪಾಪಿಗಳ ಬಳಗ ಸಿಕ್ಕ ಕಡೆಯಲೆಲ್ಲಾ ನಿಂದಿಸತೊಡಗಿದ್ದರು. ಅನಿತಾ ಒಮ್ಮೆ ರಸ್ತೆ ಬದಿ ನಿಂತಿದ್ದ ವೇಳೆ ಕಾರಿನಲ್ಲಿ ಅಲ್ಲಿಗೆ ಬಂದ ಪತಿ ಮಹಾಶಯ ಅಶ್ಲೀಲವಾಗಿ ನಿಂದಿಸಿ, ವಿಚ್ಛೇದನ ನೀಡದಿದ್ದರೆ ಕಾರಿನಡಿಗೆ ಹಾಕಿ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಅನಿತಾ ದೂರಿದ್ದಾರೆ.
ತನ್ನ ಕಣ್ಣೀರಿನ ಕಥೆಯ ಸಂಪೂರ್ಣ ವಿವರಗಳನ್ನು ದೂರಿನ ರೂಪದಲ್ಲಿ ಬರೆದಿರುವ ಅನಿತಾ, ಪತಿ ಮನೆಯವರಾದ ಲೀನಾ ಡಿಸೋಜಾ, ಎವಲಿನ್ ಡಿಸೋಜಾ, ಅನಿಲ್ ಡಿಸೋಜಾ ವಿರುದ್ದ ದೈಹಿಕ, ಮಾನಸಿಕ ಹಲ್ಲೆ ನೀಡಿರುವ ಆರೋಪ ಹೊರೆಸಿ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.












Click it and Unblock the Notifications