ಮಾಲು ವಿದೇಶಿ ಪಾಲು: ಪ್ರೇಮಿಗಳ ಕೈಗೆಟುಕದ ಕೆಂಗುಲಾಬಿ

ಇಲ್ಲಿನ ಕೆಂಪು ಗುಲಾಬಿಯ ಕಥೆಯೂ ಈಗ ಅದೇ ಆಗಿದೆ. ವ್ಯಾಲೆಂಟೇನ್ ಡೇ ನಿಮಿತ್ತ ಕೆಂಪು ಗುಲಾಬಿ ಭಾರಿ ಬೇಡಿಕೆ ಪಡೆದುಕೊಂಡಿದೆ. ಯುರೋಪಿನಲ್ಲಿ ಹಿಮ ಕಾಲವಾದ್ದರಿಂದ ಪುಷ್ಪ ಕೃಷಿ ಅರಳವುದಿಲ್ಲ. ಇದರ ಲಾಭ ಪಡೆಯಲು ಸ್ಥಳೀಯ ಪುಷ್ಪ ಬೆಳೆಗಾರರು ಗುಲಾಬಿ ರಫ್ತಿಗೆ ಆದ್ಯತೆ ನೀಡಿದ್ದಾರೆ. ಇದರಿಂದ ಸ್ಥಳೀಯವಾಗಿ ಗುಲಾಬಿ ಸಾಮಾನ್ಯ ಪ್ರೇಮಿಗಳ ಕೈಗೆಟುಕದಂತಾಗಿದೆ.
ವ್ಯಾಲೆಂಟೇನ್ಸ್ ಡೇ ಪ್ರಯುಕ್ತ ಪ್ರೀತಿಯ ಕಾವು ತೀವ್ರವಾಗುತ್ತಿರುವುರಿಂದ ಗುಲಾಬಿಗೆ ರಾಜ ಮರ್ಯಾದೆ. ಬೆಂಗಳೂರು ಮತ್ತು ಪುಣೆ ರಫ್ತುದಾರರು ತಮ್ಮ ಮಾಲನ್ನು ಬಹುತೇಕ ರಫ್ತು ಮಾಡಿದ್ದಾರೆ. ನೆದರ್‌ಲ್ಯಾಂಡ್, ಜಪಾನ್ ಮತ್ತು ಸಿಂಗಾಪುರ ಮಾರುಕಟ್ಟೆಗೆ ಭಾರಿ ಲಾಭದಲ್ಲಿ ಮಾರಾಟ ಮಾಡಿದ್ದಾರೆ. ವಾರದ ಹಿಂದೆ ಮೂರ್‍ನಾಲ್ಕು ರುಪಾಯಿಗೆ ಸಿಗುತ್ತಿದ್ದ ಗುಲಾಬಿ ಬೆಲೆ ಈಗ ಐದಾರು ಪಟ್ಟು ಹೆಚ್ಚಾಗಿದೆ. ಗಮನಾರ್ಹವೆಂದರೆ ಪ್ರತಿ ವರ್ಷವೂ ಗುಲಾಬಿ ಬೇಡಿಕೆ ವೃದ್ಧಿಸುತ್ತಿದೆ. ಅದಕ್ಕೆ ತಕ್ಕಂತೆ ದರವೂ.
ಕಳೆದ ಬಾರಿ ಬೆಂಗಳೂರು ನಗರವೊಂದರಲ್ಲೇ 15 ಲಕ್ಷಕ್ಕೂ ಹೆಚ್ಚು ಗುಲಾಬಿ ವಿಕ್ರಯವಾಗಿತ್ತು. ಇಂದಿನ ವ್ಯಾಲೆಂಟೇನ್ ಆಚರಣೆ ಸಂದರ್ಭದಲ್ಲಿ 30 ಲಕ್ಷ ಹೂ ಮಾರಾಟವಾಗುವ ಅಂದಾಜಿದೆ. ಹಾಗೆಯೇ ಗುಲಾಬಿಯ ಇಂದಿನ ದರ 25 ರು. ದಾಟಿದರೂ ಅಚ್ಚರಿಯಿಲ್ಲ. ಅಂದರೆ ಒಂದು ಸುಂದರ ಹೂಗುಚ್ಛಕ್ಕೆ 1,000 ರು. ತೆರಬೇಕಾದ ಪರಿಸ್ಥಿತಿ ಪ್ರೇಮಿಗಳದ್ದಾಗಿದೆ. ಕಳೆದ ವರ್ಷ ಇದೇ ದಿನದಂದು ಒಂದು ಕಟ್ ಗುಲಾಬಿಯ ಬೆಲೆ ಗರಿಷ್ಠ ಐದಾರು ರುಪಾಯಿ ಇತ್ತು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications