ಆಪಲ್, ಗೂಗಲ್ vs ನೋಕಿಯಾ, ಮೈಕ್ರೋಸಾಫ್ಟ್

ವಿಶ್ವದ ಅಗ್ರಗಣ್ಯ ಮೊಬೈಲ್ ಉತ್ಪಾದನಾ ಸಂಸ್ಥೆಯಾಗಿರುವ ನೋಕಿಯಾ, ಸ್ಮಾರ್ಟ್ ಫೋನ್ ಗಳ ವಿಷಯದಲ್ಲಿ ಕೊಂಚ ಎಡವಿದ್ದರಿಂದ ಮಾರುಕಟ್ಟೆಯಲ್ಲಿ ತನ್ನ ಪಾಲು ಕಳೆದುಕೊಳ್ಳತೊಡಗಿದೆ. ಆಪಲ್ ನ ಐಫೋನ್, ಗೂಗಲ್ ಆಂಡ್ರ್ಯಾಡ್ ಆಧಾರಿತ ಸ್ಮಾರ್ಟ್ ಫೋನ್ ಗಳು ನಿಜಕ್ಕೂ ಸ್ಮಾರ್ಟ್ ಆಗಿ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿವೆ. ಕಳೆದ ತ್ರೈಮಾಸಿಕದಲ್ಲಿ ಸ್ಮಾರ್ಟ್ ಫೋನ್ ವಿಭಾಗದಲ್ಲಿ ನೋಕಿಯಾ ಮಾರಾಟದಲ್ಲಿ ಗಣನೀಯವಾಗಿ ಇಳಿಮುಖ ಕಂಡು ಬಂದಿದೆ. ಈ ಎಲ್ಲಾ ಕಾರಣದಿಂದ ಮೈಕ್ರೋಸಾಫ್ಟ್ ಜೊತೆ ಕೈಜೋಡಿಸುವುದು ಅನಿವಾರ್ಯ ಹಾಗೂ ಅಗತ್ಯ ಎಂದು ನೋಕಿಯಾ ಸಿಇಒ ಸ್ಟೀಫನ್ ಎಲೋಪ್ ಹೇಳುತ್ತಾರೆ.
ನೋಕಿಯಾಗೇನು ಲಾಭ?: ನೋಕಿಯಾ ತನ್ನ ಮೊಬೈಲ್ ಉತ್ಪನ್ನಗಳಲ್ಲಿ ಸರ್ಚ್ ಇಂಜಿನ್ ಬಿಂಗ್, ಆಡ್ ಸೆಂಟರ್, ಆಫೀಸ್, ಎಕ್ಸ್ ಬಾಕ್ಸ್, ಬಿಂಗ್ ಬೆಂಬಲಿತ Ovi Maps ಮುಂತಾದ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಹಕರಿಗೆ ಆಕರ್ಷಕ ರೀತಿಯಲ್ಲಿ ನೀಡಬಹುದು. ಈ ಮೂಲಕ ಮಾರುಕಟ್ಟೆಯಲಿ ಜನಪ್ರಿಯತೆ ಗಳಿಸುವ ಸಾಧ್ಯತೆಯಿದೆ.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಮೈಕ್ರೋಸಾಫ್ಟ್ ನ ವಾಣಿಜ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ಟೀಫನ್ ಎಲೋಪ್ ಅವರನ್ನು ನೋಕಿಯಾದ ನೂತನ ಸಿಇಒ ಆಗಿ ನೇಮಿಸಲಾಗಿತ್ತು. ಅದಕ್ಕೂ ಮೊದಲು ಸಿಇಒ ಆಗಿದ್ದ ಒಲ್ಲಿ ಪೆಕ್ಕ ಕಲ್ಲಸೊವೊ ರಾಜೀನಾಮೆ ನೀಡಲು ಇದೇ ಸ್ಮಾರ್ಟ್ ಫೋನ್ ಮಾರುಕಟ್ಟೆ ಪೈಪೋಟಿ ಕಾರಣವಾಗಿತ್ತು.











Click it and Unblock the Notifications