ತಲೆ ಎತ್ತಲಿದೆ ದೇಶದಲ್ಲಿನ ಅತಿದೊಡ್ಡ ಮಸೀದಿ
ತಿರುವನಂತಪುರಂ
ಫೆ 11: ಕೇರಳದ ಕೋಳಿಕೋಡ್ ನಲ್ಲಿ ದೇಶದ ಅತಿದೊಡ್ಡ ಮಸೀದಿ ತಲೆ ಎತ್ತಲಿದೆ. ಇದುವರೆಗೆ ದೇಶದಲ್ಲಿನ ಅತಿದೊಡ್ಡ ಮಸೀದಿ ಎನ್ನುವ ಕೀರ್ತಿಗೆ ಪಾತ್ರವಾಗಿರುವ ದೆಹಲಿಯ ಜಾಮಿಯಾ ಮಸೀದಿ ಇನ್ನು ಎರಡನೆ ಸ್ಥಾನಕ್ಕೆ ತಳ್ಳಲ್ಪಡುತ್ತದೆ. id="toptextpromo">40
ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಮಸೀದಿಯಲ್ಲಿ ಏಕಕಾಲಕ್ಕೆ 25 ರಿಂದ 30 ಸಾವಿರ ಜನ ಪ್ರಾರ್ಥನೆ ನಡೆಸಬಹುದು. 2.5 ಲಕ್ಷ ಚದರಡಿಯಲ್ಲಿ ಈ ಮಸೀದಿ ನಿರ್ಮಾಣವಾಗಲಿದೆ. ಈ ಮಸೀದಿಯ ಹೆಸರು ಶಾರ್-ಇ-ಮುಬಾರಕ್. id='are-slot-1' class='oiad oi-axt oiadv'> id='top-searched-articles'>12
ಎಕರೆ ಪ್ರದೇಶದಲ್ಲಿ ಮುಖ್ಯ ಕಟ್ಟಡಕ್ಕೆ ನಾಲ್ಕು ಎಕರೆ ಮೀಸಲಿಡಲಾಗಿದೆ. ಉಳಿದ ಎಂಟು ಎಕರೆಯಲ್ಲಿ ಮೊಗಲ್ ಸಾಮ್ರಾಜ್ಯವನ್ನು ನೆನಪಿಸುವ ರಮ್ಯ ಮನೋಹರ ಹೂದೋಟ, ಹುಲ್ಲುಗಾಸು ಇತ್ಯಾದಿಗಳಿಗಾಗಿ ಬಳಸಿಕೊಳ್ಳಲಾಗುವುದೆಂದು ಕಟ್ಟಡ ವಿನ್ಯಾಸಕಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.











Click it and Unblock the Notifications