ಜನಗಣತಿ ಆರಂಭ: ಮಾಹಿತಿ ನೀಡಿ ಸಹಕರಿಸಿ

ಮೊದಲನೆಯ ಹಂತವಾಗಿ ಮನೆ ಗಣತಿ ಪ್ರಕ್ರಿಯೆ ಕಳೆದ ಏಪ್ರಿಲ್‌ನಲ್ಲಿ ನಡೆದಿದೆ. ಆ ಸಂದರ್ಭದಲ್ಲಿ ಕಟ್ಟಡ, ವಾಸದ ಮನೆ ಮತ್ತು ಕುಟುಂಬಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಪ್ರಸ್ತುತ, ಜನಗಣತಿ ಕೈಗೆತ್ತಿಕೊಳ್ಳಲಾಗುತ್ತಿದೆ. 20 ದಿನಗಳ ಕಾಲ ನಡೆಯುವ ಜನಗಣತಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಗಣತಿದಾರರು ಮನೆಗೆ ಬಂದಾಗ ಅವರು ಕೇಳುವ 29 ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಪ್ರಭಾಕರ್ ಸೂಚಿಸಿದ್ದಾರೆ.
ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ನಡೆಯುತ್ತಿರುವ 7ನೇ ಜನಗಣತಿ ಇದಾಗಿದೆ. 1872ರಿಂದ ನಡೆಯುತ್ತಿರುವ ಸರಣಿಯಲ್ಲಿ 15 ನೆಯದಾಗಿದೆ.
ಮಾಹಿತಿ ಸಂಗ್ರಹಿಸುವ ಕೆಲಸವನ್ನು ಈ ಬಾರಿಯೂ ಶಿಕ್ಷಕರೇ ಮಾಡಲಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಮನೆಗಳಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ. ಜನಗಣತಿ ಕುರಿತು ಹೆಚ್ಚಿನ ಮಾಹಿತಿಗಾಗಿ ಶುಲ್ಕರಹಿತ ಸಹಾಯವಾಣಿ 1800 345 000 ಮೂಲಕ ಸಂಪರ್ಕಿಸಬಹುದು.ವೆಬ್‌ಸೈಟ್: www.censuskarnataka.gov.in












Click it and Unblock the Notifications