ಏರ್ ಇಂಡಿಯಾ ಪೈಲಟ್‌ಗಳ ಮುಷ್ಕರ ಸಾಧ್ಯತೆ
ಮುಂಬಯಿ,
ಫೆ.8- ಏರ್ ಇಂಡಿಯಾ ಪೈಲಟ್‌ಗಳು ಫೆಬ್ರವರಿ 10ರಿಂದ ಮುಷ್ಕರ ನಡೆಸುವ ಸಾಧ್ಯತೆಗಳು ಹೆಚ್ಚಾಗಿವೆ. ಹಣಕಾಸು ಕೊರತೆಯಿಂದಾಗಿ ಪೈಟಲ್‌ಗಳಿಗೆ ಜನವರಿ ತಿಂಗಳ ಸಂಬಳವನ್ನು ಫೆ. 14ಕ್ಕಿಂತ ಮುಂಚೆ ನೀಡಲಾಗದು ಎಂದು ಏರ್ ಇಂಡಿಯಾ ಮ್ಯಾನೇಜ್‌ಮೆಂಟ್ ನಿರ್ಧರಿಸಿರುವುದೇ ಇದಕ್ಕೆ ಕಾರಣವಾಗಿದೆ. id="toptextpromo">'ನಮ್ಮ
ಸಂಬಳಗಳು ಫೆ. 10ರಂದು ಬಟವಾಡೆಯಾಗಬೇಕು. ಇಲ್ಲದಿದ್ದಲ್ಲಿ ದಿಢೀರ್ ಮುಷ್ಕರ ಕೈಗೊಳ್ಳುವುದು ನಿಶ್ಚಿತ' ಎಂದು ಇಂಡಿಯನ್ ಕಮರ್ಷಿಯಲ್ ಪೈಲಟ್ಸ್ ಅಸೋಸಿಯೇಷನ್‌ನ (ICPA) ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ರಿಷಬ್ ಕಪೂರ್ ಬೆದರಿಕೆಯೊಡ್ಡಿದ್ದಾರೆ. ಏರ್ ಇಂಡಿಯಾದಲ್ಲಿ 30,000 ಉದ್ಯೋಗಿಗಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಗಮನಾರ್ಹವೆಂದರೆ,
ಏರ್ ಇಂಡಿಯಾ ಡಿಸೆಂಬರ್‌ನಲ್ಲಿ 49.48 ಕೋಟಿ ರು ಮತ್ತು ನವೆಂಬರ್‌ನಲ್ಲಿ 20.66 ಕೋಟಿ ರೂ. ಮಿಗತೆ ಹಣ ಉಳಿಕೆ ಮಾಡಿದೆ. ಏರ್ ಇಂಡಿಯಾ ಉದ್ಯೋಗಿಗಳು ಈ ಹಿಂದೆ ಪ್ರತಿ ತಿಂಗಳ ಕೊನೆಯ ದಿನ ಸಂಬಳಗಳನ್ನು ಪಡೆಯುತ್ತಿದ್ದರು. ಆದರೆ ಹಣಕಾಸು ಮುಗ್ಗಟ್ಟಿನಿಂದಾಗಿ ಪ್ರತಿ ತಿಂಗಳ 7ರಂದು ಪಡೆಯುವ ಪರಿಸ್ಥಿತಿ ಉದ್ಭವವಾಯಿತು. ಅದೀಗ 14ಕ್ಕೆ ಮುಂದೆ ಹೋಗಿದೆ. ಅಂದಹಾಗೆ, ಏರ್ ಇಂಡಿಯಾ ವಾರ್ಷಿಕ ಒಟ್ಟು 30,000 ಕೋಟಿ ರು. ಸಂಬಳಗಳನ್ನು ನೀಡುತ್ತಿದೆ.











Click it and Unblock the Notifications