ಸೈಕಲ್ ತುಳಿಯಿರಿ, ಮೊಬೈಲ್ ಚಾರ್ಜ್ ಮಾಡಿ

ಮುಂದಿನ ತಿಂಗಳು ಅಂದ್ರೆ ಮಾರ್ಚ್ ನಲ್ಲಿ ಇದು ಮಾರುಕಟ್ಟೆಯಲ್ಲಿರುತ್ತದೆ. ಇದನ್ನು ಅಳವಡಿಸುವುದು ತುಂಬಾ ಸುಲಭ. ನಿಮ್ಮ ಬೈಸಿಕಲ್ ನ ಎದುರಿನ ಚಕ್ರಕ್ಕೆ ನೋಕಿಯಾ ಬೈಸಿಕಲ್ ಚಾರ್ಜರ್ ಜೋಡಿಸಬೇಕು. ನೀವು ಎಷ್ಟು ವೇಗದಲ್ಲಿ ಸೈಕಲ್ ಹೊಡಿತಿರಿ ಅನ್ನೊದರ ಮೇಲೆ ಜಾರ್ಜಿಂಗ್ ದಕ್ಷತೆ ಅವಲಂಬಿಸಿದೆ. ಅದರೆ ಅದಕ್ಕಾಗಿ ನೀವು ಏದುಸಿರು ಬಿಡುತ್ತ ಪೆಡಲ್ ತುಳಿಯುವ ಅಗತ್ಯವಿಲ್ಲ. ಪ್ರತಿಗಂಟೆಗೆ 6 ಕಿ.ಮೀ. ವೇಗದಲ್ಲಿ 10 ನಿಮಿಷ ಪೆಡಲ್ ತುಳಿದರೆ ಸುಮಾರು 28 ನಿಮಿಷ ಟಾಕ್ ಟೈಮ್ ಗೆ ಬೇಕಾದಷ್ಟು ಮೊಬೈಲ್ ಚಾರ್ಜಾಗುತ್ತದೆ. ನೋಕಿಯಾ ಬೈಸಿಕಲ್ ಚಾರ್ಜರ್ ಕಿಟ್ ನಲ್ಲಿ ಒಂದು ಚಾರ್ಜರ್, ಡೈನಾಮೊ ಬಾಟಲ್ ಮತ್ತು ಫೋನ್ ಹೋಲ್ಡರ್ ದೊರಕುತ್ತದೆ.
ನೋಕಿಯಾ ಬೈಸಿಕಲ್ ಚಾರ್ಜರ್ ಫೀಚರ್ ಗಳು
* ಬೈಸಿಕಲ್ ಪೆಡಲ್ ತುಳಿಯುತ್ತ ಮೊಬೈಲ್ ಚಾರ್ಜ್ ಮಾಡಬಹುದು.
* ಬೈಸಿಕಲ್ ವೇಗ ಪ್ರತಿಗಂಟೆಗೆ ಕನಿಷ್ಠ 6 ಕಿ.ಮೀ. ಇರುವಾಗ ಚಾರ್ಜ್ ಆರಂಭ. ಗರಿಷ್ಠ 50 ಕಿ.ಮೀ.ಗೆ ಮುಟ್ಟಿದಾಗ ಚಾರ್ಜ್ ಆಫ್ ಆಗುತ್ತದೆ.
* ಬೈಸಿಕಲ್ ವೇಗ ಸುಮಾರು 12 ಕಿ.ಮೀ.ಯಲ್ಲಿರುವಾಗ ನಾವು ಮನೆಯಲ್ಲಿ ಕರೆಂಟ್ ನಲ್ಲಿ ಚಾರ್ಜ್ ಮಾಡುವಷ್ಟೇ ಬೇಗ ಚಾರ್ಜ್ ಆಗುತ್ತದೆ.
* ಕೇಬಲ್ ಟೈ, ನಟ್ ಮತ್ತು ಬೋಲ್ಟ್ ಸಹಾಯದಿಂದ ಇದನ್ನು ಸೈಕಲ್ ಗೆ ಸುಲಭವಾಗಿ ಅಳವಡಿಸಬಹುದು.
* ಬೈಸಿಕಲ್ ತುಳಿಯುತ್ತ ಮೊಬೈಲ್ ಸಂಗೀತ ಕೇಳಬಹುದು.
* ಮೊಬೈಲ್ ಫೋನ್ ಪರದೆಯಲ್ಲಿ ಚಾರ್ಜ್ ಆಗುತ್ತಿದೆಯೇ ಇಲ್ಲವೋ ಎಂದು ಪರಿಶೀಲಿಸುತ್ತಿರಬಹುದು.
* ಚಾರ್ಜರ್ ನಿಂದ ಮೊಬೈಲ್ ಕೆಳಗೆ ಬೀಳದಂತೆ ನೋಡಿಕೊಳ್ಳಲು ಒಂದು ಪುಟ್ಟ ಬ್ಯಾಗ್ ಭದ್ರತೆ ನೀಡುತ್ತದೆ.
In English
ಎಲ್ಲ ಓಕೆ. ಆದರೆ ಇದರ ದರ ಮಾತ್ರ ಸ್ವಲ್ಪ ಜಾಸ್ತಿ ಅನುವುದರಲ್ಲಿ ಸಂಶಯವೇ ಇಲ್ಲ. ಭಾರತದಂತಹ ದೇಶಗಳಲ್ಲಿ ಹೆಚ್ಚಿನವರು ಕಡಿಮೆ ದರದ, ಅಥವಾ 5 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ ಮೊಬೈಲ್ ಫೋನ್ ಗಳಿಗೆ ತೃಪ್ತಿಪಟ್ಟುಕೊಳ್ಳುತ್ತಾರೆ. ನೋಕಿಯಾ ಬೈಸಿಕಲ್ ಚಾರ್ಜರ್ ದರ 1,499 ರೂಪಾಯಿ. ಇದೇ ದರಕ್ಕೆ ನೋಕಿಯಾ 1616, ಎಕ್ಸ್1 ಮುಂತಾದ ಹೊಸ ಮೊಬೈಲ್ ಖರೀದಿಸಬಹುದು ಅಲ್ಲವೇ? ದೇಶದ ಪ್ರಮುಖ ಮೊಬೈಲ್ ಫೋನ್ ತಯಾರಿಕಾ ಕಂಪನಿ ನೋಕಿಯಾ ಇಂತಹ ಉತ್ಪನ್ನ ತಂದಿರುವುದು ಕೆಲವರಿಗಾದರೂ ಇಷ್ಟವಾಗಬಹುದು.












Click it and Unblock the Notifications