ಆರ್ಎಂಪಿ ಅಧಿಕಾರಿಗಳಿಗೆ ಮಹಿಳೆರಿಂದ ಚಪ್ಪಲಿ ಸೇವೆ

ಭಾನುವಾರ ರಾತ್ರಿ 7.30ರ ಸುಮಾರಿಗೆ ಸಭೆ ಆರಂಭವಾಗಬೇಕಿತ್ತು. ಅದೇ ವೇಳೆಗೆ ಕುವೆಂಪು ಕಲಾಕ್ಷೇತ್ರದೊಳಗೆ ಬಂದು ಏಕಾಏಕಿ ವೇದಿಕೆಗೆ ನುಗ್ಗಿದ 50ಕ್ಕೂ ಹೆಚ್ಚು ಮಹಿಳೆಯರು 'ನಮಗೆ ಆರ್‌ಎಂಪಿ ಸಂಸ್ಥೆ ಮತ್ತು ಅದರ ಏಜೆಂಟರಿಂದ ವಂಚನೆಯಾಗಿದೆ. ಏಜೆಂಟರು ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ" ಎಂದು ಆರೋಪಿಸಿ ಹೂ ಕುಂಡಗಳನ್ನು ಒಡೆದು ಹಾಕಿದರು.
ಚಪ್ಪಲಿ vs ಶೂ: ಏಜೆಂಟರು ಮತ್ತು ಮಹಿಳೆಯರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.. ಮಹಿಳೆಯರು ಏಜೆಂಟರಿಗೆ ಚಪ್ಪಲಿ ತೋರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇದಕ್ಕೆ ಪ್ರತಿಯಾಗಿ ಏಜೆಂಟರು ಮಹಿಳೆಯರ ಗುಂಪಿಗೆ ಶೂಗಳನ್ನು ತೋರಿಸಿ ಅವರೊಂದಿಗೆ ವಾಗ್ವಾದ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಏಜೆಂಟರು ಮತ್ತು ಮಹಿಳೆಯರ ನಡುವೆ ಮಾತುಕತೆ ನಡೆಸಿ ಪರಿಸ್ಥಿತಿ ಶಾಂತಗೊಳಿಸಿದರು. ಅಲ್ಲದೇ ಆರ್.ಎಂ.ಪಿ ಸಂಸ್ಥೆಯ ಕೆಲವು ಏಜೆಂಟರನ್ನು ವಶಕ್ಕೆ ತೆಗೆದುಕೊಂಡರು. ಬಿಡದಿ, ರಾಮನಗರ, ಕನಕಪುರ ಮುಂತಾದ ಗ್ರಾಮಾಂತರ ಪ್ರದೇಶಗಳ ಕಡೆಯಿಂದ ಬಂದಿದ್ದ ಮಹಿಳೆಯರು ಆರ್ ಎಂಪಿ ವಿರುದ್ಧ ವಂಚನೆ ಆರೋಪ ಹೊರೆಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೆಂಟ್ರಲ್ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. [ವಂಚನೆ]












Click it and Unblock the Notifications