ರಾಷ್ಟ್ರೀಯ ಉದ್ಯಾನವನಗಳ ವೀಕ್ಷಣೆ ತುಟ್ಟಿ!

Tiger
ಬೆಂಗಳೂರು, ಜ. 28 : ರಜೆಯಲ್ಲಿ ಮಜಾ ಉಡಾಯಿಸಲು ರಾಷ್ಟ್ರೀಯ ಉದ್ಯಾನವನ ಹಾಗೂ ವನ್ಯಜೀವಿ ಧಾಮಗಳಿಗೆ ಭೇಟಿ ನೀಡುವ ಜನರಿಗೊಂದು ಕಹಿ ಸುದ್ದಿಯೊಂದನ್ನು ಅರಣ್ಯ ಇಲಾಖೆ ಘೋಷಣೆ ಮಾಡಿದೆ. ರಾಜ್ಯದಲ್ಲಿರುವ ಉದ್ಯಾನವನ ಪ್ರವೇಶ ಧನ ಇದೀಗ ಬಲು ತುಟ್ಟಿಯಾಗಿದ್ದು, ಹಾಲಿ ದರಕ್ಕಿಂತ ಮೂರು ಪಟ್ಟು ಏರಿಕೆ ಮಾಡಿದೆ. ಉದ್ಯಾನವನ ವೀಕ್ಷಣೆಯ ನೂತನ ದರ ಫೆಬ್ರವರಿ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಇಲಾಖೆ ಹೇಳಿದೆ.

ನಾಡಿನ ಅರಣ್ಯ ಸೌಂದರ್ಯ ಸವಿಯಲು ಬಯಸುವ ಪ್ರವಾಸಿಗರ ಮೇಲೆ ಭಾರಿ ಪ್ರಮಾಣದ ಹೊರೆ ಹಾಕಲು ಅರಣ್ಯ ಇಲಾಖೆ ಸಜ್ಜಾಗಿದೆ. ಅರಣ್ಯಪ್ರವೇಶ, ಸಫಾರಿ ಹಾಗೂ ವಾಹನ ಶುಲ್ಕ. ಈ ಮೂರು ವಿಭಾಗಗಳಲ್ಲೂ ಮೂರು ಪಟ್ಟು ದರ ಹೆಚ್ಚಳ ಮಾಡಲು ಅರಣ್ಯಇಲಾಖೆ ನಿರ್ಧರಿಸಿದೆ. ರಾಜ್ಯದಲ್ಲಿರುವ ಯಾವುದೇ ಅರಣ್ಯಕ್ಕೆ ಸುಮ್ಮನೆ ವ್ಯಕ್ತಿಯೊಬ್ಬ ಭೇಟಿ ನೀಡಿ ಒಂದು ಸುತ್ತು ಸಫಾರಿ ಹೋಗಿ ಬರಲು 1000 ರುಪಾಯಿಯನ್ನು ಅರಣ್ಯ ಇಲಾಖೆಗೆ ವಿವಿಧ ಶುಲ್ಕ ರೂಪದಲ್ಲಿ ತೆರಬೇಕಾಗುತ್ತದೆ.

ಪ್ರವಾಸಿಗರ ಜೇಬಿಗೆ ಕತ್ತರಿ ಹಾಕಿರುವ ಅರಣ್ಯ ಇಲಾಖೆ ಗುರುವಾರ ಈ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಿದೆ. ಪ್ರವಾಸಿಗರು ಅರಣ್ಯ ಪ್ರವೇಶಕ್ಕೆ 200 ರುಪಾಯಿಗಳನ್ನು ನೀಡಬೇಕು. ಇದಲ್ಲದೆ, ವಾಹನ ಪ್ರವೇಶ ಶುಲ್ಕ, ಸಫಾರಿ ಶುಲ್ಕಗಳನ್ನು ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಲಾಗಿದೆ ಹಾಗೂ ಅರಣ್ಯ ಇಲಾಖೆಯ ಅತಿಥಿ ಗೃಹಗಳ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಈ ದರ ಪರಿಷ್ಕರಣೆಯಿಂದ ಅರಣ್ಯ ಇಲಾಖೆಯು 15 ಕೋಟಿ ರುಪಾಯಿ ಆದಾಯವನ್ನು ನಿರೀಕ್ಷಿಸಿದೆ. ಪ್ರಸ್ತುತ 7 ಕೋಟಿ ರುಪಾಯಿಗಳ ಆದಾಯವನ್ನು ಹೊಂದಿದೆ.

ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅರಣ್ಯ ಇಲಾಖೆ ಮುಖ್ಯ ಸಂರಕ್ಷಣಾಧಿಕಾರಿ ಬಿ ಕೆ ಸಿಂಗ್, ಕಳೆದ ನಾಲ್ಕು ವರ್ಷಗಳಿಂದ ದರ ಪರಿಷ್ಕರಣೆ ಮಾಡಿರಲಿಲ್ಲ. ಹೀಗಾಗಿ ಈ ಬಾರಿ ದರ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ. ವಿದೇಶಕ್ಕೆ ಹೋಲಿಸಿದರೆ ಇದು ದೊಡ್ಡ ಪ್ರಮಾಣದ ಏರಿಕೆಯೇನಲ್ಲ. ಪ್ರವಾಸಿಗರು ಪ್ರವಾಸಕ್ಕಾಗಿ ಹೆಚ್ಚು ಹಣ ವ್ಯಯ ಮಾಡುತ್ತಿದ್ದರು. ಇನ್ಮಂದೆ ಅರಣ್ಯಕ್ಕಾಗಿ ಹೆಚ್ಚಿನ ಹಣ ನೀಡಬೇಕಾಗುತ್ತದೆ ಎಂದು ದರ ಏರಿಕೆಯನ್ನು ಸಿಂಗ್ ಸಮರ್ಥಿಸಿಕೊಂಡಿದ್ದಾರೆ.

ಪರಿಷ್ಕೃತ ದರ : ಎಲ್ಲಿ ಎಷ್ಟು?

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಭಾರತೀಯರಿಗೆ ವಿದೇಶಿಯರಿಗೆ
ಪ್ರವೇಶ ಧನ (ದಿನಕ್ಕೆ) 200 ರುಪಾಯಿ 1,000 ರುಪಾಯಿ
ಸಫಾರಿ (ಇಲಾಖಾ ಬಸ್ಸಿಗೆ) 100 ರುಪಾಯಿ 100 ರುಪಾಯಿ
ಸಫಾರಿ (ಇಲಾಖಾ ಜೀಪಿಗೆ) 200 ರುಪಾಯಿ 200 ರುಪಾಯಿ

ಖಾಸಗಿ ವಾಹನಗಳಿಗೆ

ಜೀಪು, ಕಾರು 1,000 ರುಪಾಯಿ 1000 ರುಪಾಯಿ
ಲಘು ವಾಹನ 1050 ರುಪಾಯಿ 1,500 ರುಪಾಯಿ
ಬಸ್, ಟ್ರಕ್ 1,600 ರುಪಾಯಿ 2,500 ರುಪಾಯಿ
ಗೈಡ್ ಫೀ 200 ರುಪಾಯಿ 500 ರುಪಾಯಿ
ಆನೆ ಸವಾರಿ 300 ರುಪಾಯಿ 300 ರುಪಾಯಿ
ಹ್ಯಾಂಡಿ ಕ್ಯಾಮ್ 1,000 ರುಪಾಯಿ 1,000 ರುಪಾಯಿ
ವಿಡಿಯೋ ಚಿತ್ರೀಕರಣ 300 ರುಪಾಯಿ 1,000 ರುಪಾಯಿ

ಬಂಡೀಪುರ ನ್ಯಾಷನಲ್ ಪಾರ್ಕ್

ಪ್ರವೇಶ ಧನ 200 ರುಪಾಯಿ 1,000 ರುಪಾಯಿ
ಮಯೂರ ಅತಿಥಿ ಗೃಹ 1,000 ರುಪಾಯಿ 2,000 ರುಪಾಯಿ
ಇತರೆ ರೂಮ್ ಗಳು 1,000 ರುಪಾಯಿ 2,000 ರುಪಾಯಿ
ಇತರೆ ಕಾಟೇಜ್ 1,000 ರುಪಾಯಿ 2,000 ರುಪಾಯಿ

ರಂಗನತಿಟ್ಟು ಪಕ್ಷಿಧಾಮ

ಪ್ರವೇಶ ಧನ 150 ರುಪಾಯಿ 300 ರುಪಾಯಿ
ಫೋಟೋಗ್ರಫಿ
ಹ್ಯಾಂಡಿಕ್ಯಾಮ್ 1,000 ರುಪಾಯಿ 1,000 ರುಪಾಯಿ
ವಿಡಿಯೋ ಚಿತ್ರೀಕರಣ 1,000 ರುಪಾಯಿ 1,000 ರುಪಾಯಿ
ಬೋಟ್ ರೈಡ್ 50 ರುಪಾಯಿ 300 ರುಪಾಯಿ
ವಿಶೇಷ ಬೋಟ್ ರೈಡ್ 1,000 ರುಪಾಯಿ 2,000 ರುಪಾಯಿ

ಗೋಪಾಲಸ್ವಾಮಿ ಬೆಟ್ಟ(ಬಂಡೀಪುರ)

ಬೈಕ್ ಪಾರ್ಕಿಂಗ್ ಫೀ 100 ರುಪಾಯಿ
ಜೀಪು, ಕಾರು ಪಾರ್ಕಿಂಗ್ ಫೀ 500 ರುಪಾಯಿ
ಲಘು ವಾಹನಗಳ ಫೀ 1,000 ರುಪಾಯಿ
ಬಸ್ ಗಳು ಪಾರ್ಕಿಂಗ್ ಫೀ 2,000 ರುಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+