ಕರ್ನಾಟಕದಲ್ಲಿ 3ಜಿ ಸೇವೆ ಆರಂಭಿಸಿದ ಏರ್ ಟೆಲ್

"3ಜಿ ಸೇವೆಯನ್ನೂ ಮುಂದಿನ ಮಾರ್ಚ್ ವೇಳೆಗೆ ದೇಶದ 13 ವೃತ್ತಗಳಿಗೂ ವಿಸ್ತರಿಸಲಾಗುವುದು ಎಂದು ಕಂಪನಿ ಹೇಳಿದೆ. ಕಂಪನಿಯು ಈಗ ದೇಶದ 22 ದೂರಸಂಪರ್ಕ ವೃತ್ತಗಳಲ್ಲಿ 13 ವೃತ್ತಗಳಲ್ಲಿ ಕಾರ್ಯ ನಿರ್ವಹಿಸಲು ಪರವಾನಿಗೆ ಪಡೆದಿದೆ. ಕಂಪನಿಯು ಹೈ ಸ್ಪೀಡ್ ಪಾಕೇಟ್ ಆಕ್ಸೆಸ್(ಎಚ್ ಎಸ್ ಪಿ ಎ) ನೆಟ್ ವರ್ಕ್ ಇನ್ ಸ್ಟಾಲ್ ಮಾಡಲು ಕಂಪನಿಯು ಎರಿಕ್ ಸನ್, ನೋಕಿಯಾ ಸೀಮನ್ಸ್ ನೆಟ್ ವರ್ಕ್ ಮತ್ತು ಹ್ಯುವೈ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಕಳೆದ ವರ್ಷ, ಡೊಕೊಮೊ ಮತ್ತು ರಿಲಾಯೆನ್ಸ್ ಕಮ್ಯುನಿಕೇಷನ್ ದೇಶದಲ್ಲಿ 3ಜಿ ಸೇವೆಯನ್ನು ನೀಡಲು ಆರಂಭಿಸಿತ್ತು. ದೇಶೀಯ ಕಂಪನಿಗಳಾದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಕೂಡ ದೇಶದಲ್ಲಿ ಈಗಾಗಲೇ 3ಜಿ ಸೇವೆ ನೀಡುತ್ತಿವೆ. ಮುಂದಿನ ಫೆಬ್ರವರಿಯಲ್ಲಿ 3 ಜಿ ಸೇವೆ ಆರಂಭಿಸುವುದಾಗಿ ವೋಡಾಫೋನ್ ಈ ಹಿಂದೆ ಹೇಳಿತ್ತು.
ಮುಂದಿನ ತಲೆಮಾರಿನ ಮೊಬೈಲ್ ಸಂವಹನ ತಂತ್ರಜ್ಞಾನವು ಮಲ್ಟಿಮೀಡಿಯಾ ಸೇವೆಗಳನ್ನು ಹೆಚ್ಚು ಆಪ್ತವಾಗಿಸುತ್ತದೆ. ಅಂದರೆ ಬ್ರಾಡ್ ಬ್ಯಾಂಡ್ ಮತ್ತು ಇಂಟರ್ ನೆಟ್ ಆಕ್ಸೆಸ್ ವೇಗವೂ ಜಾಸ್ತಿಯಾಗಲಿದ್ದು, ಕೈನಲ್ಲಿರುವ ಪುಟ್ಟ ಹ್ಯಾಂಡ್ ಸೆಟ್ ನಿಂದ ಇಂಟರ್ನೆಟ್ ವಿಡಿಯೋ ಕೂಡನೋಡಬಹುದಾಗಿದೆ.
ನೂತನ 3ಜಿ ತಂತ್ರಜ್ಞಾನದಿಂದಾಗಿ ನೀವು ವಿಡಿಯೋ ಕರೆಗಳನ್ನು ಮಾಡಬಹುದಾಗಿದೆ. ಮೊಬೈಲ್ ನಲ್ಲಿ ಲೈವ್ ಟಿವಿ ಕೂಡ ನೋಡಬಹುದಾಗಿದೆ. ಹಳೆಯ ಬಫರಿಂಗ್ ಇಂಟರ್ ನೆಟ್ ಗೆ ಬದಲಾಗಿ ನೂತನ 3ಜಿ ಮೊಬೈಲ್ ನಿಂದ ಹೈ ಸ್ಪೀಡ್ ಇಂಟರ್ ನೆಟ್ ಆಕ್ಸೆಸ್ ಮಾಡಬಹುದಾಗಿದೆ.
ದುಡ್ಡೆಷ್ಟು: ಬೆಂಗಳೂರಿನಲ್ಲಿ ಸುಮಾರು 21 ಎಂಬಿಪಿಎಸ್ ಗಿಂತ ಹೆಚ್ಚು ಸಪೋರ್ಟ್ ಮಾಡುವ 3ಜಿ ಸೇವೆಯು ಜನವರಿ 25ರಂದು ಆರಂಭವಾಗಲಿದೆ. ನೂತನ ಸೇವೆಯು ಗಂಟೆ ಆಧರಿತ ಪ್ಲಾನ್ ಮತ್ತು ಡಾಟಾ ಬಳಕೆ ಆಧರಿತ ಪ್ಲಾನ್ ಎಂಬ ಎರಡು ಆಯ್ಕೆಗಳಲ್ಲಿ ದೊರಕಲಿದ್ದು ಟಾರೀಫ್ ದರಗಳು ಇವೆರಡಕ್ಕೆ ಭಿನ್ನವಾಗಿವೆ.
ಟೆಕ್ ಬೆಂಗಳೂರು ಪ್ರಕಾರ ಇದರಲ್ಲಿ ಅನ್ ಲಿಮಿಟೆಡ್ ಪ್ಲಾನ್ ಆಯ್ಕೆಯಿಲ್ಲ. 1.25 ಜಿಬಿ ಬಳಕೆಗೆ ನಿಮಗೆ 650 ರೂಪಾಯಿ ಚಾರ್ಜ್ ಬೀಳಲಿದೆ. ಅದಕ್ಕಿಂತ ಹೆಚ್ಚು ಜಿಬಿ ಬಳಕೆಗೆ ಗರಿಷ್ಠ 2 ಸಾವಿರ ರೂಪಾಯಿ ಆಗಲಿದೆ. ಅದಕ್ಕಿಂತಲೂ ಹೆಚ್ಚು ಬಳಕೆ ಮಾಡಿದರೆ ಸ್ಪೀಡ್ 128 ಕೆಬಿಪಿಎಸ್ ಆಗಲಿದ್ದು ದರ ಕೂಡ ಹೆಚ್ಚಾಗಲಿದೆ.
ಇದರೊಂದಿಗೆ ಏರ್ ಟೆಲ್ "ಇಂಟರ್ ನೆಟ್ ಯೂಸೆಜ್ ಕ್ಯಾಲ್ಕ್ಯುಲೇಟರ್" ಅನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು ಇದರಿಂದ ಗ್ರಾಹಕರಿಗೆ ಸೂಕ್ತ ಪ್ಲಾನ್ ಆಯ್ಕೆ ಮಾಡಿಕೊಳ್ಳಲು ನೆರವಾಗಲಿದೆ.
ಬ್ಯಾಂಡ್ ವಿಡ್ತ್ ಪ್ಲಾನ್ ದರ:
* 10 ಎಂಬಿಗೆ 9 ರೂಪಾಯಿ, ಒಂದು ದಿನದ ವ್ಯಾಲಿಡಿಟಿ
* 65 ಎಂಬಿಗೆ 60 ರೂಪಾಯಿ, 3 ದಿನದ ವ್ಯಾಲಿಡಿಟಿ
* 100 ಎಂಬಿಗೆ 103 ರೂಪಾಯಿ., 30 ದಿನದ ವ್ಯಾಲಿಡಿಟಿ
* 250 ಎಂಬಿಗೆ 200 ರೂಪಾಯಿ, 30 ದಿನದ ವ್ಯಾಲಿಡಿಟಿ
*600 ಎಂಬಿಗೆ 450 ರೂಪಾಯಿ, 30 ದಿನದ ವ್ಯಾಲಿಡಿಟಿ
* 2ಜಿಬಿಗೆ 750 ರೂಪಾಯಿ, 30 ದಿನದ ವ್ಯಾಲಿಡಿಟಿ
ಇದಲ್ಲದೇ ಗ್ರಾಹಕರು ಹ್ಯುವೈ ಇತ್ಯಾದಿ ಕಂಪನಿಗಳ 3ಜಿ ಡಾಟಾ ಕಾರ್ಡ್ ಕೂಡ ಬಳಕೆ ಮಾಡಬಹುದು. ಈ ಕಾರ್ಡ್ ಗಳು 3.6 ಮತ್ತು 7.2 ಎಂಬಿಪಿಎಸ್ ನಲ್ಲಿ ದೊರಕುತ್ತದೆ. [3ಜಿ]












Click it and Unblock the Notifications