ವಿಪ್ರೋ ಸಾಫ್ಟ್ ವೇರ್ ಗೆ ಹೊಸ ಸಿಇಒ ಕುರಿಯನ್
ಬೆಂಗಳೂರು,
ಜ. 21: ಭಾರತದ ಸಾಫ್ಟ್ ವೇರ್ ಕ್ಷೇತ್ರದ ದಿಗ್ಗಜ ವಿಪ್ರೋ ಜಾಗತಿಕ ಐಟಿ ವ್ಯವಹಾರಗಳಿಗೆ ನೂತನ ಕಾರ್ಯ ನಿರ್ವಹಣಾಧಿಕಾರಿಯನ್ನು ನೇಮಿಸಲಾಗಿದೆ. ಟಿಕೆ ಕುರಿಯನ್ ಅವರನ್ನು ಹೊಸ ಸಿಇಒ ಎಂದು ಸಂಸ್ಥೆ ಇಂದು ಪ್ರಕಟಿಸಿದೆ. ಸಿಇಒ ಜೊತೆಗೆ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾಗಿಯೂ ಕುರಿಯನ್ ಕರ್ತವ್ಯ ನಿರ್ವಹಿಸಲಿದ್ದಾರೆ. id="toptextpromo">ಹಾಲಿ
ಜಂಟಿ ಸಿಇಒ ಗಳಾದ ಗಿರೀಶ್ ಪರಾಂಜಪೆ ಹಾಗೂ ಸುರೇಶ್ ವಾಸ್ವಾನಿ ಅವರ ಅಧಿಕಾರವಧಿ ಫೆ.1 ಕ್ಕೆ ಮುಗಿಯಲಿದೆ ಎಂದು ಸಂಸ್ಥೆ ಹೇಳಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರಂಭವಾದ ವಿಪ್ರೋ ಎಕೋ ಎನರ್ಜಿ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಕುರಿಯನ್ ಅವರು ಹೆಚ್ಚುವರಿ ಜವಾಬ್ದಾರಿಯನ್ನು ಹೊರಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆರ್ಥಿಕ
ಬಿಕ್ಕಟ್ಟು ಉಂಟಾದ ಸಂದರ್ಭಗಳಲ್ಲಿ ಸಂಸ್ಥೆಯನ್ನು ಸಮರ್ಥವಾಗಿ ಮುನ್ನೆಡೆಸಲು ಜಂಟಿ ಸಿಇಒಗಳ ಅಗತ್ಯತೆಯಿತ್ತು. ಹಾಗೂ ಕಳೆದ ಎರಡು ದಶಕಗಳಿಗೂ ಅಧಿಕ ಕಾಲದಿಂದಲೂ ವಾಸ್ವಾನಿ ಮತ್ತು ಪರಾಂಜಪೆ ಕಾರ್ಯ ನಿರ್ವಹಣೆ ಉತ್ತಮವಾಗಿತ್ತು. ಗ್ರಾಹಕರೊಡನೆ ಕುರಿಯನ್ ಅವರಿಗಿರುವ ಉತ್ತಮ ಸಂಪರ್ಕ, ಅವರ ದೂರದೃಷ್ಟಿತ್ವ ಸಂಸ್ಥೆಯ ಪ್ರಗತಿಗೆ ಪೂರಕವಾಗಲಿದೆ ಎಂದು ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಂಜಿ ಹೇಳಿಕೆ ನೀಡಿದ್ದಾರೆ. [ವಿಪ್ರೋ]











Click it and Unblock the Notifications