ಲ್ಯಾರಿ ಪೇಜ್, ಗೂಗಲ್ ಗೆ ಹೊಸ ಸಿಇಒ

ಗೂಗಲ್ ನ ಪ್ರಸಕ್ತ ಸಿಇಒ 55 ವರ್ಷ ಪ್ರಾಯದ ಎರಿಕ್ ಸ್ಮಿಡಿಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ. ಅದರಲ್ಲಿ "Day-to-day adult supervision no longer needed!" ಅಂತ ಟ್ವಿಟ್ ಮಾಡಿದ್ದಾರೆ. ಎರಿಕ್ ಅವರು ಕಂಪನಿಯ ಎಕ್ಸ್ ಕ್ಯೂಟಿವ್ ಚೇರ್ಮನ್ ಆಗಿ ನೇಮಕಗೊಳ್ಳಲಿದ್ದಾರೆ. ಇವರು ಗೂಗಲ್ ಕಂಪನಿಯ ಸಹ ಸಂಸ್ಥಾಪಕರೂ ಹೌದು.
"ಕಂಪನಿಯು ಕ್ರಿಯೇಟಿವಿಟಿ ಹೆಚ್ಚಿಸಲು ಈ ಹಾದಿಯಲ್ಲಿ ಸಾಗಿರುವುದನ್ನು ನೂತನ ಬೆಳವಣಿಗೆ ತಿಳಿಸುತ್ತದೆ. ಇದರಿಂದ ಸಿಬ್ಬಂದಿಗಳಿಗೂ ಹೊಸ ವಾತಾವರಣ ದೊರಕಲಿದ್ದು, ಕಂಪನಿಯ ಮಾರುಕಟ್ಟೆ ಮತ್ತೆ ಭೂಮ್ ಆಗಲು ನೆರವಾಗಲಿದೆ' ಎಂದು ಸಿಲಿಕಾನ್ ವ್ಯಾಲಿ ಎಂಆಂಡ್ಎ ಸಲಹಾ ಕಂಪನಿ ನ್ಯೂಫೋರ್ಥ್ ನ ಟ್ರಿಸಿಯಾ ಸಾಲಿನೆರೊ ಹೇಳಿದ್ದಾರೆ.
ಕಂಪನಿಯ ನಾಲ್ಕನೇ ತ್ರೈಮಾಸಿಕದ ಗಳಿಕೆ ಹೆಚ್ಚಾಗಿರುವ ಸುದ್ದಿಯ ಬೆನ್ನಲೇ ಈ ಪ್ರಕಟನೆ ಹೊರಬಿದ್ದಿದೆ. ಫೇಸ್ ಬುಕ್ ಮತ್ತು ಗ್ರೊಪಾನ್ ಇತ್ಯಾದಿ ಸೋಷಿಯಲ್ ನೆಟ್ ವರ್ಕಿಂಗ್ ತಾಣಗಳು ಹೆಚ್ಚು ಜನಪ್ರಿಯವಾಗುತ್ತಿರುವುದು ಕೂಡ ಈ ನಿರ್ಧಾರಕ್ಕೆ ಕಾರಣವಾಗಿರಬಹುದು. ಫೇಸ್ ಬುಕ್ ತಾಣವೂ ಟೈಟಾನ್ ಬಿಡುಗಡೆ ಮೂಲಕ ಜೀಮೇಲ್ ಅನ್ನು ಸಾಯಿಸಲು ನಿರ್ಧರಿಸಿದೆ. ನೂತನ ಸಿಇಒ ನೇಮಕಾತಿ ಮೂಲಕ ಗೂಗಲ್ ಮತ್ತೆ ಬೂಮ್ ಆಗೋ ನಿರೀಕ್ಷೆಯಿದೆ. [ಗೂಗಲ್]












Click it and Unblock the Notifications